ಮಹಾರಾಷ್ಟ್ರ: ಹೊಸ ಸರಕಾರವೋ, ರಾಷ್ಟ್ರಪತಿ ಆಡಳಿತವೋ?.!

ಮುಂಬೈ

   ಮಹಾರಾಷ್ಟ್ರದಲ್ಲಿ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿ ವಾರ ಕಳೆದರೂ ಹೊಸ ಸರ್ಕಾರ ರಚನೆ ಇನ್ನು ಕಗ್ಗಂಟಾಗಿಯೇ ಪರಿಣಮಿಸಿದೆ.ಹೊಸ ಸರಕಾರವೋ ಇಲ್ಲ ರಾಷ್ಟಪತಿ ಆಡಳಿತವೋ ಎಂಬ ವಿಷಮ ಪರಿಸ್ಥಿತಿಯತ್ತ ಹೊರಳುತ್ತಿದೆ.

    ಮೈತ್ರಿ ಸರ್ಕಾರ ರಚನೆ ಕುರಿತು ಶಿವಸೇನೆ-ಬಿಜೆಪಿ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದೆ. ಇದೇ ರೀತಿ ಸರ್ಕಾರ ರಚನೆ ಕುರಿತು ವಿಳಂಬವಾದರೆ, ರಾಷ್ಟ್ರಪತಿ ಆಡಳಿತ ಜಾರಿ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಬಿಜೆಪಿ ನಾಯಕ ಸುಧೀರ್ ಮುಂಗತಿವಾರ್ ಮನ್ಸೂಚನೆ ನೀಡಿದ್ದಾರೆ ಅಧಿಕಾರ ಹಂಚಿಕೆ ಕುರಿತು ಹಗ್ಗಜಗ್ಗಾಟದಿಂದ ಯಾವುದೇ ತೀರ್ಮಾನಕ್ಕೆ ಬರಲು ಆಗುತ್ತಿಲ್ಲ ಬಿಜೆಪಿ ಶಿವಸೇನೆ, ನ.7ರೊಳಗೆ ಸರ್ಕಾರ ರಚನೆ ಮಾಡದಿದ್ದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವ ಸಾದ್ಯತೆಯೂ ಇದೆ ಎನ್ನಲಾಗಿದೆ.

     ನಮ್ಮ ಮೈತ್ರಿ ಬಹಳ ಗಟ್ಟಿಯಾಗಿದೆ ಆದರೆ ಹೊಸ ಸರ್ಕಾರ ನಿರ್ದಿಷ್ಟ ಸಮಯದೊಳಗೆ ರಚನೆಯಾಗಬೇಕು ಇಲ್ಲದಿದ್ದರೆ ರಾಷ್ಟ್ರಪತಿಗಳ ಮಧ್ಯಪ್ರವೇಶ ಅನಿವಾರ್ಯವಾಗಲಿದೆ ನೀಡಿದ ಗಡುವಿನ ಅವಧಿಯಲ್ಲಿ ಸರ್ಕಾರ ರಚನೆಯಾಗದಿದ್ದರೆ, ರಾಷ್ಟ್ರಪತಿಗಳ ಪ್ರವೇಶ ಅನಿವಾರ್ಯ ಎಂದರು.ಮಹಾರಾಷ್ಟ್ರ ಚುನಾವಣೆಯಲ್ಲಿ ಯಾರಿಗೂ ಬಹುಮತ ಕೊಟ್ಟಿಲ್ಲ .

      ಈ ಹಿನ್ನೆಲೆ ಶಿವಸೇನೆ, ಬಿಜೆಪಿ ಮತ್ತು ಇತರೆ ಪಕ್ಷಗಳು ಮಹಾ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಶಿವಸೇನೆ 50-50 ಸೂತ್ರ ಮುಂದಿಟ್ಟಿದ್ದರೂ ಇದಕ್ಕೆ ಬಿಜೆಪಿ ಸಮ್ಮತಿ ನೀಡಿಲ್ಲ ಹೀಗಾಗಿ ಅಧಿಕಾರ ಹಂಚಿಕೆ ಮತ್ತಷ್ಟು ಗೋಜಲಾಗಿಯೇ ಮುಂದುವರೆದಿದೆ ಇದೆ 9ಕ್ಕೆ ವಿಧಾನಸಭೆಯ ಅವಧಿ ಮುಗಿಯಲಿದ್ದು ಅಷ್ಟರಲ್ಲಿ ಹೊಸ ಸರ್ಕಾರ ರಚನೆಯಾಗಬೇಕು ಇಲ್ಲವಾದಲ್ಲಿ ರಾಷ್ಟ್ರಪತಿ ಆಳ್ವಿಕೆ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap