ಪೊಲೀಸರಿಂದ ಹಾಫ್ ಹೆಲ್ಮೆಟ್ ಹಾಕುವ ಸವಾರರಿಗೆ ಷಾಕ್..!

ಬೆಂಗಳೂರು

      ಹಾಫ್​​ ಹೆಲ್ಮೆಟ್​ ಹಾಕುವವರಿಗೆ ಬುದ್ದಿ ಕಲಿಸಲು ಪೊಲೀಸರು ಮುಂದಾಗಿದ್ದಾರೆ. ಇಷ್ಟು ದಿನ ಹೆಲ್ಮೆಟ್ ಧರಿಸದಿದ್ದರೆ ದಂಡ ಹಾಕುತ್ತಿದ್ದ ಪೊಲೀಸರು ಇದೀಗ ಬೇರೆಯದ್ದೇ ಕಾನೂನು ಜಾರಿಗೆ ಮುಂದಾಗಿದ್ದಾರೆ. ಇನ್ಮುಂದೆ ಹಾಫ್​​ ಹೆಲ್ಮೆಟ್​​​ ಧರಿಸಿದರೇ ಪೊಲೀಸರು ನಿಮ್ಮ ಹೆಲ್ಮೆಟನ್ನೇ ವಶಕ್ಕೆ ಪಡೆಯುತ್ತಿದ್ದಾರೆ. ಹಾಫ್​​ ಹೆಲ್ಮೆಟ್​​ ಧರಿಸುವುದರಿಂದ ಜೀವಕ್ಕೆ ಅಪಾಯವಿದೆ. ಹಾಗಾಗಿ ವಾಹನ ಸವಾರರು ಫುಲ್​​ ಹೆಲ್ಮೆಟ್​​ ಹಾಕಬೇಕೆಂದು ಪೊಲೀಸರು ಸೂಚಿಸುತ್ತಿದ್ಧಾರೆ.

      ಹಾಫ್ ಹೆಲ್ಮೆಟ್ ಬದಲಿಗೆ ಫುಲ್ ಹೆಲ್ಮೆಟ್ ಧರಿಸಬೇಕೆಂದು ಟ್ರಾಫಿಕ್​​ ಪೊಲೀಸರು ಜಾಗೃತಿ ಮೂಡಿಸುತ್ತಿದ್ಧಾರೆ. ಈಗಾಗಲೇ ಸಂಚಾರಿ ಪೊಲೀಸರು ಹಾಫ್ ಹೆಲ್ಮೆಟ್ ಆಪರೇಷನ್ ಶುರು ಮಾಡಿದ್ದು, ಸಿಕ್ಕ ಹಾಫ್ ಹೆಲ್ಮೆಟ್‍ಗಳನ್ನು ಕಸಿದುಕೊಳ್ಳುತ್ತಿದ್ದಾರೆ. ದಂಡ ತಪ್ಪಿಸಿಕೊಳ್ಳಲು ಸವಾರರು ಹಾಕುತ್ತಿದ್ದ ಹಾಫ್​​ ಹೆಲ್ಮೆಟ್​​ಗಳನ್ನು ತಿಪ್ಪೆಗೆ ಎಸೆಯುತ್ತಿದ್ದಾರೆ. ಹಾಗಾಗಿಯೇ ಇನ್ಮುಂದೆ ವಾಹನ ಸವಾರರು ಫುಲ್​​ ಹೆಲ್ಮೆಟ್​​ ಧರಿಸಬೇಕಿದೆ.

     ಎಲ್ಲ ದಾಖಲೆಗಳೂ ಸರಿಯಾಗಿದ್ದರೂ ಟ್ರಾಫಿಕ್ ಪೊಲೀಸರು ಬೇರೇನಾದರೂ ತಪ್ಪು ಹುಡುಕಿ ಎಲ್ಲಿ ದಂಡ ಹಾಕಿಬಿಡು ತ್ತಾರೋ ಎಂಬ ಭಯದಿಂದ ಅನೇಕ ಜನರು ವಾಹನವನ್ನು ರಸ್ತೆಗೆ ಇಳಿಸೋಕೂ ಹಿಂಜರಿಯುವಂತಾಗಿದೆ. ಚಪ್ಪಲಿ ಹೆಲ್ಮೆಟ್ ಧರಿಸದೇ ಇದ್ದದ್ದು, ಡಿಎಲ್​ ಇಲ್ಲದೇ ಗಾಡಿ ಓಡಿಸಿದ್ದು ಇಂತಹ ತಪ್ಪುಗಳ ಜೊತೆಗೆ ಚಪ್ಪಲಿ ಹಾಕಿಕೊಂಡು ಗಾಡಿ ಓಡಿಸಿದ್ದಕ್ಕೆ, ಲುಂಗಿ ಉಟ್ಟುಕೊಂಡು ಡ್ರೈವ್ ಮಾಡಿದ್ದಕ್ಕೆ ಹೀಗೆ ಹೊಸ ಹೊಸ ಕಾರಣಗಳನ್ನು ನೀಡಿ ಟ್ರಾಫಿಕ್ ಪೊಲೀಸರು ಸಾವಿರಾರು ರೂ. ದಂಡ ಹಾಕುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ