ಕೊರಟಗೆರೆ
ಕೊರಟಗೆರೆಯ ಪಿಎಲ್‍ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಕುರಂಕೋಟೆ ಗ್ರಾಮದ ಸಿದ್ದರಾಜು, ಉಪಾಧ್ಯಕ್ಷರಾಗಿ ಬೊಮ್ಮಲದೇವಿ ಪುರದ ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 12 ಸದಸ್ಯ ಸಂಖ್ಯಾ ಬಲದ ನಿರ್ದೇಶಕರನ್ನೊಳಗೊಂಡ ಪಿಎಲ್‍ಡಿ ಬ್ಯಾಂಕ್‍ನಲ್ಲಿ ಹಿಂದಿನ ಅಧ್ಯಕ್ಷ ಹೆಚ್.ಆರ್. ಮಲ್ಲಕಾರ್ಜನಯ್ಯ, ಉಪಾಧ್ಯಕ್ಷೆ ರಾಧಮ್ಮ ವೆಂಕಟೇಗೌಡರವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಪಿಎಲ್‍ಡಿ ಬ್ಯಾಂಕ್ ಕಚೇರಿಯಲ್ಲಿ ಮೇ 16ರಂದು ಸಿದ್ದರಾಜು ಹಾಗೂ ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭಗಳಲ್ಲಿ ಬ್ಯಾಂಕ್‍ನ ಎಲ್ಲಾ ನಿರ್ದೇಶಕರುಗಳು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥ್‍ನಾರಾಯಣ್, ಅರಕೆರೆ ಶಂಕರ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಸಿ.ರಾಮಯ್ಯ, ಮುಖಂಡರಾದ ಜಯರಾಮ್, ಚಿಕ್ಕರಂಗಯ್ಯ, ದಲಿತ ವೆಂಕಟೇಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
