ಅಶ್ವಥಕಟ್ಟೆ ಉಪಯನ ಹಾಗೂ ವಿವಾಹ ದೀಕ್ಷಾ ಪೂಜಾ ಕಾರ್ಯಕ್ರಮ

ಎಂ ಎನ್ ಕೋಟೆ :

        ಪ್ರಕೃತಿ ನಾಮ್ಮೆಲ್ಲರ ತಾಯಿ ಅದನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಬೆಟ್ಟದಹಳ್ಳಿ ಗವಿಮಠಧ್ಯಕ್ಷರಾದ ಶ್ರೀ ಚಂದ್ರಶೇಖರಸಾಮಿಗಳು ತಿಳಿಸಿದರು.

      ಗುಬ್ಬಿ ತಾಲ್ಲೂಕಿನ ಮುದ್ದಪುರ ಗೊಲ್ಲರಹಟ್ಟಿಯ ಕೋಟೆ ಗುಡ್ಡದ ರಸ್ತೆಯಲ್ಲಿ ನಿಂಬಾದೇವಿ ಸಮೇತ ಅಶ್ವಥ ನಾರಾಯಣ ವೃಕ್ಷರಾಜ ಅಶ್ವಥಕಟ್ಟೆ ಉಪಯನ ಹಾಗೂ ವಿವಾಹ ದೀಕ್ಷಾ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದು ಆಧುನಿಕ ವಿಜಾನ ತಂತ್ರಜಾನದ ಹಾವಳಿಯಿಂದ ನಮ್ಮ ಪರಿಸರ ಹಾಳಾಗುತ್ತಿದ್ದು ಮುಂದಿನ ದಿನಮಾನದಲ್ಲಿ ಉಸಿರಾಡುವ ಗಾಳಿಗೂ ಹಣ ನೀಡಿ ಪಡೆಯುವಂತಾಗುತ್ತದೆ ಎಂದರು.

        ಅಂತರ್ಜಲ ಮಟ್ಟ ಸಾಕಷ್ವು ಕುಸಿತವಾಗಿದ್ದು ರೈತರು ಕೊಳವೆ ಬಾವಿ ಕೊರೆಸುವ ಮೂಲಕ ಸಲ ಮಾಡಿಕೊಂಡು ನೆಮ್ಮದಿ ಕಳೆದುಕೊಳುವ ಪರಿಸ್ಥಿತಿಗೆ ಬಂದಿದ್ದಾರೆ. ಕೊಳೆವೆ ಬಾವಿ ಕೊರೆಸುವ ಬದಲು ಗಿಡ ಮರಗಳನ್ನು ಬೆಳೆಸುವ ಕಾರ್ಯ ಮಾಡಿದರೆ ಮುಂದಿನ ಪೀಳಿಗೆಗೆ ಉಳಿಸಿಕೊಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

      ಕೋಡಿಹಳ್ಳಿ ಮಠದ ಬಸವ ಬೃಂಗೇಶ್ವರ ಸ್ವಾಮೀಜಿ ಮಾತನಾಡಿ ಜನಸಂಖ್ಯೆ ಹೆಚುತ್ತಾ ಪರಿಸರದ ಮೇಲೆ ನಿರಂತರ ಆಕ್ರಮಣ ನಡೆಯುತ್ತಲೇ ಇದೆ. ಹಾಗಾಗಿ ನೈಸರ್ಗಿಕ ವಿಕೋಪಗಳು ಆಗಿದ್ದಾಂಗೆ ನಡೆಯುತ್ತಲೇ ಇದೆ. ಆದರೂ ಮಾನವನ ದುರಾಸೆಯಿಂದ ಕಾಡು ನಾಶ ಮಾತ್ರ ನಿಂತಿಲ್ಲ ಇತ್ತೀಚಿಗೆ ಕಾಡಿಗೆ ಬೆಂಕಿ ಇಟ್ಟು ನಾಶ ಮಾಡುವ ಕೆಟ್ಟ ಕೃತ್ಯಗಳು ಸಮಾಜದಲ್ಲಿ ನಡೆಯುತ್ತಿರುವುದು ದುರಂತದ ವಿಷಯವಾಗಿದೆ ಎಂದು ತಿಳಿಸಿದರು.

      ಈ ಭೂಮಿ ಉಳಿಯಬೇಕು ಎಂದರೆ ಪ್ರತಿಯೊಬ್ಬರ್ ಅರಣ್ಯ ಬೆಳೆಸುವ ಕೆಲಸ ಮಾಡಬೇಕು. ಹಿಂದೆ ಪ್ರತಿ ಗ್ರಾಮದ ಒಳ ಭಾಗದಲ್ಲಿ ಅರಳಿ ಮರ ಬೇವಿನ ಮರಗಳನ್ನು ಬೆಳೆಸಲಗುತ್ತಿತ್ತು. ಆದರೆ ಇಂದಿನ ದಿನದಲ್ಲಿ ಇರುವ ಗಿಡ ಮರಗಳನ್ನು ಕೊಯ್ಯುವ ಕೆಲಸಕ್ಕೆ ಮುಂದಾಗಿದ್ದಾರೆ ಇದು ಒಳಿತಲ್ಲ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ಅ,ನ, ಲಿಂಗಪ್ಪ , ಎಂ ಎನ್ ಭೀಮಶೆಟ್ಟಿ , ವಿಜಯ್ ಕುಮಾರ್ ಹಾಗೂ ಗ್ರಾಮಸ್ತರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link