ಹರಪನಹಳ್ಳಿ
ಅಪರಿಚಿತ ವ್ಯಕ್ತಿಯ ಶವವೊಂದು ಪಟ್ಟಣದ ಕಂಚಿಕೇರಿ ರಸ್ತೆಯ ಪಕ್ಕದ ಪೊದೆಯೊಂದರಲ್ಲಿ ಪತ್ತೆಯಾಗಿದೆ.ಗೋಣಿಚೀಲದಲಿ ಎಸೆಯಲಾದ ಅನಾಮಧೇಯ ವ್ಯಕ್ತಿಯ ಶವವು ಅರ್ದ ಕೊಳೆತ ಸ್ಥಿತಿಯಲ್ಲಿದ್ದು, ಸುಮಾರು 25-30 ವರ್ಷ ವಯಸ್ಸಿನದ್ದಾಗಿದೆ. ಜೀನ್ಸ್ ಪ್ಯಾಂಟ್, ಹಳದಿ ಬಣ್ಣದ ಶರ್ಟ್ ಧರಿಸಿದ್ದಾನೆ. ಬಲಗೈ ಬೆರಳಿನಲ್ಲಿ ಪಂಚಲೋಹದ ಉಂಗುರವಿದೆ. ಈತನ ಗುರುತು ತಿಳಿದವರು ಪಟ್ಟಣದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಿಪಿಐ ದುರುಗಪ್ಪ ಕೋರಿದ್ದಾರೆ.ಮಾಹಿತಿ ತಿಳಿಸಲು 9480803267, 9480803236, 08398-280064 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ