ಚಿತ್ರದುರ್ಗ
ಸರ್ಕಾರದಿಂದ ಬರುವಂತಹ ಸಾರ್ವಜನಿಕ ಅನುದಾನವನ್ನು ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜು ತಿಳಿಸಿದರು.
ನಗರದ ತ.ರಾ.ಸು ರಂಗಮಂದಿರದಲ್ಲಿ ಅಸಂಘಟಿತ ಕಾರ್ಮಿಕರ ದಿನದ ಅಂಗವಾಗಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಮಿಕ ಸಮ್ಮಾನ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.,
ರಾಜ್ಯದಲ್ಲಿ ಶೇ 80 ರಿಂದ 90% ರಷ್ಟು ಕಾರ್ಮಿಕರೆ ಇರುವುದರಿಂದ ಅವರಿಗೆ ಇಲಾಖೆಯಲ್ಲಿರುವ ಯೋಜನೆ, ಸೌಲಭ್ಯಗಳ ಬಗ್ಗೆ ಗ್ರಾಮೀಣ ಮಟ್ಟದಲ್ಲಿ ಕಾರ್ಮಿಕ ಇಲಾಖೆಯು ಅರಿವು ಮೂಡಿಸಬೇಕು. ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯ ಮೂಲಕ ಕಾರ್ಮಿಕರು ಸೌಲಭ್ಯ ಪಡೆದು ಕೊಳ್ಳಬೇಕಿದೆ. ಸ್ಮಾರ್ಟ್ ಕಾರ್ಡ್ ಇಲ್ಲದವರಿಗೆ ಮನೆ ಮನೆಗೆ ಹೋಗಿ ಕೊಡಬೇಕು ಎಂದು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಕಾರ್ಮಿಕರಿಗೆ ನಿವೇಶನ ಇದ್ದಲ್ಲಿ ಸರ್ಕಾರದ ಯೋಜನೆಯಿಂದ ಮನೆ ಕಟ್ಟಿಕೊಳ್ಳಬಹುದು.
ಕಾರ್ಮಿಕರ ಮಕ್ಕಳಿಗೆ ವಾರ್ಷಿಕವಾಗಿ ತಮ್ಮ ಮಕ್ಕಳಿಗೆ 10 ಸಾವಿರ ರೂಗಳನ್ನು ವಿತರಿಸುವ ಕಾರ್ಯ ನಡೆಯುತ್ತದೆ. ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳುವಾಗ ಅಧಿಕಾರಿಗಳು ಅವರನ್ನು ಅಲೆದಾಡಿಸಬೇಡಿ ಸರಳವಾಗಿ ವರ ಕೆಲಸ ಮಾಡಿಕೊಡಿ ಎಂದು ಮನವಿ ಮಾಡಿದರು.
ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಗಾಯತ್ರಿ ಶ್ರೀರಾಮ್ ಮಾತನಾಡಿ ಯುದ್ದ ಕಾಲದಲ್ಲಿ ಪ್ರಾರಂಭವಾದ ರೆಡ್‍ಕ್ರಾಸ್ ಸಂಸ್ಥೆಯು, ಇಂದು 192 ರಾಷ್ಟ್ರಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದೆ. ಆರೋಗ್ಯದ ದೃಷ್ಠಿಯಿಂದ ರಕ್ತದಾನ, ನೇತ್ರದಾನ ಮುಂತಾದ ಜನೋಪಕಾರಿ ಕೆಲಸಗಳನ್ನು ಇದರ ಮುಖಾಂತರ ಮಾಡಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೆಡ್‍ಕ್ರಾಸ್ ಉಪಾಧ್ಯಕ್ಷ ವೀರೇಶ್, ಕಾರ್ಯದರ್ಶಿ ಮಜಾವುಲ್ಲಾ, ನಿರ್ದೇಶರಾದ ಡಾ. ಹರಿಣಿ, ಶ್ರಿ ನಿವಾಸ, ಶಿವರಾಮ ಹಾಗೂ ಜಿಲ್ಲಾ ಚಾಲಕರ ಸಂಸ್ಥೆಯ ಅಧ್ಯಕ್ಷ ಲಿಂಗೇಶ್ ಉಪಸ್ಥಿತರಿದ್ದರು.ಡಾ;ಬಿ.ಆರ್.ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯ ಅಪಘಾತ ಜೀವರಕ್ಷಕ ಯೋಜನೆಯಲ್ಲಿ ಖಾಸಗಿ ವಾಣಿಜ್ಯ ಚಾಲಕರಿಗೆ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಾಗಾರವನ್ನು ಡಾ. ಆಶೋಕ್ ಮತ್ತು ಡಾ. ಕೀರ್ತಿ ನಡೆಸಿದರು.