ಒಂದೇ ರಾತ್ರಿ ಎರಡು ಪೆಟ್ಟಿಗೆ ಅಂಗಡಿಗಳಲ್ಲಿ ಕಳ್ಳತನ

ಮಿಡಿಗೇಶಿ

      ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಪಂ ವ್ಯಾಪ್ತಿಯ ಲಕ್ಲೀಹಟ್ಟಿ ಗ್ರಾಮದ ಬಸ್ ನಿಲ್ದಾಣದಲ್ಲಿನ ಶಿವಣ್ಣ ಎಂಬುವವರಿಗೆ ಸೇರಿದ ಪೆಟ್ಟಿಗೆ ಅಂಗಡಿಯ ಜ್ಹಿಂಕ್‍ಶೀಟ್ ಸೀಳಿ ಅ. 17 ರಂದು ಕಳ್ಳತನ ಮಾಡಿರುವ ಬಗ್ಗೆ ವರದಿಯಾಗಿದೆ. 650 ರೂ. ನಗದು, ಸಿಗರೇಟ್ ಪ್ಯಾಕ್‍ಗಳು ಗುಟ್ಕಾ ಪಾಕೆಟ್ ಗಳು ಕಳ್ಳತನವಾಗಿರುವುದಾಗಿ ತಿಳಿದು ಬಂದಿದೆ. ಪ್ರಕರಣ ಕುರಿತು ಮಿಡಿಗೇಶಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

     ಅದೇ ದಿನ ರಾತ್ರಿ ನಲ್ಲೇಕಾಮನಹಳ್ಳಿಯ ಮೂರ್ತಿ ಎನ್ನುವವರ ಅಂಗಡಿಯಲ್ಲಿ ಎರಡೂವರೆ ಸಾವಿರ ನಗದು, ಪೆಟ್ರೋಲ್, ಸಿಗರೇಟ್ ಪ್ಯಾಕ್‍ಗಳು, ಗುಟ್ಕಾ ಪಾಕೆಟ್‍ಗಳು ಕಳ್ಳತನವಾದ ವರದಿಯಾಗಿದೆ. ಮಿಡಿಗೇಶಿ ಹೋಬಳಿಯಾದ್ಯಂತ ಬಹುತೇಕ ಎಲ್ಲಾ ಪೆಟ್ಟಿಗೆ ಅಂಗಡಿಗಳಲ್ಲಿ, ಕೆಲವು ಸಣ್ಣಪುಟ್ಟ ಹೋಟೆಲ್‍ಗಳಲ್ಲಿ ಅಕ್ರಮ ಮದ್ಯಮಾರಾಟ ಹಾಗೂ ಗುಟ್ಕಾ ಮಾರಾಟ ಮಿತಿ ಮೀರಿದೆ. ವೈನ್ಸ್ ಸ್ಟೋರ್ಸ್ ಮಾಲೀಕರಿಂದಲೆ ಪ್ರತಿದಿನ ಅಂಗಡಿಗಳಿಗೆ ಮದ್ಯ ಸರಬರಾಜು ಆಗುತ್ತಿದೆ. ಇದನ್ನು ನಿಲ್ಲಿಸುವ ತನಕ ಕಳವು ಪ್ರಕರಣಗಳು ನಿಲ್ಲುವುದಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link