ಹರಪನಹಳ್ಳಿ
ಇಲ್ಲಿಯ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾದ್ಯಕ್ಷ ಮಂಜನಾಯ್ಕ ರವರ ವಿರುದ್ದ ಅವಿಶ್ವಾಸ ಮಂಡಿಸಲು ಪಕ್ಷಬೇದ ಮರೆತು ಸದಸ್ಯರು ಸಿದ್ದರಾಗಿದ್ದಾರೆ.
ತಾ.ಪಂ ಆಡಳಿತ ಬಿಜೆಪಿ ಪಕ್ಷದ್ದಾಗಿದ್ದು, ಒಟ್ಟು 26 ಸದಸ್ಯರಲ್ಲಿ 10 ಬಿಜೆಪಿ, 8 ಕಾಂಗ್ರೆಸ್ , 1 ಪಕ್ಷೇತರ ಸೇರಿ 19 ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಲು ಮನವಿ ಪತ್ರಕ್ಕೆ ಸಹಿ ಹಾಕಿ ಸ್ಥಳೀಯ ಕಂದಾಯ ಉಪವಿಬಾಗಾಧಿಕಾರಿಯವರಿಗೆ ಸಲ್ಲಿಸಿದ್ದಾರೆ.
ಬಿಜೆಪಿ ಸದಸ್ಯರಾದ ವಿಶಾಲಾಕ್ಷಮ್ಮ(ಅರಸಿಕೇರಿ), ನೀಲಿಬಾಯಿ(ಚಟ್ನಿಹಳ್ಳಿ)ಗಂಗೂಬಾಯಿ(ಪುಣಭಗಟ್ಟ), ರಹಮತುಲ್ಲಾ (ಅಣಜಿಗೇರಿ), ಪಾಟೀಲ್ ಕೆಂಚನಗೌಡ( ಉಚ್ಚಂಗಿದುರ್ಗ), ಪ್ರಕಾಶ ಹುಣ್ಸಿಹಳ್ಳಿ(ಸಾಸ್ವಿಹಳ್ಳಿ) ಕೆ.ವೆಂಕಟೇಶರೆಡ್ಡಿ(ಕುಂಚೂರು), ಸುಮಿತ್ರಾ( ಮಾಚಿಹಳ್ಳಿ), ಆರ್ .ಲತಾ(ಬಾಗಳಿ), ರೇವನಗೌಡ ಪಾಟೀಲ್ (ಹಿರೇಮೇಗಳಗೇರಿ)
ಕಾಂಗ್ರೆಸ್ ಸದಸ್ಯರು – ಎಚ್ .ಚಂದ್ರಪ್ಪ(ನೀಲಗುಂದ), ಓ.ರಾಮಪ್ಪ(ನಂದಿಬೇವೂರು), ಎಸ್ .ಬಸವನಗೌಡ(ಚಿಗಟೇರಿ), ಗೌಡ್ರು ಮಂಜುಳಾ( ದುಗ್ಗಾವತ್ತಿ, ಜಿ.ಮಂಜುಳಾ(ತೆಲಿಗಿ), ಯಲ್ಲಮ್ಮ (ನಿಚ್ಚವನಹಳ್ಳಿ), ಶಶಿಕಲಾ(ಮತ್ತಿಹಳ್ಳಿ), ಲಕ್ಷ್ಮೀಬಾಯಿ(ಹಾರಕನಾಳು) ಹಾಗೂ ರಾಗಿಮಸಲವಾಡ ಕ್ಷೇತ್ರದ ಪಕ್ಷೇತರ ಸದಸ್ಯೆ ಮಾನಿಬಾಯಿ ಅವರು ಅವಿಶ್ವಾಸಕ್ಕೆ ಸಹಿ ಹಾಕಿದ ಸದಸ್ಯರುಗಳು .
ಅಧ್ಯಕ್ಷ, ಉಪಾದ್ಯಕ್ಷರು ಮಾಸಿಕ ಸಭೆಯಲ್ಲಿ ಯಾವ ಸದಸ್ಯರ ಒಪ್ಪಿಗೆ ಪಡೆಯದೇ ಏಕ ಪಕ್ಷೀಯವಾಗಿ ನಿರ್ದಾರ ತೆಗೆದುಕೊಳ್ಳುವುದು, ನಾನೇ ಎಲ್ಲಾ ಎನ್ನುತ್ತಾ ಸರ್ವಾಧಿಕಾರಿ ನಿರ್ದಾರ ಅನುಸರಿಸುವುದರಿಂದ ನಮ್ಮಗಳಿಗೆ ಒಪ್ಪಿಗೆ ಇಲ್ಲದೆ ಇರುವುದರಿಂದ ಹಾಗೂ ಅಧ್ಯಕ್ಷರು, ಉಪಾದ್ಯಕ್ಷರು ಅಧಿಕಾರ ದುರುಪಯೋಗ ಮಾಡುತ್ತಾ ಬಂದಿರುತ್ತಾರೆ , ಆದ್ದರಿಂದ ಅವಿಶ್ವಾಸ ಮಂಡನೆಗೆ ಮುಂದಾಗಿದ್ದೆವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಅಧ್ಯಕ್ಷೆ ಅನ್ನಪೂರ್ಣಮ್ಮ ಅವರು ಶಾಸಕರು ಈವರೆಗೂ ನನಗೆ ಏನು ಹೇಳಿಲ್ಲ, ಅವರು ಏನು ಹೇಳುತ್ತಾರೊ ಆ ಪ್ರಕಾರ ನಾನು ನಡೆದುಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಉಪಾದ್ಯಕ್ಷ ಮಂಜನಾಯ್ಕ ಅವರು ಪ್ರತಿಕ್ರಿಯಿಸಿ ಭಾನುವಾರ ರಾತ್ರಿ ಶಾಸಕ ಜಿ.ಕರುಣಾಕರರೆಡ್ಡಿ ಅವರು ನೀಡಿದ ಸೂಚನೆ ಅನ್ವಯ ಉಪಾದ್ಯಕ್ಷ ಸ್ಥಾನಕ್ಕೆ ಸೋಮವಾರ ಬಳ್ಳಾರಿಗೆ ತೆರಳಿ ಜಿಲ್ಲಾಧಿಕಾರಿಯವರಿಗೆ ಖುದ್ದು ಭೇಟಿ ಆಗಿ ರಾಜಿನಾಮೆ ಸಲ್ಲಿಸಿ ಬಂದಿದ್ದೇನೆ.ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
