ಉಡಸಲಮ್ಮ ದೇವಿ ಜಾತ್ರಾ ಮಹೋತ್ಸವ

ತುರುವೇಕೆರೆ:

      ತಾಲೂಕಿನ ಇತಿಹಾಸ ಪ್ರಸಿದ್ದ ಗ್ರಾಮದೇವತೆ ಉಡಸಲಮ್ಮ ದೇವಿ ಜಾತ್ರಾ ಮಹೋತ್ಸವದ ಆಶ್ಚರ್ಯ ಸಿಡಿ ಉತ್ಸವ ಪ್ರತಿ ವರ್ಷದಂತೆ ಈ ವರ್ಷವು ಸಾವಿರಾರು ಭಕ್ತರ ಸಮೂಹದಲ್ಲಿ ಶನಿವಾರ ಸಂಜೆ ನಡೆಯಿತು.

        ಪಟ್ಟಣ ಸೇರಿದಂತೆ ಅಕ್ಕ ಪಕ್ಕದ 12 ಗ್ರಾಮಗಳು ಸೇರಿ ಆಚರಿಸುವ ಈ ಜಾತ್ರೆಯ ಸಿಡಿ ಉತ್ಸವ ನೋಡಲು ಸಾವಿರಾರು ಜನ ಪಾಲ್ಗೊಳ್ಳುವುದು ವಿಶೇಷ. ಸಿಡಿ ಕಂಬಕ್ಕೇರುವ ರಾಜಣ್ಣ ಸೇರಿ 3 ಜನರು ಅಗ್ನಿವಂಶವದರಾಗಿದ್ದು ಸಿ.ಡಿ. ಪೂಜೆಗೆ ನಿಗದಿ ಪಡಿಸಿದ ದಿನದಂದು ಮುಂಜಾನೆಯೆ ಶುಚಿಭೂತರಾಗಿ ದಿನವೆಲ್ಲ ಉಪವಾಸ ವ್ರತದಲ್ಲಿರಬೇಕು ಸಿ.ಡಿ ಆಡಲು ಹೊರಡುವ ಮುನ್ನಾ ತಮ್ಮ ಮನೆಯಲ್ಲಿ ದೇವಿಗೆ ಪೂಜೆ ಸಲ್ಲಿಸಿ ಮಂಗಳವಾಧ್ಯ ಮೇಳಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮರೆವಣಿಗೆಯ ಮೂಲಕ ಉಡಸಲಮ್ಮ ದೇವಾಲಯದ ಅವರಣಕ್ಕೆ ಕರತಂದು ಸಿಡಿ ಕಂಬದ ಎದುರಿನ ಮಂಟಪದಲ್ಲಿ ಕೂರಿಸಿ ಉಯ್ಯಾಲೊತ್ಸವ ಮಾಡಲಾಗುತ್ತದೆ.

        ನಂತರ ಸಿಡಿ ಪ್ರಾರಂಬವಾಗಿ ಸಿಡಿ ಹಾಡುವವರು ಮುಗಿಲೆತ್ತರಕ್ಕೆ ಚಾಚಿದ ಕಂಬದ ತುದಿಗೆ ಆಳವಡಿಸಲಾದ ಸಿ.ಡಿ.ಯ ಕಂಬಕ್ಕೆ ವ್ಯಕ್ತಿಯನ್ನು ಹಗ್ಗದಿಂದ ಬೆನ್ನಿಗೆ ಕಟ್ಟಿ ಸ್ಥಿರ ಕಂಬದ ಸುತ್ತ ತಿರುಗಿಸಲಾಗುತ್ತದೆ. ಒಬ್ಬರಾದ ಮೇಲೆ ಒಬ್ಬರಂತೆ ಸಿಡಿಯನ್ನು ಆಡುತ್ತಾರೆ. ಪಟ್ಟಣ ಹಾಗೂ ಸುತ್ತಮುತ್ತ ಹತ್ತಾರು ಹಳ್ಳಿಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ಆಕರ್ಷಕ ಸಿಡಿ ನೋಡಿ ಕಣ್ತುಂಬಿಸಿಕೊಂಡರು. ನೆರೆದಿದ್ದ ಕೆಲವು ಪೋಷಕರುಗಳು ತಮ್ಮ ಚಿಕ್ಕ ಮಕ್ಕಳನ್ನು ಸಿಡಿಕಂಬಕ್ಕೆ ಸ್ಪರ್ಶಿಸುವ ಮೂಲಕ ದೇವಿಗೆ ತಮ್ಮ ಹರಕೆ ತಿರಿಸುವ ಪ್ರತೀತಿಯನ್ನು ನೆಡೆಸಿಕೊಂಡು ಬಂದಿದ್ದಾರೆ. ಶಾಸಕ ಮಸಾಲ ಜಯರಾಮ್, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ , ಗುಡಿಗೌಡ ಶ್ರೀನಿವಾಸ್ ಸೇರಿದಂತೆ ಮುಖಂಡರು ಹಾಗೂ ಅಪಾರ ಭಕ್ತರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap