ಬೆಂಗಳೂರು
ಮೈಸೂರು ರಸ್ತೆ ಅಗಲೀಕರಣದ ಹಣ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ ಮೂರು ಜನ ಅಧಿಕಾರಿಗಳನ್ನು ಎಸಿಬಿ ಅಧಿಕಾರಿಗಳು ಶನಿವಾರ ಸಂಜೆ ಬಂಧಿಸಿದ್ದಾರೆ.
ರಾಮನಗರದ ಬಿಡದಿ ಹೋಬಳಿಯ ಕೆಂಚನಕುಪ್ಪೆ ಗ್ರಾಮದ ನಿವಾಸಿಯೋರ್ವರ ಜಮೀನನ್ನು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಗಲಿಕರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಶ ಪಡಿಸಿಕೊಂಡಿದ್ದು ಪರಿಹಾರ ವಿತರಸಿರಲಿಲ್ಲ.ಪರಿಹಾರ ದ ಹಣವನ್ನು ಬಿಡುಗಡೆ ಮಾಡಿಸಲು ವಿಶೇಷ ಭೂಸ್ವಾಧೀನಾಧಿಕಾರಿಗಳ ಬೆಂಗಳೂರು ಕಛೇರಿಯ ಉಪ ವಿಭಾಗ ರಾಮನಗರ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಥಮ ದರ್ಜೆ ಗುಮಾಸ್ತ ಎಸ್ ಕೇಶವ, ದ್ವಿತೀಯ ದರ್ಜೆ ಗುಮಾಸ್ತ ಪ್ರಮೋದ್ ಕುಮಾರ್ ರವರು 1,70,000 ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದು ಮುಂಗಡವಾಗಿ 1,00,000 ರೂಪಾಯಿಗಳನ್ನು ಪಡೆದು ಸೈಟ್ ಇಂಜಿನಿಯರ್ ರವರ ವಾಹನ ಚಾಲಕ ಕಿರಣ್ ಕುಮಾರ ರವರಿಗೆ ನೀಡಿದ್ದರು.
ಇದೇ ಸಮಯದಲ್ಲಿ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮೂವರು ಆರೋಪಿಗಳನ್ನು ಹಣದ ಸಮೇತ ಬಂಧಿಸಿ ತನಿಖ ನಡೆಸುತ್ತಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ