ಹೊನ್ನಾಳಿ:
ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಬಿ. ಮೋಹನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಸಹಕಾರ ಇಲಾಖೆಯ ಅಧಿಕಾರಿ ಜಗದೀಶ್ ತಿಳಿಸಿದರು.
ಈ ಹಿಂದಿನ ಅಧ್ಯಕ್ಷ ಹಳದಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಪಟ್ಟಣದ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಎಚ್.ಬಿ. ಮೋಹನ್ ಅವರೊಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು ಎಂದು ಹೇಳಿದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಕೆ. ಹಳದಪ್ಪ, ಉಪಾಧ್ಯಕ್ಷ ಬಿ.ಎಚ್. ನೀಲಕಂಠಪ್ಪ, ನಿರ್ದೇಶಕರಾದ ಎಚ್.ಎ. ನರಸಿಂಹ, ದಿಡಗೂರು ಜಿ.ಎಚ್. ತಮ್ಮಣ್ಣ, ಬಾಬು, ರಾಣಿ ಸುರೇಶ್, ಎಚ್.ಡಿ. ಸಾವಿತ್ರಮ್ಮ, ಕೆ.ನ್. ರಾಮಚಂದಪ್ಪಗೌಡ, ಲೋಕೇಶ್, ಗೋಪಾ¯ಪ್ಪ ಮತ್ತು ಸಿಬ್ಬಂದಿ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
