ಚಿತ್ರದುರ್ಗ
ತಾಲೂಕಿ ಲಕ್ಷ್ಮಿಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾದರಹಳ್ಳಿಯಲ್ಲಿ ಉಜ್ಜಲ ಯೋಜನೆಯ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಿ ಮಾತನಾಡಿ ಕೇಂದ್ರ ಸರ್ಕಾರದ ಜನಪ್ರಿಯ ಕಾರ್ಯಕ್ರಮವಾಗಿ ಉಜ್ಜಲ ಯೋಜನೆ ಜಾರಿಗೊಳಿಸಲಾಗಿದೆ. ಹಳ್ಳಿಗಾಡಿನಲ್ಲಿ ಬೆಳಗ್ಗೆ ಅಡಿಗೆ ಮಾಡಲು ಕಟ್ಟಿಗೆ ತೆಗೆದುಕೊಂಡು ಬಂದು ಹೊಲೆಯ ಮುಂದೆ ಅಡಿಗೆ ಮಾಡಬೇಕಿತ್ತು. ಹೆಣ್ಣು ಮಕ್ಕಳ ಆರೋಗ್ಯದಲ್ಲಿ ಹೊಗೆ ಕುಡಿದು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದರು. ಅದಕ್ಕಾಗಿ ನರೇಂದ್ರ ಮೋದಿಯವರು ದೇಶದ ಎಲ್ಲಾ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ಕಲ್ಪಸಿದರು ಎಂದರು.
50 ವರ್ಷಳ ಕಾಲ ದೇಶವನ್ನು ಆಳ್ವಿಕೆ ನಡೆಸಿದ ನೆಹರು ಕುಟುಂಬ ಸುಳ್ಳು ಹೇಳಿ ಕಾಲಹರಣ ಮಾಡಿದರು. ಮೋದಿಯವರನ್ನು ಜನರು ಗೆಲ್ಲಿಸಿದರು. ಹಣವಿಲ್ಲದೆ ಗ್ಯಾಸ್ ನೀಡಿ ಬಡವರ ಆರೋಗ್ಯ ಕಾಪಾಡಿದರು. ಶಕ್ತಿ ಇಲ್ಲದವರು ಸಹ ಎಲ್ಲಾರಂತೆ ಬದುಕಲು ಅವಕಾಶ ಮಾಡಿಕೊಟ್ಟರು. ನರೇಂದ್ರ ಮೋದಿ ಅಭಿವೃದ್ಧಿಗೆ ಸಹಕಾರ ನೀಡದೆ ಕಾಂಗ್ರೆಸ್ ನವರು ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ದೇಶದ ಪ್ರಧಾನ ಮಂತ್ರಿ ಆದರೆ ದೇಶದ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.
ಬಡವರಿಗೆ ಹಣವಿಲ್ಲದೆ ಬ್ಯಾಂಕ ಖಾತೆ ಮಾಡಿಸಿದರು. ಸಾಕಷ್ಟು ಮನೆಗಳನ್ನು ನೀಡಿದರು ಸಹ ದೇಶದಲ್ಲಿ ಕನ್ಯಕುಮಾರಿಯಿಂದ ಹಿಮಾಲಯದವರೆಗೆ ಯಾರಿಗೆ ಮನೆ ಇಲ್ಲ ಎಲ್ಲಾರಿಗೂ ಮನೆ ನೀಡಬೇಕೆಂದು ತಿಳಿಸಿದ್ದಾರೆ. ಬಡಜನರ ಉತ್ತಮವಾಗಿ ಬದುಕು ನಡೆಸಬೇಕೆಂಬ ಮಹಾನ್ ಆಸೆಯನ್ನು ಪ್ರಧಾನ ಮಂತ್ರಿಗಳ ಬಯಸುತ್ತಾರೆ ಮತ್ತು ಜನರ ಹಿತಾಸ್ತಿಗಾಗಿ ಎಲ್.ಪಿ.ಜಿ. ಗ್ರಾಹಕರಿಗೆ ವಿಮಾ ಸುರಕ್ಷ ಯೋಜನೆ ಜಾರಿಗೊಳಿಸಿದ್ದಾರೆ ಎಂದು ಹೇಳಿದರು.
ಲಕ್ಷ್ಮಿ ಸಾಗರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಲಕ್ಷ್ಮಿ, ಸದಸ್ಯರಾದ ಪ್ರೇಮಾ ಶಿವಮೂರ್ತಿ, ಪ್ರಮೇಳ ತಿಪ್ಪೇಸ್ವಾಮಿ, ಮಲ್ಲಿಕಾರ್ಜುನಪ್ಪ ಮತ್ತು ಮುಖಂಡರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
