ಮಧುಗಿರಿ:
ವಿವಿಧೆಡೆ 6 ದ್ವಿಚಕ್ರ ವಾಹನಗಳನ್ನು ಕಳುವು ಮಾಡಿದ್ದ ಆಂಧ್ರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಧುಗಿರಿ ಪೋಲೀಸರು ಯಶಸ್ವಿಯಾಗಿದ್ದಾರೆ.
ಡಿ.23 ಭಾನುವಾರ ದಂದು ಪಟ್ಟಣದ ದಂಡಿನ ಮಾರಮ್ಮನ ದೇವಾಲಯದ ಪ್ರವೇಶ ದ್ವಾರದ ಸಮೀಪ ದ್ವಿಚಕ್ರ ವಾಹನದಲ್ಲಿ ಅನುಮಾಸ್ಪದವಾಗಿ ತಿರುಗಾಡುತ್ತಿದ್ದ ಆಂಧ್ರ ಪ್ರದೇಶದ ಗುಡಿಬಂಡೆ ಮಂಡಲ ಮಡಕಶಿರಾ ತಾಲ್ಲೂಕಿನ ಹಿರೇತಿರ್ಪಿಯ ಹೆಚ್ ಗೊಲ್ಲರಹಟ್ಟಿ ಗ್ರಾಮದ ವಾಸಿಗಳಾದ ಶ್ರೀಧರ (20) ಶಿವರಾಜ (24) ಇಬ್ಬರು ಆರೋಪಿಗಳನ್ನು ರಾತ್ರಿ ಗಸ್ತಿನಲ್ಲಿದ್ದ ಪೋಲಿಸರು ಬಂಧಿಸಿ ವಿಚಾರಣೆ ನಡೆಸಿದಾಗ 1,78,000 ರೂಪಾಯಿ ಮೌಲ್ಯ ಬೆಲೆ ಬಾಳುವ ದ್ವಿಚಕ್ರ ವಾಹನಗಳನ್ನು ವಿವಿಧೆಡೆ ಕಳವು ಮಾಡಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಮಧುಗಿರಿ ಪೋಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು ಮಧುಗಿರಿ ಪೋಲೀಸರ ಪತ್ತೆ ಕಾರ್ಯವನ್ನು ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ವಂಶಿಕೃಷ್ಣ ಅಭಿನಂದಿಸಿದ್ದಾರೆ.
ಡಿವೈಎಸ್‍ಪಿ ಎಂ ಪ್ರವೀಣ್ ನೇತೃತ್ವದಲ್ಲಿ ಸಿಪಿಐ ದಯಾನಂದ ಶೇಗುಣಸಿ, ಪಿಎಸೈ ಕಾಂತರಾಜು ಅಪರಾಧ ದಳದ ಪಿಎಸೈ ಮಂಗಳಗೌರಮ್ಮ, ಸಿಬ್ಬಂದಿಗಳಾದ ಗಣೇಶ್ ಕುಮಾರ್, ರಾಮಾಂಜನೇಯ, ಚಂದ್ರಮೋಹನ್, ಸಾಧಿಕ್ ಪಾಷ, ನಟರಾಜ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/12/24-madhugiri-02.gif)