ದಾವಣಗೆರೆ:
ನಗರದ ಕುವೆಂಪು ಕನ್ನಡ ಭವನದಲ್ಲಿ ಜ.5ರಂದು ಜನಮಿಡಿತ ದಿನಪತ್ರಿಕೆಯ ದ್ವಿ ದಶಮಾನೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪತ್ರಿಕೆಯ ಸಂಪಾದಕ ಜಿ.ಎಂ.ಆರ್.ಆರಾಧ್ಯ ತಿಳಿಸಿದರು.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವಿ ದಶಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಅಂದು ಮಧ್ಯಾಹ್ನ 2 ಗಂಟೆಗೆ “ರಾಜಕಾರಣಿಗಳಿಗೆ ವಿದ್ಯಾರ್ಹತೆ ಮತ್ತು ನಿವೃತ್ತಿ ಕಡ್ಡಾಯವಾಗಬೇಕೆ ಅಥವಾ ಬೇಡವೇ ಎಂಬ ವಿಷಯದ ಕುರಿತು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ ಹಾಗೂ ಶಿಕ್ಷಕ ಜಗನ್ನಾಥ ನಾಡಿಗೇರ್ ಅವರುಗಳ ಸಮ್ಮುಖದಲ್ಲಿ ಪರ ಮತ್ತು ವಿರುದ್ಧ ಚರ್ಚಾ ಸ್ಪರ್ಧೆ ನಡೆಯಲಿದೆ ಎಂದರು.
ಮಧ್ಯಾಹ್ನ 3 ಗಂಟೆಯಿಂದ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಉದ್ಘಾಟಿಸುವರು. ಹಿರಿಯ ಗಾಯಕಿ ನಾಡೋಜ ಬಿ.ಕೆ.ಸುಮಿತ್ರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಸ್.ಎ.ರವೀಂದ್ರನಾಥ, ಯುವ ಮುಖಂಡ ಹೆಚ್.ಎಸ್.ನಾಗರಾಜ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಭಾಗವಹಿಸಲಿದ್ದಾರೆಂದು ಅವರು ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎ.ರವೀಂದ್ರನಾಥ ಅವರುಗಳನ್ನು ನಮ್ಮೂರ ಸಿರಿ ಬಿರುದಿನೊಂದಿಗೆ ಸನ್ಮಾನಿಸಲಾಗುವುದು. ಇದೇ ವೇಳೆ ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ಅವರಿಗೆ ಜನಮಿಡಿತ ಪತ್ರಿಕಾ ಸಿರಿ, ಶಿಕ್ಷಣ ಕ್ಷೇತ್ರದ ಸಾಧಕ ಬಾಪೂಜಿ ವಿದ್ಯಾ ಸಂಸ್ಥೆಯ ಕೆ. ಇಮಾಂ, ಶ್ರೀಸಿದ್ದಗಂಗಾ ಪ್ರೌಢಶಾಲೆಯ ಡಾ.ಜಸ್ಟಿನ್ ಡಿಸೋಜಾ, ವಿಶ್ವಚೇತನ ವಿದ್ಯಾ ಸಂಸ್ಥೆಯ ಡಾ.ವಿಜಯಲಕ್ಷ್ಮಿ ಮಾಚಿನೇನಿ, ಶ್ರೀಜಯವಿಭವ ವಿದ್ಯಾಸಂಸ್ಥೆಯ ಚಿಗಡೇರಿ ವೀರಣ್ಣ, ನಿವೃತ್ತ ಶಿಕ್ಷಕ ಬಿ.ದಿಳ್ಳೆಪ್ಪ ಸೇರಿಂತೆ ಹಲವರಿಗೆ ಜನಮಿಡಿತ ಶಿಕ್ಷಣ ಸಿರಿ ಸೇರಿದಂತೆ ಇನ್ನೂ ಇತರೆ ಕ್ಷೇತ್ರಗಳ ಸಾಧಕರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ವಿವರಿಸಿದರು.
ನಂತರ ವಾಯ್ಸ್ ಆಫ್ ದಾವಣಗೆರೆ ಪ್ರಶಸ್ತಿ ವಿಜೇತರಾದ ಸಂಗೀತ ರಾಘವೇಂದ್ರ, ನವ್ಯಾ ಭಟ್, ಆರ್.ಪ್ರಶಾಂತ್, ಅಮಿತ್ ಶೇಖರ್ ಜಿಲ್ಲೆಯ ಪ್ರತಿಭಾವಂತ ಕವಿಗಳ ಕವನಗಳನ್ನು ರಾಗ ಸಂಯೋಜಿಸಿ ಸಂಗೀತದೊಂದಿಗೆ ಹಾಡುವರು. ಸಾಹಿತ್ಯಾಸಕ್ತರು, ಸಂಗೀತಾಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಸಮರ್ಥ, ಗಂಗಾಧರ ನಿಟ್ಟೂರು, ಆರ್.ಎಸ್.ತಿಪ್ಪೇಸ್ವಾಮಿ, ಅಣಬೇರು ತಾರೇಶ, ವೀರಭದ್ರಪ್ಪ ತೆಲಗಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
