ಬೆಂಗಳೂರು
ಕೊರೊನಾ ವೈರಸ್ ಹರಡುವ ಭೀತಿಯಲ್ಲಿರುವ ಸಾರ್ವಜನಿಕರನ್ನು ದುರುಪಯೋಗ ಪಡಿಸಿಕೊಂಡು ಹೆಚ್ಚಿನ ಬೆಲೆಗೆ ಇನ್ಪಾರೆಡ್ ಫೋರ್ಹೆಡ್ ಥರ್ಮಾ ಮೀಟರ್ಗಳನ್ನು ಹಾಗೂ ನಕಲಿ ಸ್ಯಾನಿಟೈಸರ್ ತಯಾರಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕುರುಬರಹಳ್ಳಿಯ ಜೆಸಿ ನಗರದ ಕೇಶವನ್ (32) ಹಾಗೂ ಶ್ರೀರಾಮಪುರದ 5ನೇ ಮುಖ್ಯರಸ್ತೆಯ ಶಿವಕುಮಾರ್ (46) ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.ಆರೋಪಿ ಕೇಶವನ್ ರಾಜಾಜಿನಗರದ ಫಸ್ಟ್ ಬ್ಲಾಕ್ನ 19ನೇ ಮುಖ್ಯರಸ್ತೆಯ ಕಟ್ಟಡವೊಂದರ 1ನೇ ಮಹಡಿಯಲ್ಲಿ ಪ್ರಜ್ವಲ್ ಸರ್ಜಿಕಲ್ ಅಂಡ್ ಸೈನ್ಟಿಫಿಕ್ ಎಂಬ ಸರ್ಜಿಕಲ್ ಅಂಗಡಿಯಲ್ಲಿ ಇನ್ಪಾರೆಡ್ ಫೋರ್ಹೆಡ್ ಥರ್ಮಾಮೀಟರ್ಗಳನ್ನು ಮಾರಾಟಾ ಮಾಡುತ್ತಿದ್ದ ಎಂದು ಅವರು ತಿಳಿಸಿದ್ದಾರೆ.
ಹಲವು ದಿನಗಳಿಂದ ಈ ಕೃತ್ಯದಲ್ಲಿ ತೊಡಗಿದ್ದ ಆರೋಪಿ ವಿರುದ್ಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಬಂಧಿತನಿಂದ 8 ಲಕ್ಷ ಮೌಲ್ಯದ 70 ಇನ್ಪಾರೆಡ್ ಫೋರ್ಹೆಡ್ ಥರ್ಮಾಮೀಟರ್ಗಳನ್ನು ಹಾಗೂ ಅದಕ್ಕೆ ಸಂಬಂಧಿಸಿದ ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ
ನಕಲಿ ಸ್ಯಾನಿಟೈಸರ್ ವಶ
ಶ್ರೀರಾಮಪುರದ 5ನೇ ಮುಖ್ಯರಸ್ತೆಯ ಕೃಷ್ಣಮಹಲ್ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿ ಐಸೋ ಪ್ರೊಫೈಲ್ ಆಲ್ಕೋಹಾಲ್ ಎಂಬ ರಾಸಾಯನಿಕ ದ್ರವ ಇನ್ನಿತರ ವಸ್ತುಗಳನ್ನು ಬಳಸಿ ನಕಲಿ ಸ್ಯಾನಿಟೈಸರ್ ತಯಾರಿಸುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ.ಬಂಧಿತ ಶಿವಕುಮಾರ್ (46) ಎಂಬ ಆರೋಪಿಯಿಂದ 180 ಲೀ ಐಸೋ ಪ್ರೊಫೈಲ್ ಆಲ್ಕೋಹಾಲ್, 10 ಲೀ ಗ್ಲಿಸರಿನ್, 65 ಲೀ.ಕ್ಲೀನರ್, 100 ಎಂಎಲ್ ಖಾಲಿ ಬಾಟಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಆರೋಪಿಯು ವಾಸದ ಮನೆಯಲ್ಲಿ 180 ಲೀ ಐಸೋ ಪ್ರೊರಫೈಲ್ ಆಲ್ಕೋಹಾಲ್ ಎಂಬ ಅಪಾಯಕಾರಿ ರಾಸಾಯನಿಕವನ್ನು ಇಟ್ಟುಕೊಂಡು ನಕಲಿ ಸ್ಯಾನಿಟೈಸರ್ ತಯಾರಿಸುತ್ತಿದ್ದ ಎಂದರು.
ರಾಸಾಯನಿಕ ದ್ರವವು ಆಕಸ್ಮಾತ್ ಬೆಂಕಿ ತಗುಲಿದ್ದಲ್ಲಿ ದೊಡ್ಡ ಪ್ರಮಾಣದ ಬೆಂಕಿ ತಗುಲುವ ಆತಂಕವಿತ್ತು. ಅಷ್ಟರಲ್ಲಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿಗಳಾದ ಕುಲ್ದೀಪ್ ಕುಮಾರ್ಜೈನ್,ರವಿಕುಮಾರ್ ಅವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








