ಬೆಂಗಳೂರು
ಇಸ್ರೋದ ಮಾಜಿ ಅಧ್ಯಕ್ಷ ದಿವಂಗತ ವಿಜ್ಞಾನಿ ಯು.ಆರ್.ರಾವ್ ಅವರ ಮನೆ ಬಾಗಿಲು ಮುರಿದು ಕಳವು ಮಾಡಿ ಪರಾರಿಯಾಗಿರುವ ಘಟನೆ ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ವಿಜ್ಞಾನಿ ಯು.ಆರ್. ರಾವ್‍ರವರ ನಿಧನ ಬಳಿಕ ಅವರ ಪುತ್ರ ಬೇರೆ ಕಡೆ ವಾಸಿಸುತ್ತಿದ್ದು ಒಂದು ವರ್ಷದಿಂದ ಮನೆ ಖಾಲಿ ಇತ್ತು.ಮನೆ ಆವರಣದ ಶೆಡ್‍ನಲ್ಲಿ ಕಾರು ಚಾಲಕ ವಾಸಿಸುತ್ತಿದ್ದು ಇಂದು ಬೆಳಿಗ್ಗೆ ಮನೆಯ ಬಾಗಿಲು ಮುರಿದಿರುವುದನ್ನು ಗಮನಿಸಿದ ಚಾಲಕ ರಾವ್ ಅವರ ಪುತ್ರನಿಗೆ ವಿಷಯ ತಿಳಿಸಿದ್ದಾರೆ.
ಮನೆಗೆ ಬಂದ ರಾವ್ ಅವರ ಪುತ್ರ ಒಳ ಹೋಗಿ ನೋಡಿದಾಗ ಬೆಲೆ ಬಾಳುವ ವಸ್ತುಗಳನ್ನು ದುಷ್ಕರ್ಮಿಗಳು ದೋಚಿರಲಿಲ್ಲ ಸಣ್ಣ ಪುಟ್ಟ ವಸ್ತುಗಳನ್ನ ಮಾತ್ರ ಕಳವು ಮಾಡಲಾಗಿದ್ದು ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಜೀವನ್ ಭೀಮಾನಗರ ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ