ತುಮಕೂರು
ವಿದ್ಯಾರ್ಥಿಗಳು ಮಿತವಾಗಿ ಮೊಬೈಲ್ ಬಳಕೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಕಿವಿಮಾತು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನಗರದ ಕುಂಚಿಟಿಗರ ಭವನದಲ್ಲಿ ಸೋಮವಾರ IAS, IPS,KAS, ಬ್ಯಾಂಕಿಂಗ್ ಇತ್ಯಾದಿ ಪರೀಕ್ಷೆಗಳ ಪೂರ್ವ ತಯಾರಿ ಬಗ್ಗೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವೃತ್ತಿ ಮಾರ್ಗದರ್ಶನದ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು IAS ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಹಾಗೂ ಪರೀಕ್ಷೆಯ ಹಂತಗಳ ಬಗ್ಗೆ ಮಾಹಿತಿ ನೀಡಿದರು.
ಯಾವುದೇ ವಿಷಯವನ್ನು ಓದಿ ಇತರರಿಗೆ ಅದನ್ನು ವಿವರಿಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕಲ್ಲದೆ, ತಿಳಿದುಕೊಂಡ ವಿಷಯವನ್ನು ಹಾಗೆಯೇ ಬರೆಯುವ ಅಭ್ಯಾಸವನ್ನು ಕರಗತ ಮಾಡಿಕೊಳ್ಳಬೇಕು. ಸರ್ಕಾರ ಹಮ್ಮಿಕೊಂಡಿರುವ ಇಂತಹ ಸ್ವರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮಗಳ ಬಗ್ಗೆ ಇತರೆ ರಾಜ್ಯದವರಿಂದ ಉತ್ತಮ ಅಭಿಪ್ರಾಯ ಬರುತ್ತಿದ್ದು, ಜಿಲ್ಲೆಯ ಪ್ರತಿಯೊಬ್ಬ ವಿದ್ಯಾರ್ಥಿಯು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಉನ್ನತ ಹುದ್ದೆಗಳ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಸಲಹೆ ನೀಡಿದರಲ್ಲದೆ, ಪ್ರತಿಯೊಂದು ಅಭ್ಯಾಸದಲ್ಲಿಯೂ ಆಸಕ್ತಿ ಹೊಂದಿರಬೇಕು ಎಂದರು.ಇಲಾಖೆಯ ಜಿಲ್ಲಾ ಅಧಿಕಾರಿ ಡಾ|| ಸುಬ್ರಾನಾಯಕ, ತಾಲ್ಲೂಕು ವಿಸ್ತರಣಾಧಿಕಾರಿ ಆರ್.ರಂಗಸ್ವಾಮಿ, ಪಾರ್ವತವ್ವ ಹಡಗಿನಾಳ್, ನಿಲಯದ ಮೇಲ್ವಿಚಾರಕರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
