ಖಾಲಿ ಕುರ್ಚಿಗಳ ಎದುರು ಉತ್ಸವ!

ದಾವಣಗೆರೆ

      ಮಹಿಳೆಯರಿಗೆ ಅವಕಾಶ ಸಿಕ್ಕರೆ ಏನನ್ನೂಬೇಕಾದರೂ ಸಾಧಿಸುವ ಶಕ್ತಿ ಅವರಲ್ಲಿದೆ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಅಭಿಪ್ರಾಯಪಟ್ಟರು.ನಗರದ ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯ ಸಭಾಂಗಣದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಮಹಿಳಾ ಸಾಂಸ್ಕತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೊದಲೆಲ್ಲ ಮಹಿಳೆಯರು ವೇದಿಕೆಗೆ ಬರಲು ಹಿಂಜರಿಯುತ್ತಿದ್ದರು.

       ಈಗ ಎಲ್ಲ ಸ್ಥಳೀಯ ಸಂಸ್ಥೆಗಳು ಮತ್ತು ಇತರೆಡೆ ಶೇ. 50 ಕ್ಕಿಂತ ಹೆಚ್ಚು ಮಹಿಳೆಯರು ಇದ್ದಾರೆ. ಮಹಿಳೆಯರಲ್ಲಿನ ಪ್ರತಿಭೆಯನ್ನು ಹೊರತರಲು, ಪ್ರದರ್ಶಿಸಲು ಇದೊಂದು ಉತ್ತಮ ಅವಕಾಶವಾಗಿದ್ದು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಲು ಇದೊಂದು ಪರೀಕ್ಷಾ ಕೇಂದ್ರವಾಗಿದೆ ಎಂದರು.

        ಮೊದಲಿನಿಂದಲೂ ಹೆಣ್ಣುಮಕ್ಕಳಲ್ಲಿ ಚಾಕಚಕ್ಯತೆ ಇದೆ. ಎಷ್ಟೋ ಹಳ್ಳಿಗಳಲ್ಲಿ ಮಹಿಳಾ ಸಂಘಗಳೇ ಸಾಲ ನೀಡುವಷ್ಟು ಸ್ವಾವಲಂಬಿಗಳಾಗಿವೆ. ಹಾಗೂ ಪುರುಷರಿಗಿಂತ ಸಾಲ ಮರುಪಾವತಿಯಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿರುವುದರಿಂದ ಮಹಿಳೆಯರಿಗೆ ಸಾಲ ನೀಡಬಹುದೆಂಬ ವಿಶ್ವಾಸ ಗಳಿಸಿದ್ದಾರೆಂದು ಹೇಳಿದರು.

        ಜಿ.ಪಂ.ಅಧ್ಯಕ್ಷೆ ಶೈಲಜಾ ಬಸವರಾಜ್ ಮಾತನಾಡಿ, ಡಿಸಿ ಆಗೋಣ, ಎಸಿ ಆಗೋಣ, ಪೊಲೀಸ್ ಆಗೋಣ ಏನಾದರೂ ಆಗೋಣ, ಮೊದಲು ಮಹಿಳೆಯರಾಗೋಣ. ಹೆಣ್ಣಿಗೆ ತನ್ನದೇ ಆದ ಅಸ್ತಿತ್ವವಿದೆ. ಕುಟುಂಬವನ್ನು ಪ್ರೀತಿಯಿಂದ ನಿರ್ವಹಿಸಿಕೊಂಡು ಹೋಗುವ ಶಕ್ತಿ ಇದೆ ಎಂದು ಹೇಳಿದರು.

        ಡೊಳ್ಳು, ವೀರಗಾಸೆ, ಲಂಬಾಣಿ ಕಲೆ, ಚಿತ್ರಕಲೆ, ರಂಗೋಲಿ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಮಹಿಳೆಯರು ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ. ಕನ್ನಡ ಮತ್ತು ಸಂಸ್ಕತಿ ಇಲಾಖೆಗೆ ಮಹಿಳೆಯರು ಇನ್ನಷ್ಟು ಹತ್ತಿರವಾಗುವಂತೆ ಕಾರ್ಯಕ್ರಮಗಳು ಆಯೋಜನೆಗೊಳ್ಳಬೇಕು ಎಂದರು.

       ಹೆಣ್ಣು ಮಕ್ಕಳು ನಮ್ಮ ಸಂಸ್ಕತಿಯನ್ನು ಉಳಿಸಿ ಬೆಳೆಸುವ ಸಂಕಲ್ಪ ತೊಡಬೇಕು. ಮೊದಲು ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಿ, ಪ್ರೀತಿ-ಸಂಸ್ಕತಿಯ ಸುವಾಸನೆಯನ್ನು ಪಸರಿಸಬೇಕು. ಮೂರನೇ ತಲೆಮಾರನ್ನು ಗುರುತಿಸುವ ದೇಶವಿದ್ದರೆ ಅದು ಭಾರತ. ಇಂತಹ ಸುಸಂಸ್ಕತಿಯನ್ನು ವಿಶ್ವಕ್ಕೆಲ್ಲ ಹಂಚೋಣ. ವಸುದೈವ ಕುಟುಂಬಕಂ ಎಂಬ ಮಾತಲ್ಲಿ ಹೆಣ್ಣಿನ ಪಾತ್ರ ದೊಡ್ಡದಿದೆ ಎಂದರು.

        ಹಿರಿಯ ಸಾಹಿತಿ ಎಸ್.ಎಂ.ಮಲ್ಲಮ್ಮ ಮಾತನಾಡಿ, ಮಹಿಳೆ ದೈಹಿಕವಾಗಿ ಪುರುಷರಷ್ಟು ಶಕ್ತಿವಂತಳಲ್ಲದಿದ್ದರೂ, ಮಾನಸಿಕ ಸ್ಥೈರ್ಯ ಅಪಾರವಾಗಿದೆ. ಆದ್ದರಿಂದಲೇ ಇಂದು ಸುಮಾರು 10 ಕೆ ಜಿ ಯಷ್ಟು ಭಾರವಾದ ಡೊಳ್ಳನ್ನು ಸೊಂಟಕ್ಕೆ ಕಟ್ಟಿಕೊಂಡು ಡೊಳ್ಳು ವಾದ್ಯ ಬಾರಿಸುವ, ವೀರಗಾಸೆ ಇತರೆ ಕಲೆ, ಸಾಂಸ್ಕøತಿಕ ಚಟುವಟಿಕೆಗಳನ್ನು ಭಾಗವಹಿಸುತ್ತಿದ್ದಾರೆ. ಪ್ರಸ್ತುತದಲ್ಲಿ ಹೆಣ್ಣು ಹೊರಗೆ ಮತ್ತ ಒಳಗೆ ದುಡಿಯುವುದರೊಂದಿಗೆ ವಿವಿಧ ಸವಾಲುಗಳನ್ನು ಸ್ವೀಕರಿಸುತ್ತಾ ತನ್ನ ಪ್ರತಿಭೆಯನ್ನೂ ಹೊರಹಾಕುತ್ತಾ ಸಾಗುತ್ತಿದ್ದಾಳೆ.

         ಇಂದು ಮಹಿಳೆ ಆರ್ಥಿಕವಾಗಿ ಸ್ವತಂತ್ರಳಾದರೂ ನಮ್ಮ ಸಂಸ್ಕತಿಯನ್ನು ಮುಂದಿನ ತಲೆಮಾರಿಗೆ ಜವಾಬ್ದಾರಿಯುತವಾಗಿ ವರ್ಗಾಯಿಸುವ ತುರ್ತು ಇದೆ ಎಂದರು.ಉತ್ಸವದ ಅಂಗವಾಗಿ ಸಾಂಸ್ಕತಿಕ ಕಾರ್ಯಕ್ರಮ, ವಿಚಾರ ಸಂಕಿರಣ, ಕವಿಗೋಷ್ಠಿ, ಚಿತ್ರಕಲಾ ಶಿಬಿರ ಹಾಗೂ ರಂಗೋಲಿ ಸ್ಪರ್ಧೆ ಜರುಗಿದವು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿದರು. ಚಿರಂತನ ದೀಪಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap