ಬೆಂಗಳೂರು
–
ಅಡುಗೆ ಸಿಲಿಂಡರ್‍ನ್ನು ಅಕ್ರಮವಾಗಿ ವಾಣಿಜ್ಯ ಬಳಕೆಗೆ ರೀ ಫಿಲ್ಲಿಂಗ್ ಮಾಡುತ್ತಿದ್ದ ಶೆಡ್‍ನ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಕಗ್ಗದಾಸಪುರದ ಉಮೇದರಂ (24) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 2 ಲಕ್ಷ 30 ಸಾವಿರ ಮೌಲ್ಯದ ಭಾರತ್ ಹಾಗೂ ಇಂಡೇನ್ ಕಂಪನಿಯ 131 ಗ್ಯಾಸ್ ಸಿಲಿಂಡರ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಕಗ್ಗದಾಸನಪುರ ಮುಖ್ಯರಸ್ತೆಯ ರೈಲ್ವೆ ಹಳಿ ಹಿಂಭಾಗದ ಶೆಡ್‍ವೊಂದರಲ್ಲಿ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್‍ಗಳನ್ನು 5 ಕೆಜಿ, 2 ಕೆಜಿ ಇನ್ನಿತರ ಸಣ್ಣ ಸಿಲಿಂಡರ್‍ಗಳಿಗೆ ರೀ ಫಿಲ್ಲಿಂಗ್ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ.ಈ ಸಂಬಂಧ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








