ಮಹಿಳಾ ಕುಸ್ತಿ ಪಂದ್ಯಾವಳಿಗಳಲ್ಲಿ ಆಳ್ವಾಸ್ ಕಾಲೇಜಿನ ವಿಧ್ಯಾರ್ಥಿನಿ ಹರ್ಷೀತಾ ಜಯಗಳಿಸಿದರು

ಹರಿಹರ:

        ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಗ್ರಾಮದೇವತೆ ಊರಮ್ಮದೇವಿ ಜಾತ್ರೋತ್ಸವದ ಅಂಗವಾಗಿ ಬಯಲು ಜಂಗಿ ಕುಸ್ತಿಪಂದ್ಯವಾಳಿಗಳು ಪ್ರೇಕ್ಷರ ಕೆಕೆ ಶಿಳ್ಳೆ-ಚಪ್ಪಾಳೆಗಳ ನಡುವೆ ಮುಕ್ತಾಯ ಗೊಂಡಿತು.

        ರಾಜ್ಯ ಹೊರ ರಾಜ್ಯಗಳಿಂದ ಬಂದಿರುವ ಪೈಲ್ವಾನರುಗಳು ಅಖಾಡದಲ್ಲಿ ನಡೆಸಿರು  ಕಾದಾಟ ಮೈನವಿರೇಳಿಸುವಂತಿದ್ದು, ಪ್ರೇಕ್ಷಕರು ಉಸಿರು ಬಿಗಿಹಿಡಿದುಕೊಂಡು ನೋಡುವಂತಾಗಿತ್ತು. ಮಹರಾಷ್ಟ್ರಾದ ನಾಮದೇವ, ಹರಿಯಾಣದ ಅಜೇಯ, ವಿಜಯ್, ಸೇರಿದಂತೆ ಉತ್ತರಪ್ರದೇಶ, ಕೊಲ್ಲಾಪುರ ಮತ್ತು ಬೆಳಗಾವಿ ಕುಸ್ತಿಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಅಂತಿಮವಾಗಿ ಬಹುಮಾನ ಪಡೆಯಲು ಸೆಣೆಸಾಡುತ್ತಿದ್ದಾರೆ.

       ಜನಾಕರ್ಷಣೆಗಳಿಸಿದ ಮಹಿಳಾ ಪಟುಗಳು ಪಂದ್ಯಾವಳಿಯಲ್ಲಿ ಮೊದಲಬಾರಿ 30 ಕ್ಕೂ ಹೆಚ್ಚು ಮಹಿಳಾ ಕುಸ್ತಿಪಟುಗಳು ಭಾಗವಹಿಸಿದ್ದು, ಜನಾಕರ್ಷಣೆಗೆ ಕಾರಣವಾಗಿದೆ. ಬೆಂಗಳೂರು, ದಾವಣಗೆರೆ, ಮಂಗಳೂರಿನ ಮೂಡಬಿದ್ರಿಯ ಆಳ್ವಾಸ್ಸಂಸ್ಥೆಯ ರಾಷ್ಟ್ರೀಯ ಕ್ರೀಡಾಪಟುಗಳು ಸಹ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದು, ವಿಷೇಶವಾಗಿತ್ತು.

        ರೋಚಕ ಪ್ರದರ್ಶನ ನೀಡದ ಮಹಿಳಾ ಕ್ರೀಡಾ ಪಟುಗಳು ಆಕರ್ಷಕ ಕುಸ್ತಿಸೆಣಸಾಟ ನೆರೆದಿದ್ದ ಜನಸಮೂಹಕ್ಕೆ ಸಿಳ್ಳೆ ಚಪ್ಪಾಳೆಗಳಿಗೆ ಪ್ರೇರಣೆ ನೀಡಿತು. ಕುಸ್ತಿಪಟುಗಳು ಹಾಕುವಪ್ರತಿಪಟ್ಟಿಗೂ ಜನರುಸಿಳ್ಳೆಹಾಕಿ, ಕುಣಿದು ಕುಪ್ಪಳಿಸಿದರು.ಪಂದ್ಯಾವಳಿಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ಕ್ರಮವಾಗಿ ಒಂದು ಕೆ.ಜಿ, ಅರ್ಧ ಹಾಗೂ ಕಾಲು ಕೆ.ಜಿ ಬೆಳ್ಳಿಗಧೆ, ನಗದು ಹಣ ಹಾಗೂ ಪಾರಿತೋಷಕಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ.

       ಕಾಗಿನೆಲೆ ಗುರುಪೀಠದ ನಿರಂಜನಾನಂದ ಸ್ವಾಮೀಜಿ, ಶಾಸಕಎಸ್.ರಾಮಪ್ಪ, ಉತ್ಸವಸಮಿತಿ ಅಧ್ಯಕ್ಷರಾದ ಪರುಶುರಾಮ ಕಾಟ್ವೆ ಸದಸ್ಯರು ಹಾಗೂ ಗಣ್ಯರುಸೇರಿದಂತೆ ಸಾವಿರಾರು ಜನರು ಕುಸ್ತಿ ಪಂದ್ಯಾವಳಿ ವೀಕ್ಷಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap