ಆನೆ ದಂತ ಮಾರಾಟ : ಇಬ್ಬರ ಬಂಧನ..!!

ಬೆಂಗಳೂರು

    ನಾಗರಹೊಳೆ ಬಳಿ ಸತ್ತ ಆನೆಯ ದಂತಗಳನ್ನು ಕತ್ತರಿಸಿಕೊಂಡು ಬಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ನಂದಿನಿ ಲೇಔಟ್ ಪೆÇಲೀಸರು ಬಂಧಿಸಿ 2 ಆನೆ ದಂತಗಳನ್ನು ವಶಪಡಿಸಿಕೊಂಡಿದ್ದಾರೆ.ಕನಕಪುರದ ಮರಳವಾಡಿಯ ನಾಗರಾಜ್ ನಾಯಕ (42), ಹಾರೋಬೆಲೆಯ ವಸಂತ (35) ಹಾಗೂ ಜಿಗಣಿಯ ನಾಗರಾಜ (33) ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ 2 ಆನೆ ದಂತಗಳನ್ನು ವಶಪಡಿಸಿಕೊಳ್ಳಲಾಗಿದೆ.

     ಆರೋಪಿಗಳಲ್ಲಿ ನಾಗರಾಜ್ ಹಾಗೂ ನಾಗರಾಜ್ ನಾಯಕ ನಂದಿನಿ ಲೇಔಟ್ ಎಫ್‍ಟಿಐ ವೃತ್ತದ ಬಳಿ ಗೋಣಿಚೀಲದಲ್ಲಿ ಆನೆ ದಂತಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ನಂದಿನಿ ಲೇಔಟ್ ಪೆÇಲೀಸ್ ಇನ್ಸ್‍ಪೆಕ್ಟರ್ ಲೋಹಿತ್ ಮತ್ತವರ ಸಿಬ್ಬಂದಿ ಬಂಧಿಸಿದೆ.

     ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಹಾರೋಬೆಲೆಯ ನಿಡಗಲ್ ವಸಂತ ತಮಗೆ ಆನೆದಂತವನ್ನು ಮಾರಾಟ ಮಾಡಲು ನೀಡಿದ್ದಾನೆಂದು ತಿಳಿಸಿದ ಮಾಹಿತಿಯಾಧರಿಸಿ ಆತನನ್ನೂ ಬಂಧಿಸಲಾಗಿದೆ. ವಿಚಾರಣೆಯಲ್ಲಿ ಆತ ನಾಗರಹೊಳೆಯ ಬಳಿ ಮೃತಪಟ್ಟಿದ್ದ ಆನೆಯ ದಂತಗಳನ್ನು ಕತ್ತರಿಸಿಕೊಂಡು ಬಂದು ಮಾರಾಟ ಮಾಡಲು ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ.

      ವಸಂತ ಹಾಗೂ ನಾಗರಾಜ ರೈತನಾಗಿದ್ದರೆ, ನಾಗರಾಜ್ ನಾಯಕ ಗಾರೆ ಕೆಲಸ ಮಾಡುತ್ತಿದ್ದ, ಸುಲಭವಾಗಿ ಹಣ ಗಳಿಸಲು ದಂತ ಮಾರಾಟ ಕೃತ್ಯದಲ್ಲಿ ತೊಡಗಿದ್ದಾಗಿ ತಿಳಿಸಿದ್ದು, ಇವರೆಲ್ಲರೂ ಮೊದಲ ಬಾರಿಗೆ ಅಪರಾಧ ಕೃತ್ಯದಲ್ಲಿ ತೊಡಗಿರುವುದು ಪತ್ತೆಯಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ಅವರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link