ಸರ್ಕಾರಿ ಸೌಲಭ್ಯಗಳು ಸದ್ಬಳಕೆಯಾಗಲಿ : ರಮೇಶ್

ಚಿತ್ರದುರ್ಗ:

   ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹಣ ವಿನಿಯೋಗಿಸುತ್ತಿದ್ದು ಶೈಕ್ಷಣಿಕ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಡಯಟ್ ಉಪಪ್ರಾಂಶುಪಾಲ ಎನ್.ಎಂ.ರಮೇಶ್ ಹೇಳಿದರು. ನಗರದ ಡಯಟ್‍ನಲ್ಲಿ ಇಂದು ಜಿಲ್ಲೆಯ ಡಿ.ಎಲ್.ಇಡಿ ಕಾಲೇಜುಗಳ ಉಪನ್ಯಾಸಕರಿಗೆ ಏರ್ಪಡಿಸಿದ್ದ ಶೈಕ್ಷಣಿಕ ಕ್ಲಸ್ಟರ್ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ಮೌಲ್ಯಮಾಪನ ನಿರಂತರ, ಸಂಕೀರ್ಣವಾಗಿದ್ದು ಅದರಲ್ಲಿ ಸೂಕ್ಷ್ಮತೆ ಕಂಡುಬರುತ್ತದೆ. ಬದಲಾವಣೆಗೆ ಅನುಗುಣವಾಗಿ ಬೋಧನೆಯಲ್ಲಿ ಮಾರ್ಪಾಡು ಮಾಡಿಕೊಳ್ಳಬೇಕು.ಮೌಲ್ಯಮಾಪನ ಪ್ರಕ್ರಿಯೆಯನ್ನು ಸಮಗ್ರವಾಗಿ ಶಿಕ್ಷಕರು ಅರ್ಥೈಸಿಕೊಳ್ಳಬೇಕು ಎಂದರು.

    ಉಪನ್ಯಾಸಕ ಎಸ್.ಬಸವರಾಜು ಮಾತನಾಡಿ ಶಿಕ್ಷಕರ ಬೋಧನಾ ಪ್ರಕ್ರಿಯೆ ಯಶಸ್ವಿಯಾಗಲು ಅಣುಬೋಧನೆಯು ತರಬೇತಿ ತಂತ್ರವಾಗಿದೆ. ಪಾಠ ಪ್ರಸ್ತಾವನೆ, ವಿವರಣೆ, ಉದಾಹರಣೆ, ಪುನರ್ಬಲನ, ಶೋಧನಾತ್ಮಕ ಪ್ರಶ್ನೆಗಳನ್ನು ಕೇಳುವ ಕೌಶಲಗಳನ್ನು ಕರಗತ ಮಾಡಿಕೊಂಡರೆ ಬೋಧನೆ-ಕಲಿಕೆ ಯಶಸ್ವಿಯಾಗುತ್ತದೆ ಎಂದರು.

    ಚಳ್ಳಕೆರೆ ಡಿ.ಎಲ್.ಇಡಿ ಕಾಲೇಜು ಪ್ರಾಂಶುಪಾಲ ಮಂಜುನಾಥ್ ಮೌಲ್ಯಮಾಪನದ ಗುರಿ,ಉದ್ದೇಶಗಳ ಕುರಿತು ಉಪನ್ಯಾಸ ನೀಡಿದರು. ಹೊಸದುರ್ಗ ಕಾಲೇಜು ಪ್ರಾಂಶುಪಾಲ ನಾಸಿರುದ್ದೀನ್ ಉಪನ್ಯಾಸಕ ಬಿ.ವಿ.ತಿಪ್ಪೇಸ್ವಾಮಿ,ದೈಹಿಕ ಶಿಕ್ಷಕಿ ಶೋಭಾರಾಣಿ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link