ತುಮಕೂರು
ಜೈವಿಕ ಗೊಬ್ಬರಗಳನ್ನು ಬಳಸುವ ಮೂಲಕ ಹೆಚ್ಚು ಬೆಳೆಯನ್ನು ಬೆಳೆಯುವ ಮೂಕ ಆರೋಗ್ಯಕರ ವಾತವರಣ ನಿರ್ಮಾಣಕ್ಕೆ ರೈತರು ಕೈಜೊಡಿಸಬೇಕು ಐಡಿಎಫ್ ಸಂಸ್ಥೆಯ ಜೀವನ ಉತ್ತೇಜನಾಧಿಕಾರಿ ಗುರುದತ್ ತಿಳಿಸಿದರು.
ತಾಲ್ಲೂಕಿನ ಹೆಬ್ಬೂರು ಹೋಬಳಿ ಎನ್.ಕೆ.ಗೊಲ್ಲರಹಟ್ಟಿಯಲ್ಲಿ ಐಡಿಎಫ್ ಸಂಸ್ಥೆ ಬೆಂಗಳೂರು, ಸುಪ್ರಜಾ ಫೌಂಡೇಷನ್ ಮತ್ತು ಕೊಲ್ಲಾಪುರದಮ್ಮ ರೈತ ಉತ್ಪಾದಕರ ಕಂಪನಿಯ ಸಂಯುಕ್ತಾಶ್ರಯದಲ್ಲಿ ಪ್ರಗತಿ ರೈತ ಗಂಗಣ್ಣನವರ ಜಮೀನಿನಲ್ಲಿ ಏರ್ಪಡಿಸಿದ್ದ ಟಮೋಟೋ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ರೈತರು ಸಮಗ್ರ ಕೃಷಿ ಮಾಡಿದಾಗ ಮಾತ್ರ ವ್ಯವಸಾಯದಲ್ಲಿ ನಷ್ಟವನ್ನು ಕಾಣಲು ಸಾಧ್ಯವಿಲ್ಲ. ಟೋಮಾಟೋ ಬೆಳೆಯನ್ನು ಎಲ್ಲ ಕಾಲದಲ್ಲಿಯು ಬೆಳೆಯಬಹುದು. ಆದರೆ ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಮಾತ್ರ ಎಲೆ ಮುದುಡು ರೋಗ ಬರಬಹುದು. ರೈತರು ಮುಂಜಾಗ್ರತವಾಗಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ಸಸಿಮಡಿಯಿಂದಲೇ ಆಳವಡಿಸಬೇಕು ಎಂದರು.
ಕೊಲ್ಲಾಪುರದಮ್ಮ ರೈತ ಉತ್ಪಾದಕರ ಕಂಪನಿಯ ಸಿಇಒ ಸುರೇಶ್ ಮಾತನಾಡಿ, ರೈತರು ಹಿಂದಿನ ಕಾಲದಲ್ಲಿ ಮಾಡುತಿದ್ದ ವ್ಯವಸಾಯವನ್ನು ಇಂದು ಮಾಡಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಬಹುದು ಎಂದುರು. ಭೂಮಿಗೆ ಕಾಂಪೋಸ್ಟ್ ಗೊಬ್ಬರವನ್ನು ಮಣ್ಣಿಗೆ ಬೆರೆಸಿ ಭೂಮಿಯನ್ನು ಹದಮಾಡಿ ಸಸಿಗಳನ್ನು ನಾಟಿ ಮಾಡಿದಾಗ ಉತ್ತಮ ಇಳುವರಿ ಪಡೆಯಬಹುದು ಎಂದು ತಿಳಿಸಿದರು.
ಕ್ಷೇತ್ರೋತ್ಸವದಲ್ಲಿ ಜೀವನ ಉತ್ತೇಜನಾಧಿಕಾರಿ ಹರ್ಷಿತ, ಕಂಪನಿಯ ವ್ಯವಸ್ಥಾಪಕ ಡಿ.ಲೋಕೇಶ್, ಪ್ರಗತಿ ರೈತ ಗಂಗಣ್ಣ, ಕ್ಷೇತ್ರಾಧಿಕಾರಿಗಳಾದ ಮಧುಸೂಧನ್.ಕೆ, ಮೋಹನ್‍ಕುಮಾರ್.ಸಿ, ನರಸಿಂಹಮೂರ್ತಿ, ಕೃಷಿಕ ಸಂಘದ ಸದಸ್ಯರು ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
