ಬೆಂಗಳೂರು
ನೀರು ಸ್ವಚ್ಛಗೊಳಿಸಲು ಕಿರಿದಾದ ಬಾವಿಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಬೆಳಿಗ್ಗೆ ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಟ್ಯಾನರಿ ರಸ್ತೆಯ ಮೋದಿ ರಸ್ತೆಯಲ್ಲಿ ವಾಸಿಸುತ್ತಿದ್ದ ಉತ್ತರ ಭಾರತೀಯ ಕೂಲಿ ಕಾರ್ಮಿಕರಾದ ಚೋಟು (40) ಹಾಗೂ ಗಫೂರ್ (45) ಮೃತಪಟ್ಟವರನ್ನು ಗುರುತಿಸಲಾಗಿದೆ.
ಟ್ಯಾನರಿ ರಸ್ತೆಯ ಬಿಸ್ಮಿಲ್ಲಾ ಟೀ ಪಾಯಿಂಟ್ ಬಳಿ ಬೆಳಿಗ್ಗೆ 11ರ ವೇಳೆ ಕಲುಷಿತಗೊಂಡಿದ್ದ ಕಿರಿದಾದ ಬಾವಿಯನ್ನಿ ಸ್ವಚ್ಛಗೊಳಿಸಲು ಚೋಟು ಇಳಿದಿದ್ದಾನೆ.ಒಳಗೆ ಉಸಿರಾಟದ ತೊಂದರೆಯಿಂದ ಒದ್ದಾಡುತ್ತಿದ್ದ ಚೋಟುವನ್ನು ರಕ್ಷಿಸಲು ಹೋದ ಗಫೂರ್ ಕೂಡ ಉಸಿರುಗಟ್ಟಿ ಮೃತಪಟ್ಟಿದ್ದಾರೆ, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಜಲಮಂಡಳಿ ಅಧಿಕಾರಿಗಳು, ಪೆÇಲೀಸರು ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ.ಬಾವಿಯ ಮಾಲೀಕನ ಮೇಲೆ ಪ್ರಕರಣ ದಾಖಲಿಸಿರುವ ಕಾಡುಗೊಂಡನಹಳ್ಳಿ ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ರಾಹುಲ್ ಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
