ತುರುವೇಕೆರೆ
ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಚಿಕ್ಕೋನಹಳ್ಳಿ-ಮದ್ನಳ್ಳಿ ಗೇಟ್ ಬಳಿಯ ನಾಗಮಂಗಲ ಉಪ ಹೇಮಾವತಿ ನಾಲೆಯಲ್ಲಿ ಅಪರಿಚಿತ ಮಹಿಳೆಯೊಬ್ಬಳ ಕೊಳೆತ ಸ್ಥಿತಿಯ ದೇಹ ಗುರುವಾರ ಪತ್ತೆಯಾಗಿದೆ.
ಚಿಕ್ಕೋನಹಳ್ಳಿ-ಮದ್ನಳ್ಳಿ ಗೇಟ್ ಬಳಿಯ ಉಪ ಹೇಮಾವತಿ ನಾಲೆಯಲ್ಲಿ, ಅಪರಿಚಿತ ಮಹಿಳೆ ಶವ ರಸ್ತೆ ಸೇತುವೆಗೆ ಸಿಲುಕಿ ಹಾಕಿಕೊಂಡಿದ್ದು ಬೆಳಗ್ಗೆ ತೋಟ, ಹೊಲಗಳಿಗೆ ಹೋಗಿದ್ದ ಜನರು ಗಮನಿಸಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಸುಮಾರು 40 ವರ್ಷ ಪ್ರಾಯದ ಮೃತ ಅಪರಿಚಿತ ಮಹಿಳೆ ನೀರಿನಲ್ಲಿ ಬಿದ್ದು ವಾರಗಳೆ ಕಳೆದಿರುವುದರಿಂದ ಶವ ವಿವಸ್ತ್ರವಾಗಿದ್ದು ದೇಹ ಸಂಪೂರ್ಣ ಕೊಳೆತು ಬೆಳ್ಳಗಾಗಿದೆ.
ಮೃತ ಮಹಿಳೆಯ ಬಲಗೈಯಲ್ಲಿ ಹೂವಿನ ಹಚ್ಚೆ ಇದ್ದು ಯಾವುದೇ ಕುರುಹುಗಳು ಲಭ್ಯವಾಗಿಲ್ಲ. ಆ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮೃತ ಮಹಿಳೆಯ ಶವ ಇಡಲಾಗಿದೆ. ಹೆಚ್ಚಿನ ಮಾಹಿತಿಗೆ ತುರುವೇಕೆರೆ ಠಾಣೆ ಸಂಪರ್ಕಿಸಲು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ