ವೈ.ಎನ್.ಹೊಸಕೋಟೆ :
ಯುವಜನತೆ ಉದ್ಯೋಗದಲ್ಲಿ ತೊಡಿಸಿಕೊಳ್ಳುವುದರಿಂದ ಕುಟುಂಬದ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ಪಿಡಿಓ ರಂಗನಾಥ್ ತಿಳಿಸಿದರು
ಗ್ರಾಮದ ಗಡಿನಾಡು ಸಾಂಸ್ಕೃತಿಕ ಭವನದಲ್ಲಿ ಗ್ರಾಮಪಂಚಾಯಿತಿ ಮತ್ತು ಗುರುಕುಲ ಸಂಸ್ಥೆ ಬೆಂಗಳೂರು ರವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ಮಾತನಾಡುತ್ತಾ ಗುರುಕುಲ ಸಂಸ್ಥೆಯ ವತಿಯಿಂದ ಈಗಾಗಲೇ ಸುಮಾರು 4000 ಯುವಕರಿಗೆ ತರಬೇತಿಯನ್ನು ಕೊಟ್ಟು ಉದ್ಯೋಗವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ. ವಿಶೇಷವಾಗಿ ಗ್ರಾಮೀಣ ಯುವಕರಿಗೆ ಉದ್ಯೋಗವಕಾಶ ಒದಗಿಸಿಕೊಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ.
5ನೇ ತರಗತಿಯಿಂದ ಪದವಿಯವರೆಗೆ ವಿವಿದ ವಿದ್ಯಾಹರ್ತೆಗಳಿಗೆ ಅನುಗುಣವಾಗಿ ಅವರಿಗೆ ಕೌಶಲ್ಯ ತರಭೇತಿಯನ್ನು ನೀಡಿ ಉದ್ಯೋಗಕ್ಕೆ ಸಜ್ಜು ಮಾಡುತ್ತಿರುವುದು ಸಂತಸ ವಿಷಯ. ಇಂತಹ ಮೇಳಗಳಿಂದ ಯುವ ಜನತೆ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮಪಂಚಾಯಿತಿ ಅಧ್ಯಕ್ಷೆ ಸರೋಜಮ್ಮ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಪಿ.ಸಿ.ನಾಗರಾಜು, ಗ್ರಾಮಪಂಚಾಯಿತಿ ಉಪಾಧ್ಯಕ್ಷ ಎಂ.ಮಹಬೂಬ್ ಸಾಬ್, ಸದಸ್ಯ ಹೆಚ್.ಪಿ.ಕೃಷ್ಣಪ್ಪ, ನಡ್ಜ್ ಫೌಂಡೇಷನ್ ಸಂಸ್ಥೆಯ ಕರ್ನಾಟಕ ದಕ್ಷಿಣ ವಲಯದ ಮೇಲ್ವಿಚಾರಕ ಯಾಸಿನ್ ಮಾತನಾಡಿದರು. ಗ್ರಾಮಪಂಚಾಯಿತಿ ಸದಸ್ಯರಾದ ಓ.ತಿಪ್ಪೇಸ್ವಾಮಿ, ಕೇಶವಮೂರ್ತಿ, ಗೋವಿಂದಪ್ಪ, ಪಿ.ಸಿ.ಉಮೇಶ, ಮುಖಂಡರಾದ ನಾಗರಾಜು, ಅಂಜಯ್ಯ, ಸಂಸ್ಥೆಯ ಮಂಜುನಾಥ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








