ತೆಂಗು ಅಡಿಕೆಗೆ ಹನಿ ನೀರಾವರಿ ಬಳಸಿ

ಹುಳಿಯಾರು:

      ತೆಂಗು, ಅಡಿಕೆಗೆ ಹನಿ ನೀರಾವರಿ ಅಳವಡಿಸಿಕೊಳ್ಳುವಂತೆ ಪ್ರಗತಿಪರ ಕೃಷಿಕ ರಂಗನಕೆರೆ ಮಹೇಶ್ ಸಲಹೆ ನೀಡಿದ್ದಾರೆ.
ಸರಿಯಾದ ಮಳೆಯಿಲ್ಲದ ಪರಿಣಾಮ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು 1 ಸಾವಿರ ಅಡಿ ಕೊರದರೂ ನೀರು ಸಿಗದಾಗಿದೆ. ಬರುತ್ತಿದ್ದ ನೀರು ಬತ್ತಿ ಕೊಳವೆಬಾವಿಗಳಲ್ಲಿ ನೀರ ಇಲ್ಲದಾಗಿದೆ. ಹಾಗಾಗಿ ಇರುವ ನೀರನ್ನು ಕೆರೆಯಂಗೆ ಕಟ್ಟಿ ದುರ್ಬಳಕೆ ಮಾಡಿಕೊಳ್ಳದೆ.

       ಹನಿ ನೀರಾವರಿ ಅಳವಡಿಸಿ ಅಗತ್ಯಕ್ಕೆ ತಕ್ಕಷ್ಟು ನೀರು ಬಳಸಿದರೆ ಅಂತರ್ಜಲವೂ ಉಳಿಯುತ್ತದೆ, ತೋಟವೂ ಉಳಿಯುತ್ತದೆ.ಕಳೆದ 10 ವರ್ಷಗಳಿಂದ ಹನಿ ನೀರಾವರಿ ಮೂಲಕ ನನ್ನ ತೋಟಕ್ಕೆ ನೀರು ಹರಿಸುತ್ತಿದ್ದೇನೆ. ಫಸಲು ಸ್ವಲ್ಪ ಕಡಿಮೆಯಾದರೂ ಮರಗಳು ಕೆಟ್ಟಿಲ್ಲ. ಆದ್ರೆ ಕಳೆದ 10 ವರ್ಷಗಳ ಹಿಂದೆ ಕೊಳವೆಬಾವಿ ತೋಡಿಸಿದ ಕೆಲ ರೈತರು ತೋಟದಲ್ಲಿ ನೀರನ್ನು ಕೆರೆಯಂತೆ ನಿಲ್ಲಿಸುತ್ತಿದ್ದರು. ಈಗ ಅವರಿಗೆ ಡ್ರಿಪ್ ವಲ್ಲೂ ನೀರು ಹರಿಸಲು ನೀರು ಇಲ್ಲದಾಗಿದೆ.

       ಮತ್ತೊಂದು ಕೊಳವೆ ಬಾವಿ ಕೊರೆಸಿ ಕಷ್ಟ ಪಟ್ಟು ಈಗ ಡೀಪ್ ನಲ್ಲಿ ಬಿಟ್ಟರೂ ಮರ ಉಳಿಸುವುದು ಕಷ್ಟವಾಗಿದೆ. ಏಕೆಂದರೆ ಹೆಚ್ಚು ನೀರು ಸೇರಿಸಿ ರೂಢಿ ಮಾಡಿದ್ದಾರೆ. ಆದ್ದರಿಂದ ಎಲ್ಲ ರೈತರು ಮುಂದಿನ ದಿನಗಳಲ್ಲಿ ಹನಿ ನೀರಾವರಿ ಬಳಿಸಿ ನೀರು ಉಳಿಸಿ ಜತೆ ಮರವನ್ನು ಉಳಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

                          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link