ನಕಲಿ ನಂಬರ್ ಪ್ಲೇಟ್ ಬಳಸಿದ್ದ ಎರಡು ಬೆಂಜ್ ಕಾರು ವಶಕ್ಕೆ..!

ಬೆಂಗಳೂರು

     ಐಷಾರಾಮಿ ಕಾರು ಮರ್ಸಿಡಿಸ್ ಬೆಂಜ್‌ನ್ನು ನೋಂದಣಿ ಸಂಖ್ಯೆಯನ್ನು ಎರಡು ಕಾರುಗಳಿಗೆ ಬಳಸಿ ತೆರಿಗೆ ವಂಚನೆ ಮಾಡಿರುವುದನ್ನು ಯಶವಂತಪುರ ಸಾರಿಗೆ(ಆರ್‌ಟಿಒ)ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

     ನಗರದ ಆರ್‌ಎಂವಿ ಹಂತದ ಮೈಸೂರು ಲೈಟಿಂಗ್ ಇಂಟಿರಿಯಲ್‌ಗೆ ಸೇರಿದ ಕೆಎ-05ಎಂಡಬ್ಲ್ಯು-6201 ಅಸಲಿ ಕಾರಾಗಿದ್ದು, ಇದೇ ಕಾರಿನ ನಂಬರ್‌ನ್ನು ನಕಲಿಯಾಗಿಸಿದ್ದ ಒಂದೇ ನಂಬರಿನ 2 ದುಬಾರಿ ಕಾರುಗಳನ್ನು ವಶಪಡಿಸಿಕೊಳ್ಳಲಾ ಗಿದೆ ಮಂಡ್ಯದ ಕೆರೆಗೋಡುವಿನ ರವಿ. ಕೆ ಗೌಡ ಒಂದೇ ನಂಬರಿನ 2 ದುಬಾರಿ ಕಾರುಗಳನ್ನು ಬಳಸುತ್ತಿದ್ದನ್ನು ಪ್ರಾದೇಶಿಕ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಜ್ಞಾನೇಂದ್ರಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳು ಪತ್ತೆಹಚ್ಚಿ ಕಾರ್ಯಾಚರಣೆ ನಡೆಸಿ ಮೈಸೂರು ರಸ್ತೆಯ ಮೈಲಸಂದ್ರ ಬಳಿ ಎರಡು ಕಾರುಘಲನ್ನು ವಶಪಡಿಸಿಕೊಳ್ಳಲಾಗಿದೆ.

     ಒಂದೇ ನಂಬರ್‌ನ ಬಳಸಿ ಮರ್ಸಿಡಿಸ್ ಬೆಂಜ್ ಕಾರನ್ನು ಖರೀದಿ ಮಾಡಿದ್ದು, ಅದಕ್ಕೆ ತೆರಿಗೆಯೂ ಕಟ್ಟದೆ, ವಂಚಿಸುತ್ತಿರುವ ಖಚಿತ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಲಾಗಿದೆ.ನಕಲಿ ನಂಬರ್ ಬಳಸುತ್ತಿರುವ ಸಂಗತಿಯನ್ನು ಅಸಲಿ ಕಾರು ಮಾಲೀಕರಿಗೂ ತಂದಿದ್ದು, ಅವರೂ ದಿಗ್ಭ್ರಾಂತರಾಗಿದ್ದಾರೆ. ನಕಲಿ ಕಾರಿನ ನಂಬರ್ ಬಳಸುತ್ತಿದ್ದ ಘಟನೆಯ ಸಂಬಂಧ ದೂರು ದಾಖಲಿಸಿಕೊಂಡು ಮುಂದಿನ ತನಿಖೆಗೆ ವಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link