ಮಧುಗಿರಿ
ಶಿಕ್ಷಕನೊಬ್ಬ ತನ್ನ ಪತ್ನಿ ಹೆಸರಿನಲ್ಲಿರುವ ಮನೆಯನ್ನು ಭೋಗ್ಯಕ್ಕೆ ನೀಡುವುದಾಗಿ ಹೇಳಿ ಮಹಿಳೆಯೊಬ್ಬಳಿಂದ ಸುಮಾರು 4 ಲಕ್ಷ ರೂ. ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ.
ತುಮಕೂರು ಸರಕಾರಿ ಮಹಿಳಾ ಕಾಲೇಜ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕುಮಾರಿ ಬಬಿತ ಜಯಪ್ಪ ಎನ್ನುವವರಿಂದ ತುಮಕೂರು ನಗರದ ಸಿರಾ ಗೇಟ್ ಸಮೀಪವಿರುವ ಬಸವಣ್ಣನ ಪಾಳ್ಯದಲ್ಲಿನ ಮುನಿಸಿಪಲ್ ಖಾತೆ 130 ರಲ್ಲಿನ 15*20 ಅಳತೆಯಲ್ಲಿನ 2ನೇ ಅಂತಸ್ತಿನ ಮನೆಯನ್ನು 2013ರ ನ. 16 ರಂದು ಭೋಗ್ಯಕ್ಕೆ ನೀಡುತ್ತೇನೆಂದು ಮಹಿಳೆಯನ್ನು ನಂಬಿಸಿ ಭೋಗ್ಯ ಪತ್ರ ಮಾಡಿಸಿ ಮೊದಲ ಕಂತಾಗಿ 2.5 ಲಕ್ಷ ರೂ. ಮುಂಗಡ ಹಣ ಪಡೆದು ನಂತರ ಬ್ಯಾಂಕಿನವರು ನಮ್ಮ ಮನೆ ಹರಾಜು ಮಾಡಲು ಬಂದಿದ್ದಾರೆ ಮತ್ತೆ 1.5 ಲಕ್ಷರೂ.ಗಳನ್ನು ನೀಡಿ ಮನೆಯನ್ನು ನಿಮಗೆ ಬಿಟ್ಟುಕೊಡುತ್ತೇನೆ ಎಂದು ಹೇಳಿದವರು ಇದೂವರೆವಿಗೂ ಹಣ ವಾಪಸ್ಸು ನೀಡಿಲ್ಲ ಎಂದು ಬಬಿತ ಆರೋಪಿಸಿದ್ದಾರೆ.
ನಮಗೆ ಕಳೆದ ನಾಲ್ಕು ವರ್ಷಗಳಿಂದ ನಾವು ನೀಡಿರುವ ಹಣವನ್ನು ನೀಡದೆ ಸತಾಯಿಸುತ್ತಿದ್ದರೂ ಈ ಬಗ್ಗೆ ಪ್ರಶ್ನಿಸಿದಾಗ ತಾನು ಕರ್ತವ್ಯ ನಿರ್ವಹಿಸುತ್ತಿರುವ ಕೊರಟಗೆರೆ ತಾ. ಹೊಳವನಹಳ್ಳಿ ಹೋಬಳಿಯ ಹನುಮೇನಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಅಕ್ಷರ ದಾಸೋಹ ಕಾರ್ಯಕ್ರಮದ ಎಸ್ ಬಿ ಎಂ ಬ್ಯಾಂಕ್ನ ಖಾಲಿ ಚೆಕ್ ನಂ 926759 ಶಿವಣ್ಣ ನೀಡಿ, ನಾನು ಹಣ ಮರುಪಾವತಿ ಮಾಡುವವರೆಗೂ ನಿಮ್ಮ ಬಳಿಯೇ ಇರಲಿ.
ಹಣ ಕೊಟ್ಟು ವಾಪಸ್ಸು ಪಡೆಯುತ್ತೇನೆಂದು ಹೇಳಿ ಈಗ ಸತಾಯಿಸುತ್ತಿದ್ದಾರೆ. ಅನಂತರ ಶಿಕ್ಷಕ ಶಿವಣ್ಣ ನೀಡಿದ ಬ್ಯಾಂಕ್ ಚೆಕ್ನ್ನು ನಗದಾಗಿ ಬದಲಾಯಿಸಲು ಶಾಖೆ ಬಳಿ ಬಬಿತ ಹೋಗಿದ್ದು, ಖಾತೆಯಲ್ಲಿ ಹಣವಿಲ್ಲವೆಂದು ತಿಳಿದು ಮನೆ ಮಾಲೀಕನ ಬಳಿ ಹಣ ಕೇಳಲು ಹೋದಾಗ, ನಿಮಗೆ ನೀಡಿರುವ ಖಾಲಿ ಚೆಕ್ ಕಾಣೆಯಾಗಿದೆ. ಈ ಬಗ್ಗೆ ಪೋಲೀಸರಿಗೆ ದೂರು ನೀಡಲಾಗಿದೆ ಎಂದು ಹೇಳಿ ಮಹಿಳೆಯನ್ನು ಬರಿಗೈಯಲ್ಲಿ ವಾಪಸ್ಸು ಕಳುಹಿಸಿದ್ದಾನೆ.ಶಿಕ್ಷಕ ವಂಚಿಸಿರುವ ಬಗ್ಗೆ ಕೊರಟಗೆರೆ ಮತ್ತು ಮಧುಗಿರಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ 2018 ಆ.10 ರಂದು ಬಬಿತಾ ದೂರು ನೀಡಿದ್ದು, ತನಗೆ ನ್ಯಾಯ ಒದಗಿಸಿಕೊಡುವಂತೆ ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ