ತ್ರಿಂಶಕು ಸ್ಥಿತಿಯಲ್ಲಿ ನಗರಸಭೆ ಗದ್ದುಗೆ: ನಿರ್ಣಾಯಕರಾದ ಪಕ್ಷೇತರರು..!!

ಬಿ.ಜೆ.ಪಿ 11, ಕಾಂಗ್ರೇಸ್ 9, ಜೆ.ಡಿ.ಎಸ್ 5, ಪಕ್ಷೇತರರು 6

ತಿಪಟೂರು :

       ಮೇ 29 ರಂದು ನಡೆದ ನಗರಸಭಾ ಚುನಾವಣೆಯ ಎಣಿಕೆ ಕಾರ್ಯ ಇಂದು ನಡೆದು ಯಾವ ಪಕ್ಷಕ್ಕೂ ಸ್ಪಷ್ಠ ಬಹುಮತ ಬರದೇ ತ್ರಿಶಂಕುಸ್ಥಿತಿ ನಿರ್ಮಾಣಮಾಗಿದ್ದು ಪಕ್ಷೇತರರು ನಿರ್ಣಾಯಕ ಪಾತ್ರವಹಿಸಲಿದ್ದಾರೆ.

     ಬಿ.ಜೆ.ಪಿ 11, ಕಾಂಗ್ರೇಸ್ 9, ಜೆ.ಡಿ.ಎಸ್ 5, ಪಕ್ಷೇತರರು 6 ಸ್ಥಾನ ಪಡೆದಿದ್ದು ಅಧಿಕಾರದ ಗದ್ದುಗೆ ಹಿಡಿಯಲು ಅಂತಿಮವಾಗಿ ಬಿಜೆಪಿಗೆ 11, 2 ಪಕ್ಷೇತರರ ಬಲ ದೊರೆತು 1 ಶಾಸಕ ಮತ್ತು 1 ಸಂಸದರ ಮತಗಳು ದೊರೆತರೆ 15 ಮತಗಳು ದೊರೆಯುತ್ತವೆ ಅದೇ ರೀತಿ ರಾಜ್ಯದ ಸಮಿಶ್ರ ಸರ್ಕಾರದಂತೆ ಕಾಂಗ್ರೇಸ್ 9 ಮತ್ತು ಜೆ.ಡಿ.ಎಸ್ 5 ಸೇರಿ 14 ಇವರಿಗೂ ಪಕ್ಷೇತರರ ಬೆಂಬಲ ಅಗತ್ಯವಿದ್ದು ಪಕ್ಷೇತತರಿಗೆ ಒಳ್ಳೆಯ ಬೆಲೆ ದೊರೆಯುವ ಸಂಭವವಿದ್ದು ಅಧಿಕಾರಹಿಡಿಯಲು ಈಗಾಗಲೇ ಕುದುರೆವ್ಯಾಪಾರ ನಡೆಯುತ್ತಿದೆ.

      ತೀರ್ವಹಣಾಹಣಿ ಏರ್ಪಟ್ಟಿದ್ದ 6ನೇ ವಾರ್ಡನಲ್ಲಿ ಕಾಂಗ್ರೇಸ್‍ನ ಟಿ.ಎನ್.ಪ್ರಕಾಶ್ ಮತ್ತು ಬಿ.ಜೆ.ಪಿಯ ಪ್ರಸನ್ನಕುಮಾರ್ ವಿರುದ್ದ ಏರ್ಪಟ್ಟಿದ್ದ ಸ್ಪರ್ಧೆಯಲ್ಲಿ ಟಿ.ಎನ್.ಪ್ರಕಾಶ್ 682 ಮತಗಳ ಅಂತರದಿಂದ ಈ ಬಾರಿಯ ನರಗಸಭಾ ಚುನಾವಣೆಯಲ್ಲಿ ಅತಿಹೆಚ್ಚು ಮತಗಳಿಂದ ಜಯಗಳಿಸಿದ್ದು ಬಿ.ಜೆ.ಪಿ ಹಿರಿಯ ಮುಖಂಡ ಪ್ರಸನ್ನಕುಮಾರ್ ತೀರ್ವ ಮುಜುಗರಕ್ಕೆ ಒಳಗಾಗಿದ್ದಾರೆ. ಹಾಗೆಯೇ 9ನೇ ವಾರ್ಡ್‍ನ ಕಾಂಗ್ರೇಸ್‍ನ ಟಿ.ಎಂ.ಗಂಗಾ ತಮ್ಮ ಸಮೀಪದ ಪ್ರತಿಸ್ಫರ್ಧಿ ಬಿಜೆ.ಪಿಯ ಶಶಿಕಲಾ ವಿರುದ್ದ ಅಂತಿಮವಾಗಿ 5 ಮತಗಳ ಅತಿಕಡಿಮೆ ಅಂತರದಿಂದ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡಿದ್ದಾರೆ.

     ವಿಷೇಶವಾಗಿ ಲೋಕಸಭಾ, ವಿದಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಈಗ ನಗರಸಭಾ ಚುನಾವಣೆಯಲ್ಲಿ 22ನೇ ವಾರ್ಡ್‍ನಿಂದ ಸ್ಫರ್ಧಿಸಿದ್ದ ಟಿ.ಎನ್.ಕುಮಾರಸ್ವಾಮಿ 5 ಮತಗಳನ್ನು ಪಡೆದಿದ್ದು ಇನ್ನೂ ವಿಶೇಷವಾಗಿ ವಾರ್ಡ್‍ನಂ 10ರಲ್ಲಿ ಪಕ್ಷೇತರ ಅಭ್ಯರ್ಥಿ ಹೆಚ್.ಜಿ. ರಾಜಶೇಖರ್ ಕೇವಲ 1 ಮತವನ್ನು ಪಡೆದಿದ್ದಾರೆ.

     9ನೇ ವಾರ್ಡ್ ಶಶಿಕಿರಣ್ (25) ಜಯಗಳಿದ್ದು ಅತಿಕಿರಿಯ ಕೌನ್ಸಿಲರ್ ಆಗಿದ್ದಾನೆ.ಕಳೆದ ನಗರಸಭಾ ಆಡಳಿತದಲ್ಲಿ ಮೊದಲ ಬಾರಿಗೆ ಮೈತ್ರಿಮಾಡಿಕೊಂಡ ಜೆ.ಡಿ.ಎಸ್ ಮತ್ತು ಕಾಂಗ್ರೇಸ್ ನಿಂದ ಕಾಂಗ್ರೇಸ್‍ನ ಟಿ.ಎನ್.ಪ್ರಕಾಶ್‍ರ್ನು ಅಧ್ಯಕ್ಷನನ್ನಾಗಿ ಮಾಡಿದ್ದರು ಆದರೆ ಈ

ಬಾರಿಯ ಮೈತ್ರಿಯಲ್ಲಿ ಅಧ್ಯಕ್ಷಸ್ಥಾನ ಜೆ.ಡಿ.ಎಸ್ ಗೆ ಒಲಿಯಬಹುದೇ ?

      ವಾರ್ಡ್‍ವಾರು ವಿಜೇತರಾದವರ ವಿವರ : ಬಿ.ಜೆ.ಪಿ ಯಿಂದ ವಾರ್ಡ್ ನಂ: 1 ವಿ.ಸಂಧ್ಯಾ, ವಾರ್ಡ್ ನಂ: 2 ಡಾ.ಎಂ.ಎಸ್.ಓಹಿಲಾ, ವಾರ್ಡ್ ನಂ: 4 ಜಿ.ಕೆ.ಪ್ರಸನ್ನ, ವಾರ್ಡ್ ನಂ: 5 ರಾಮಮೋಹನ್, ವಾರ್ಡ್ ನಂ:8 ಟಿ.ಎನ್ ಜಯಲಕ್ಷ್ಮಿ, ವಾರ್ಡ್ ನಂ: 9 ಶಶಿಕಿರಣ್, ವಾರ್ಡ್ ನಂ: 10 ಮೋಹನ್‍ರಾಜ್, ವಾರ್ಡ್ ನಂ: 12 ಮಹೇಶ್ ನಾಯಕ್, ವಾರ್ಡ್ ನಂ: 16 ಪದ್ಮ ಶಿವಪ್ಪ, ವಾರ್ಡ್ ನಂ: 19 ಸಂಗಮೇಶ್, ವಾರ್ಡ್ ನಂ:30 ಪದ್ಮ ತಿಮ್ಮೇಗೌಡ, ಕಾಂಗ್ರೆಸ್ : ವಾರ್ಡ್ ನಂ: 3 ಕೆ.ಎಸ್.ಮೇಘಶ್ರೀ, ವಾರ್ಡ್ ನಂ:6 ತಿ.ಎನ್.ಪ್ರಕಾಶ್, ವಾರ್ಡ್ ನಂ: 14 ವಿ.ಯೋಗೀಶ್, ವಾರ್ಡ್ ನಂ:15 ವಿನುತ ತಿಲಕ್, ವಾರ್ಡ್ ನಂ:17 ಟಿ.ಎನ್.ಗಂಗಾ, ವಾರ್ಡ್ ನಂ: 18 ಮಹೇಶ್, ವಾರ್ಡ್ ನಂ: 21 ಹೂರ್‍ಬಾನು, ವಾರ್ಡ್ ನಂ:22 ಕೋಟೆ ಪ್ರಭು, ವಾರ್ಡ್ ನಂ: 23 ಮಹಮದ್ ಗೌಸ್
ಜೆ.ಡಿ.ಎಸ್ : ವಾರ್ಡ್ ನಂ: 11 ಎಂಬಿ.ಜಯರಾಮ್, ವಾರ್ಡ್ ನಂ:24 ಆಸಿಫಾ ಬಾನು, ವಾರ್ಡ್ ನಂ: 27 ಸೊಪ್ಪುಗಣೇಶ್, ವಾರ್ಡ್ ನಂ: 28 ಭಾರತಿ, ವಾರ್ಡ್ ನಂ: 31 ಸರೋಜಮ್ಮ ಪಕ್ಷೇತರರು : ವಾರ್ಡ್ ನಂ: 7 ಯೋಗೀಶ್, ವಾರ್ಡ್ ನಂ: 13 ಯಮುನಾ ಎಸ್, ವಾರ್ಡ್ ನಂ: 20 ಮುನಾಫ್.ಹೆಚ್, ವಾರ್ಡ್ ನಂ: 25 ಶ್ರೀನಿವಾಸ್, ವಾರ್ಡ್ ನಂ: 26 ನದೀಮ್ ಪಾಷ, ವಾರ್ಡ್ ನಂ: 29 ಲತಾ ಲೋಕೇಶ್

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap