ಕಾಂಗ್ರೆಸ್ ನಾಯಕರಿಗೆ ಸವಾಲೆಸೆದ ಉಮೇಶ್ ಜಾದವ್..!!!

ಚಿಂಚೋಳಿ

        ಹಣಕ್ಕಾಗಿ ಚಿಂಚೋಳಿ ಕ್ಷೇತ್ರದ ಮತದಾರರ ಆಶೀರ್ವಾದವನ್ನು ಮಾರಿಕೊಂಡಿದ್ದಾರೆ ಎನ್ನುವ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಕಲಬುರ್ಗಿ ಲೋಕಸಭಾ ಅಭ್ಯರ್ಥಿ ಉಮೇಶಾ ಜಾಧವ್ ಯಾವುದೆ ಸಂಸ್ಥೆಯಿಂದ ತನಿಖೆ ನಡೆಸಿ ಎಂದು ಸವಾಲ್ ಹಾಕಿದ್ದಾರೆ.

       ಚಿಂಚೋಳಿಯಲ್ಲಿ ಇಂದು ಪತ್ರಿಕಾಗೋಷ್ಟಿ ನಡೆಸಿ ಮತನಾಡಿದ ಅವರು, ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಪ್ರಿಯಾಂಕಾ ಖರ್ಗೆ ಮತ್ತು ಮಲ್ಲಿಕಾರ್ಜುನ ಖರ್ಗೆ ವಿರುದ್ದ ವಾಗ್ದಾಳಿ ನಡೆಸಿದರು.

        ನಾನು ಎರಡನೇ ಬಾರಿ ಶಾಸಕನಾದಾಗ ನಮ್ಮ ಕ್ಷೇತ್ರಕ್ಕೆ ಕರೆದರೂ ಯಾವೊಬ್ಬ ಮಂತ್ರಿಯೂ ಭೇಟಿ ನೀಡಲಿಲ್ಲಾ. ನನ್ನ ಕ್ಷೇತ್ರದಲ್ಲಿ ನಕ್ಸಲೈಟ್ ಇದ್ದಾರೆ ಎಂಬ ಕಾರಣ ನೀಡಿ ಅಧಿಕಾರಿಗಳೂ ಬರಲಿಲ್ಲಾ. ಆಗ ಬರದಿದ್ದ ಕಾಂಗ್ರೆಸ್ ನಾಯಕರು ಈಗ ನನ್ನ ಕ್ಷೇತ್ರಕ್ಕೆ ಬಂದು ಅವರ ರಾಜಕೀಯ ಸಂಸ್ಕಾರ ತೋರಿಸುತ್ತಿದ್ದಾರೆ ಎಂದು ಹರಿಹಾಯ್ದರು.

       ಕಾಂಗ್ರೆಸ್ ಪಕ್ಷದ ನಾಯಕರು ನಾನು ಹಣ ತಗೆದುಕೊಂಡಿದ್ದೇನೆ ಎಂದು ನನ್ನ ವಿರುದ್ದ ವೈಯಕ್ತಿಕ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಿಂದ ನನ್ನ ಕುಟುಂಬದ ಸದಸ್ಯರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಇದರಿಂದ ನನ್ನ ಮಗಳಿಗೆ ಅವಮಾನ ಆಗಿದೆ. ಉತ್ತಮವಾಗಿ ಓದುತ್ತಿದ್ದ ಆಕೆ ಮಾನಸಿಕವಾಗಿ ಕುಗ್ಗಿದ್ದು ದ್ವಿತೀಯ ಪಿ ಯು ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್ ನಾಯಕರು ಆರೋಪವೇ ಕಾರಣ ಎಂದರು ಆರೋಪಿಸಿದರು.

      ಇಂಜೆಕ್ಷೆನ್ ನಲ್ಲಿ ನೀರು ಹಾಕುತ್ತಿದ್ದರೋ, ಔಷಧ ಹಾಕುತ್ತಿದ್ದರೋ ಎಂದು ಲೇವಡಿ ಮಾಡಿದ ಡಾ ಪರಮೇಶ್ವರ್ ನಮ್ಮ ವೈದ್ಯ ವೃತ್ತಿಗೆ ಅಪಮಾನ ಮಾಡಿದ್ದಾರೆ. ನನ್ನ ಜೀವನದಲ್ಲಿ ಒಂದು ಕಳಂಕ ಇಲ್ಲ. ನಾನು ನನ್ನ ಡಾಕ್ಟರ್ ಹುದ್ದೆಗೆ ರಾಜೀಣಾಮೆ ನೀಡಿ ಬುರವಾಗ 200 ಜನ ನನ್ನ ಸಹದ್ಯೋಗಿಗಳು ಕಣ್ಣಿರು ಇಟ್ಟರು. ಕೀಳು ಮಟ್ಟದ ಹೇಳಿಕೆಯನ್ನು ನೀಡುವ ಮೂಲಕ ಡಾ ಪರಮೇಶ್ವರ್ ಅತ್ಯಂತ ಕೆಳಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದರು.

       ಹಣಕ್ಕಾಗಿ ಚಿಂಚೋಳಿ ಮತದಾರರ ಆಶೀರ್ವಾದವನ್ನು ಮಾರಾಟ ಮಾಡಿದ್ದಾರೆ ಎನ್ನುವ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಅವರು, ನಾನು ಈ ಬಗ್ಗೆ ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಿದರೂ ಅದಕ್ಕೆ ಸಿದ್ದನಿದ್ದೇನೆ ಎಂದು ಸವಾಲ್ ಹಾಕಿದರು. 78 ಕ್ಷೇತ್ರಗಳಲ್ಲಿ ಗೆದ್ದ ಕಾಂಗ್ರೆಸ್ ಕಡಿಮೆ ಕ್ಷೇತ್ರ ಗೆದ್ದ ಜೆಡಿಎಸ್ ಗೆ ಕಾಂಗ್ರೆಸ್ ಪಕ್ಷ ಮಾರಾಟವಾಗಿದೆ. ಈ ರೀತಿ ಕೀಳು ಮಟ್ಟದ ಹೇಳಿಕೆಯನ್ನು ನೀಡುವ ಮೂಲಕ ಮತದಾರರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದು, ಇದರಲ್ಲಿ ಕಾಂಗ್ರೆಸ್ ನಾಯಕರು ಸಫಲರಾಗುವುದಿಲ್ಲ ಎಂದರು.

         ಚಿಂಚೋಳಿ ಕ್ಷೇತ್ರದಲ್ಲಿ ಒಗ್ಗಟ್ಟಾಗಿದ್ದ ಬಂಜಾರ ಸಮುದಾಯವನ್ನು ಒಡೆಯುವಂತಹ ಕಾರ್ಯಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಜಾತಿ ಹೊಡಯುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ನಮ್ಮ ಬಂಜಾರ ಸಮುದಾಯವನ್ನು ಒಡೆಯುವ ಪಾಪದ ಕೆಲಸಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಇದನ್ನು ಬಿಟ್ಟು ನನ್ನ ವಿರುದ್ದ ಎಲೆಕ್ಷನ್ ಮಾಡಿ. ಕುತಂತ್ರ ಮಾಡುವ ಬದಲು ನನ್ನ ಸವಾಲನ್ನು ಎದುರಿಸಿ ಎಂದರು.

        ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ಎಂಬುದೇ ಇಲ್ಲ. ಸಕ್ಕರೆ ಕಾರ್ಖಾನೆಯನ್ನು ನನ್ನ ಕ್ಷೇತ್ರದಲ್ಲಿ ಪ್ರಾರಂಭಿಸಿದ್ದರೆ ನಾನು ಸಾಯುವ ತನಕ ಗುಲಾಮನಾಗಿರುತ್ತಿದ್ದೆ. ಆದರೆ ಕೀಳು ರಾಜಕೀಯದಿಂದ ನನ್ನ ಕ್ಷೇತ್ರಕ್ಕೆ ಬರಬೇಕಾಗಿದ್ದ ಸಕ್ಕರೆ ಕಾರ್ಖಾನೆ ಬೆರೆ ಕಡೆಗೆ ವರ್ಗಾವಣೆಯಾಯಿತು ಎಂದು ಹೇಳಿದರು.

       ನಮ್ಮ ದೇಶದ ಶ್ರೀಮಂತ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ. 50 ಸಾವಿರ ಕೋಟಿ ಒಡೆಯ. ಅವರ ಮೇಲೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಆದರೆ ಈ ವಿಷಯವನ್ನು ಯಾರಿಗೂ ಗೊತ್ತಾಗದಂತೆ ಮುಚ್ಚಿಡಲಾಗಿದೆ ಎಂದು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap