ಬಡವರ್ಗದ ಜನರ ಕಲ್ಯಾಣಕ್ಕಾಗಿ ಸರ್ಕಾರ ನೀಡುವ ನೆರವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಕರೆ

ಚಳ್ಳಕೆರೆ

        ಸರ್ಕಾರದಿಂದ ಪಡೆಯುವ ಎಲ್ಲಾ ಸವಲತ್ತುಗಳನ್ನು ಜಾಗರೂಕತೆಯಿಂದ ಸದುಪಯೋಗ ಪಡೆಸಿಕೊಂಡು ಅಭಿವೃದ್ಧಿ ಹೆಜ್ಜೆ ಇಡಬೇಕು. ಬಡ ಜನತೆಯ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳ ಅನ್ವಯ ನೀಡುವ ಸವಲತ್ತುಗಳು ನ್ಯಾಯಯುತವಾಗಿ ಫಲಾನುಭವಿಗಳಿಗೆ ನೇರವಾಗಿ ವಿತರಣೆ ಮಾಡುತ್ತಿದ್ದು, ಈ ಯೋಜನೆ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಗ್ರಾಮೀಣ ಅಂಕವಿಕಲ ಪುನರ್ ವಸತಿ ಯೋಜನೆ ಕಾರ್ಯಕರ್ತೆ ದಿವ್ಯಶ್ರೀ ತಿಳಿಸಿದರು.

        ಅವರು, ಬುಧವಾರ ಬೆಳಗೆರೆ ಗ್ರಾಮದ ಅಂಕವಿಕಲ ಆನಂದಪ್ಪ ಎಂಬುವವರಿಗೆ 2017-18ನೇ ಸಾಲಿನ ಶಾಸಕ ಅನುದಾನದಲ್ಲಿ 38 ಸಾವಿರ ವೆಚ್ಚದ ಆಧಾರ ಯೋಜನೆಯಡಿ ಗೂಡಗಂಡಿ ಮತ್ತು ಅಂಗಡಿ ವಸ್ತುಗಳನ್ನು ವಿತರಿಸಿ ಮಾತನಾಡಿದರು. ಇದರಲ್ಲಿ 18 ಸಾವಿರ ಪೆಟ್ಟಿಗೆ ಅಂಗಡಿ, 20 ಸಾವಿರ ಮೌಲ್ಯದ ವಸ್ತುಗಳನ್ನು ನೀಡಿದೆ. ವಿಕಲಚೇತನ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ಯೋಜನೆಯ ಕಾರ್ಯಕ್ರಮ ಇದಾಗಿದ್ದು, ಆಯ್ಕೆಯಾದ ಫಲಾನುಭವಿಗಳಿಗೆ ಇಲಾಖೆ ನೇರವಾಗಿ ಸವಲತ್ತುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಫಲಾನುಭವಿ ಇಂತಹ ಸವಲತ್ತುಗಳಿಂದ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಪ್ರಾಮಾಣಿಕ ಹೆಜ್ಜೆ ಇಡಬೇಕೆಂದು ತಿಳಿಸಿದರು.

         ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೊರ್ಲಯ್ಯ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನೈಜ್ಯ ಫಲಾನುಭವಿಗಳನ್ನು ಗುರುತಿಸಿ ಇಂತಹ ಸೌಲಭ್ಯವನ್ನು ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಸಹ ಸವಲತ್ತುಗಳನ್ನು ಪಡೆದ ನಂತರ ಅವುಗಳ ಉಪಯೋಗವನ್ನು ನಿಯಮದಡಿ ನಿರ್ವಹಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ, ಪ್ರಹ್ಲಾದ್, ಆನಂದ, ಮಹಂತೇಶ್, ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link