ಅವಶ್ಯಕವಿರುವಷ್ಟೇ ನೀರು ಸುಧಾರಿತ ಕೃಷಿ ಪದ್ದತಿ ಅನುಸರಿಸಿ : ವಜೂಭಾಯಿ ರೂಢವಾಲಾ

ಬೆಂಗಳೂರು

       ಅವಶ್ಯಕವಿರುವಷ್ಟೇ ನೀರು,ಸಮರ್ಪಕ ನಿರ್ವಹಣೆ ಸುಧಾರಿತ ಕೃಷಿ ಪದ್ದತಿಗಳನ್ನು ರೈತರು ಅನುಸರಿಸಿದರೆ ಕೃಷಿ ಕ್ಷೇತ್ರದಲ್ಲಿ ಭಾರತವು ಜಗತ್ತಿನಲ್ಲೇ ಗುರುತಿಸಿಕೊಳ್ಳುವಂತಹ ಸಾಧನೆ ಮಾಡಬಹುದು ಎಂದು ರಾಜ್ಯಪಾಲ ವಜೂಭಾಯಿ ರೂಢವಾಲಾ ತಿಳಿಸಿದರು.

        ಭಾರತದಲ್ಲಿ ಮಳೆ ನೀರು ನಿರ್ವಹಣೆ ವೈಫಲ್ಯದಿಂದ ಕೃಷಿ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ಕೃಷಿ ಅಭಿವೃದ್ಧಿಗಾಗಿ ಕೃಷಿ ವಿಶ್ವ ವಿದ್ಯಾನಿಲಯಗಳು ಮಾಡಿರುವ ಸಂಶೋಧನೆ ಹೊಸ ಹೊಸ ಅವಿಷ್ಕಾರಗಳನ್ನು ರೈತರು ಕೃಷಿಯಲ್ಲಿ ಅಳವಡಿಸಿಕೊಂಡು ಇಸ್ರೇಲ್ ಕೃಷಿ ಮಾದರಿಯನ್ನು ಅನುಸರಿಸಿದರೆ ವಿಶ್ವದಲ್ಲಿ ಅತ್ಯುತ್ತಮ ಸಾಧನೆ ಮಾಡಬಹುದು ಎ<ದರು.

       ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಗುರುವಾರ ಆಯೋಜಿಸಿದ್ದ ನಾಲ್ಕು ದಿನಗಳ ಕೃಷಿ ಮೇಳ 2018 ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು ಎಷ್ಟೇ ಪ್ರಮಾಣದಲ್ಲಿ ಲಭ್ಯವಿದ್ದರೂ ಅವಶ್ಯಕವಿರುವಷ್ಟೇ ಮಾತ್ರ ನೀರನ್ನು ಬಳಸಿ ಉತ್ತಮ ಕೃಷಿಪದ್ದತಿಗಳನ್ನು ಅನುಸರಿಸಬೇಕು ಎಂದು ಹೇಳಿದರು

       ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ನೆರವು ಬೆಂಬಲ ನೀಡುವುದು. ಸರ್ಕಾರಗಳ ಕರ್ತವ್ಯ, ಗ್ರಾಮೀಣ ಜನತೆ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಕೃಷಿಕರನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಅವಶ್ಯಕವಿರುವ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿ ಕೈಗಾರಿಕೆ ಉತ್ಪಾದನೆ, ಕೃಷಿ ಕ್ಷೇತ್ರದ ಉತ್ಪಾದನೆಯಲ್ಲಿ ತೊಡಗಿರುವ ಉತ್ಪಾದಕರನ್ನು ಬೆಂಬಲಿಸಬೇಕಿದೆ. ಪುರಾತನ ಕೃಷಿ ಪದ್ಧತಿಗಳನ್ನು ಕೈಬಿಟ್ಟು ಹೊಸ ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

        ಕೃಷಿ ಉತ್ಪಾದನೆಗೆ ತಕ್ಕಂತೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ತಿಳಿಸಿದರು.

ವಿಶೇಷ ಯೋಜನೆ

       ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೃಷಿ ಸಚಿವ ಶಿವಶಂಕರ ರೆಡ್ಡಿ ಮಾತನಾಡಿ ಇಸ್ರೇಲ್ ಮಾದರಿ ಕೃಷಿ ಅಳವಡಿಸಿಕೊಳ್ಳಲು ಸರ್ಕಾರ ರೈತರಿಗೆ ಎಲ್ಲ ಸಹಕಾರ ಮಾರ್ಗದರ್ಶನ ನೀಡಲಿದೆ. ಸಾವಯವ, ಶೂನ್ಯ ಬಂಡವಾಳ ಕೃಷಿ, ಸಿರಿಧಾನ್ಯ ಬೆಳೆ ಅಭಿವೃದ್ಧಿ ಕುರಿತಂತೆ ವಿಶೇಷ ಯೋಜನೆ ರೂಪಿಸಿದೆ ಎಂದು ತಿಳಿಸಿದರು.

        ಕೃಷಿಯ ಅನೇಕ ವಿಭಾಗಗಳನ್ನು ಒಗ್ಗೂಡಿಸಿ ಸಮನ್ವಯತೆ ಸಾಧಿಸಲು ಕೃಷಿ ಬಜೆಟ್ ಕ್ಯಾಬಿನೆಟ್ ರಚಿಸಲಾಗಿದೆ. ಖಾಸಗಿ ಕೃಷಿ ವಿವಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸದ್ಯದಲ್ಲೇ ಸರ್ಕಾರ ಅಗತ್ಯ ಕಾನೂನನ್ನು ರಚಿಸಲಿದೆ. ಕೃಷಿ ವಿವಿ ಸಂಶೋಧನೆಗಳು, ಅವಿಷ್ಕಾರ ಪ್ರಯೋಜನಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಹೊಸ ಕಾರ್ಯ ಯೋಜನೆ ರೂಪಿಸಲಾಗಿದೆ. ವಿಶ್ವ ವಿದ್ಯಾ ನಿಲಯಗಳು ಕೈಗೊಳ್ಳುವ ಸಂಶೋಧನೆಯನ್ನು ಮೌಲ್ಯ ಮಾಪನಕ್ಕೆ ಒಳಪಡಿಸುವ ಸಮಿತಿ ರಚನೆಗೆ ಚಿಂತನೆ ನಡೆದಿದೆ ಎಂದರು.

ಪ್ರಶಸ್ತಿಪ್ರಧಾನ

        ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಕನ್ನೂರು ಹೆಗ್ಗರಣಿ ಗ್ರಾಮದ ಪ್ರಸಾದ ರಾಮ ಹೆಗಡೆ ಅವರಿಗೆ ಅತ್ಯುತ್ತಮ ತೋಟಗಾರಿಕಾ, ಡಾ.ಎಂ.ಎಚ್.ಮರೀಗೌಡ, ರಾಜ್ಯಮಟ್ಟದ ಪ್ರಶಸ್ತಿ ನೀಡಲಾಯಿತು.

         ಕೋಲಾರ ಜಿಲ್ಲೆಯ, ಕೋಲಾರ ತಾಲ್ಲೂಕಿನ ಮದನಹಳ್ಳಿ ಗ್ರಾಮದ ಎಂ.ಎನ್.ರವಿ ಶಂಕರ್ ಅವರಿಗೆ ಕೆನರಾ ಬ್ಯಾಂಕ್ ಪ್ರಾಯೋಜಿತ ಕೆನ್ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿ ನೀಡಲಾಯಿತು. ಅದೇ ವಿಭಾಗದಲ್ಲಿ ಅತ್ಯುತ್ತಮ ರೈತ ಮಹಿಳೆ ಹಾಸನ ಜಿಲ್ಲೆಯ ಹೇಮ ಅನಂತ ಅವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.

4 ಹೊಸ ತಳಿಗಳ ಬಿಡುಗಡೆ

         ರಾಗಿ, ಕೆಎಂಆರ್-630 – ಅಲ್ಪಾವಧಿ ತಳಿ, 100 ದಿನಗಳ ಅವಧಿಯ ಬೆಳೆ, ಮುಂಗಾರಿಗೆ ಸೂಕ್ತವಾಗಿ ಪ್ರತಿ ಎಕರೆಗೆ 20 ಕ್ವಿಂಟಾಲ್ ಇಳುವರಿ, 2.50 ಟನ್ ಮೇವಿನ ಇಳುವರಿ, ಖುಷ್ಕಿಯಲ್ಲಿ 14 ಕ್ವಿಂಟಾಲ್ ಧಾನ್ಯದ ಇಳುವರಿ, 2 ಟನ್ ಮೇವಿನ ಇಳುವರಿ ದೊರೆಯಲಿದೆ.

        ಸೂರ್ಯಕಾಂತಿ ಕೆಬಿಹೆಚ್ -78, ಪ್ರತಿ ಎಕರೆಗೆ 10.14 ಕ್ವಿಂಟಾಲ್ ಇಳುವರಿ, 3.97 ಕ್ವಿಂಟಾಲ್ ಎಣ್ಣೆ ಇಳುವರಿ, ಬೂದಿ ರೋಗ ನಿರೋಧಕ 85 ದಿನಗಳ ಅವಧಿಯಲ್ಲಿ ಲಭ್ಯವಾಗುವ ಬೇಳೆ. ಸೋಯ ಅವರೆ, ಕೆಬಿಎಸ್ -23 ಪ್ರತಿ ಎಕರೆಗೆ 10 ಕ್ವಿಂಟಾಲ್ ಇಳುವರಿ. ಬೆಳೆ ಅವಧಿ 95 ದಿನಗಳು. ರೋಗ ನಿರೋಧಕ ಶಕ್ತಿ,

         ಖುಷ್ಕಿ ಹಾಗೂ ನೀರಾವರಿ ಸೂಕ್ತ ಬೆಳೆ – ಅಕ್ಕಿ ಅವರೇ ಕೆಬಿಆರ್ -1, ಪ್ರತಿ ಎಕರೆಗೆ 5.6 ಕ್ವಿಂಟಾಲ್ ಇಳುವರಿ. ಬೆಳೆ ಅವಧಿ 75 ದಿನಗಳು.

       ಉತ್ತಮ ಪೆಷಕಾಂಶವುಳ್ಳ ಬೆಳೆಯನ್ನು ಕೃಷಿ ಮೇಳದಲ್ಲಿ ರಾಜ್ಯಪಾಲರು ಬಿಡುಗಡೆ ಮಾಡಿದರು. ಕೃಷಿ ಮಾಹಿತಿಯನ್ನು ಒಳಗೊಂಡ ಕೃಷಿ ಕ್ಯಾಲೆಂಡರ್ ಅನ್ನು ರಾಜ್ಯಪಾಲರು ಬಿಡುಗಡೆ ಮಾಡಿದರು.

        ವೇದಿಕೆಯಲ್ಲಿ ಕೃಷಿ ವಿವಿ ಕುಲಪತಿ, ಡಾ.ರಾಜೇಂದ್ರ ಪ್ರಸಾದ್, ವಿಶ್ರಾಂತ ಕುಲಪತಿ ಡಾ.ಜಿ.ಕೆ.ವೀರೇಶ್, ಡಾ.ಕೆ.ನಾರಾಯಣ ಗೌಡ, ಕೃಷಿ ಸಂಶೋಧನಾ ನಿರ್ದೇಶಕರು, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap