ಸದಾಶಿವ ಆಯೋಗದ ವರದಿ : ಸುಪ್ರೀಂ ಕೋರ್ಟ್ ಆದೇಶ ಜಾರಿಗೆ ಒತ್ತಾಯ

ಶಿರಾ

     ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ನೀಡಿದ್ದು, ಈ ಕೂಡಲೆ ರಾಜ್ಯ ಸರ್ಕಾರ ನ್ಯಾಯಾಲಯದ ತೀರ್ಪಿಗೆ ಅನುಸಾರ ವರದಿಯನ್ನು ಜಾರಿಗೊಳಿಸುವಂತೆ ಬುಧವಾರ ಶಿರಾ ತಾಲ್ಲೂಕಿನ ಮಾದಿಗ ಸಂಘಟನೆಗಳ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

     ತಾ.ಪಂ. ಕಚೆರಿಗೆ ಬುಧವಾರ ಜಿಲ್ಲಾಧಿಕಾರಿಗಳು ಆಗಮಿಸಿರುವ ಸುದ್ದಿ ತಿಳಿದ ಮಾದಿಗ ಸಂಘಟನೆಗಳ ಪ್ರಮುಖರು, ಕಚೆರಿಗೆ ತೆರಳಿ ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಅವರನ್ನು ಭೇಟಿ ಮಾಡಿ, ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿರುವ ಮನವಿಯನ್ನು ನೀಡಿದರು.

     ದಲಿತ ಮುಖಂಡ ಜೆ.ಎನ್.ರಾಜಸಿಂಹ ಮಾತನಾಡಿ, ಸದಾಶಿವ ಆಯೋಗದ ವರದಿಗೆ ಸಂಬಂಧಿಸಿದಂತೆ ವ್ಯಾಪಕ ಹೋರಾಟಗಳನ್ನು ಮಾಡಲಾಗಿದೆ. ಸದರಿ ವರದಿಯಿಂದ ರಾಜ್ಯದ ದಲಿತರಿಗೆ ಆಗುವ ಅನುಕೂಲಗಳ ಬಗ್ಗೆಯೂ ಸರ್ಕಾರದ ಗಮನ ಸೆಳೆಯಲಾಗಿತ್ತು ಎಂದರು.
ಸದಾಶಿವ ಆಯೋಗದ ವರದಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆ. 28 ರಂದು ವರದಿ ಕಾನೂನಾತ್ಮಕವಾಗಿರುವುದರ ಬಗ್ಗೆ ಆದೇಶವನ್ನು ನೀಡಿದೆ. ಈ ಕೂಡಲೆ ನಮ್ಮ ರಾಜ್ಯ ಸರ್ಕಾರ ಈ ಸದಾಶಿವ ಆಯೋಗದ ವರದಿಯನ್ನು ಪರಿಗಣಿಸಿ ಎಬಿಸಿಡಿ ವರ್ಗೀಕರಣ ಮಾಡುವಂತೆ ರಾಜಸಿಂಹ ಒತ್ತಾಯಿಸಿದರು.

     ದಲಿತ ಮುಖಂಡರಾದ ಗಿರಿಯಪ್ಪ, ನಗರಸಭೆಯ ಮಾಜಿ ಸದಸ್ಯರಾದ ಬಸವರಾಜು, ಮಂಜುನಾಥ್, ಶಾಂತರಾಜು, ಟೈರ್ ರಂಗನಾಥ್, ಬಿ.ಸಿ.ರಾಜಣ್ಣ, ಅಪ್ಪಿ ರಂಗನಾಥ್, ಲಕ್ಷ್ಮೀಕಾಂತ್, ಮಾಗೋಡು ಯೋಗಾನಂದ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap