ಹಾಲು ಉತ್ಪಾದಕ ಘಟಕಗಳ ಪುನರ್ ಉದ್ಘಾಟನೆ..!

ಕೊರಟಗೆರೆ

    ತುಮಕೂರು ಕೆ.ಎಂ.ಎಫ್ ನಿಂದ ಉದ್ಘಾಟನೆಗೊಂಡ ಘಟಕಗಳನ್ನು ಮತ್ತೆ ಉದ್ಘಾಟಿಸಿ, ಆಹ್ವಾನ ಪತ್ರಿಕೆಗಳಲ್ಲಿ ಸರ್ಕಾರದ ನಿಯಮದ ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಕುರಂಕೋಟೆ ಮತ್ತು ಬೆಂಡೋಣೆ ಗ್ರಾವiಗಳಲ್ಲಿ ನೂತನ ಬಿ.ಎಂ.ಸಿ ಕಟ್ಟಡಗಳನ್ನು ನ.6 ರಂದು ಉದ್ಘಾಟಿಸಲಾಗಿದೆ.

    ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರನ್ನೊಳಗೊಂಡು ಕೆಲ ನಿರ್ದೇಶಕರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಆದರೆ ತಾಲ್ಲೂಕಿನಲ್ಲಿ ಈ ಹಿಂದೆಯೇ ಸೆ. 6. 2018 ರಂದು 6 ಗ್ರಾಮಗಳಲ್ಲಿ ಬಿ.ಎಂ.ಸಿ ಘಟಕಗಳ ಉದ್ಘಾಟನೆಯನ್ನು ತಾಲ್ಲೂಕಿನ ಕ್ಯಾಮೇನಹಳ್ಳಿ ಗ್ರಾಮದಲ್ಲಿ ಸಾಮೂಹಿಕವಾಗಿ ನಡೆಸಲಾಗಿತ್ತು. ಹಾಲು ಉತ್ಪಾದಕರ ಸಂಘಗಳಲ್ಲಿ ಆರ್ಥಿಕ ಸ್ಥಿತಿ ಉಳಿಸುವ ನಿಟ್ಟಿನಲ್ಲಿ ಆರೂ ಕಡೆ ಸಮಾರಂಭ ಮಾಡದೆ ವಿದ್ಯುಕ್ತವಾಗಿ ಒಂದು ಕಡೆ ಮಾಡಲಾಗಿತ್ತು. ಆದರೆ ತಾಲ್ಲೂಕಿನ ಕುರಂಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಈ ಹಿಂದೆ ಉದ್ಘಾಟನೆಯಾಗಿದ್ದ ಘಟಕವನ್ನೆ ಮತ್ತೊಂದು ಸಾರಿ ಸಂಘದ ಖರ್ಚಿನಲ್ಲಿ ಉದ್ಘಾಟನೆ ಮಾಡಿ ರೈತರಿಗೆ ಹೊರೆ ಮಾಡಲಾಗಿದೆ ಎಂದು ಗ್ರಾಮಸ್ಥರು ಮತ್ತು ಕೆಲ ಹಾಲು ಉತ್ಪಾದಕರು ಆರೋಪಿಸಿದ್ದಾರೆ.

      ಕುರಂಕೋಟೆ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ, ಆಹ್ವಾನ ಪತ್ರಿಕೆಯಲ್ಲಿ ಸರ್ಕಾರದ ಶಿಷ್ಟಾಚಾರ ಪಾಲಿಸದೆ, ಸರ್ಕಾರಕ್ಕೂ ಸಂಘಕ್ಕೂ ಸಂಬಂಧವೆ ಇಲ್ಲ ಎಂಬಂತೆ, ತಾನೆ ಸರ್ವಾಧಿಕಾರಿ ಯಾಗಿ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ, ಹಂಚಿ, ತನಗೆ ಇಷ್ಟ ಬಂದಂತೆ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಒಟ್ಟಾರೆ ಇದರ ತಪ್ಪು ಒಪ್ಪುಗಳನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಲ ಗ್ರಾಮಸ್ಥರು ಮತ್ತು ಹಾಲು ಉತ್ಪಾದಕರು ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link