ಮಿಡಿಗೇಶಿ
ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯ ಬೇಡತ್ತೂರಿನ ದೊಡ್ಡಕೆರೆಯಲ್ಲಿ ಅಪರಿಚಿತ ಗಂಡಸಿನ ಮೃತ ದೇಹ ಕಂಡು ಬಂದಿದೆ. ಮೃತದೇಹದÀ ಬಳಿ ಪಾನ್ ಕಾರ್ಡ್ ಹಾಗೂ ಇತರೆ ಚೀಟಿಗಳು ದೊರೆತಿದ್ದು, ಮೃತನ ಹೆಸರು ಎಸ್ ಮಹೇಶ್ ಎಂದು ತಿಳಿದು ಬಂದಿದೆ. ಶವವು ಫೆ. 06 ರಂದು ಸಾರ್ವಜನಿಕರಿಗೆ ಗೋಚರಿಸಿದೆ. ಮಿಡಿಗೇಶಿ ಪೊಲೀಸ್ ಠಾಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶವವನ್ನು ನೀರಿನಿಂದ ಹೊರತೆಗೆಸಿ, ಶವ ಪರೀಕ್ಷೆಗಾಗಿ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದಷ್ಟೆ ಇದೇ ಮಧುಗಿರಿ ತಾಲ್ಲೂಕಿನ ಚಂದ್ರಬಾವಿ ಗ್ರಾಮದ ರಸ್ತೆ ಬದಿಯ ತೆರೆದ ಬಾವಿಯಲ್ಲೂ ಒಬ್ಬ ಅಪರಿಚತ ಗಂಡಸಿನ ಶವ ಪತ್ತೆಯಾಗಿದೆ. ಅದರ ಬಗ್ಗೆ ಮಾಹಿತಿ ಇನ್ನೂ ಲಭ್ಯವಾಗಿಲ್ಲದಿರುವಾಗ ಇದು ಅಂತಹುದೆ ಎರಡನೆ ಘಟನೆಯಾಗಿದ್ದು, ಜನರು ಭೀತಗೊಂಡಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ