ಉತ್ತಮ ಶಿಕ್ಷಣದ ಮೂಲಕ ಉಜ್ವಲ ಭವಿಷ್ಯ

ಚಿತ್ರದುರ್ಗ:

     ನಗರದಎಸ್.ಜೆ.ಎಂ. ಮಹಿಳಾ ಕಾಲೇಜಿನಲ್ಲಿ ಐಕ್ಯೂಎಸಿ, ಅಡಿಯಲ್ಲಿಎನ್.ಎಸ್.ಎಸ್., ಕ್ರೀಡಾ, ಸಾಂಸ್ಕøತಿಕ, ಯೂತ್‍ರೆಡ್‍ಕ್ರಾಸ್, ಸ್ಕೌಟ್ಸ್&ಗೈಡ್ಸ್, ರೋವರ್-ರೇಂಜರ್ಸ್ ಘಟಕಗಳ ಉದ್ಘಾಟನಾ ಸಮಾರಂಭವನ್ನುಹಮ್ಮಿಕೊಳ್ಳಲಾಗಿತ್ತು.

       ಡಾ|| ಈ. ಚಿತ್ರಶೇಖರ್ ಮುಖ್ಯಕಾರ್ಯನಿರ್ವಾಹಕ ನಿರ್ದೇಶಕರು (ಸಾಮಾನ್ಯ) ಇವರುಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿನಿಯರುಕಾಲೇಜಿನ ಬಗ್ಗೆ ಅಪಾರ ಪ್ರೀತಿ ಮತ್ತುಅಭಿಮಾನದೊಂದಿಗೆ ಮಹಿಳಾ ಕಾಲೇಜಿಗೆದಾಖಲಾಗಿದ್ದು ಸಂತಸತಂದಿದೆ.ಶ್ರೀಮಠದ ಅಡಿಯಲ್ಲಿನಡೆಯುತ್ತಿರುವಎಸ್.ಜೆ.ಎಂ.ಮಹಿಳಾ ಕಾಲೇಜುಒಂದು ಪ್ರತಿಷ್ಠಿತಕಾಲೇಜಾಗಿದೆ.

      ಈ ಕಾಲೇಜಿನಲ್ಲಿಉತ್ತಮಪ್ರಾಚಾರ್ಯರು, ಬೋಧಕರಿದ್ದಾರೆ.ದೇಶ ನನಗೆ ಏನು ಕೊಟ್ಟಿದೆಅನ್ನುವುದಕ್ಕಿಂತ ನಾನು ದೇಶಕ್ಕಾಗಿ ಏನು ಕೊಟ್ಟಿದ್ದೇನೆಎನ್ನುವುದು ಬಹಳ ಮುಖ್ಯ. ಹಾಗಾಗಿ ವಿದ್ಯಾರ್ಥಿನಿಯರುದೇಶಾಭಿಮಾನವನ್ನು ಬೆಳಸಿಕೊಂಡು ವಿದ್ಯಾಭ್ಯಾಸದ ಜೊತೆಯಲ್ಲಿ ಎನ್.ಎಸ್.ಎಸ್ ,ಕ್ರೀಡೆ, ಸಾಂಸ್ಕತಿಕ ಚಟುವಟಿಕೆಗಳಲ್ಲಿ ತಮ್ಮನ್ನುತಾವು ತೊಡಗಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿನಿಯರುತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕೆಂದು ತಿಳಿಸಿದರು.

      ಮತ್ತೋರ್ವ ಅತಿಥಿ ಡಾ|| ನಾರಾಯಣ ಮೂರ್ತಿ ಮುಖ್ಯಸ್ಥರುಪೆಥಾಲಜಿ ವಿಭಾಗ ಬಸವೇಶ್ವರ ವೈದ್ಯಕೀಯ ಮಹಾ ವಿದ್ಯಾಲಯ ಚಿತ್ರದುರ್ಗ ಇವರು ಮಾತನಾಡಿ ,ರಕ್ತದಾನದ ಮಹತ್ವವನ್ನು ಹಾಗು ಮಾನವನ ದೇಹದಲ್ಲಿ ರಕ್ತದಿಂದ ಆಗುವಂತಹ ಪರಿವರ್ತನೆಯನ್ನು ತಿಳಿಸಿಕೊಟ್ಟರಲ್ಲದೆ ‘ರಕ್ತದಾನ ಮಹಾ ದಾನ’ ರಕ್ತದಾನ ಮಾಡಿ ನೂರಾರು ಜೀವಗಳನ್ನು ಉಳಿಸಿ, ರಕ್ತದಾನ ಮಾಡಲು ಮುಂದಾಗಿಎಂದು ಪ್ರೇರೆಪಿಸಿದರು.

      ಕ್ರಾರ್ಯಕ್ರಮದ ಮತ್ತೋರ್ವ ಮುಖ್ಯಅತಿಥಿಡಾ|| ಗೌರಮ್ಮ ಪ್ರಾಚಾರ್ಯರುಎಸ್.ಜೆ.ಎಂ.ದಂತ ಮಹಾವಿದ್ಯಾಲಯಚಿತ್ರದುರ್ಗಇವರು ವಿದ್ಯಾರ್ಥಿಯರನ್ನು ಕುರಿತು ವಿದ್ಯಾರ್ಥಿಗಳಲ್ಲಿರು ಪ್ರತಿಭೆಯನ್ನು ಹೊರತರ ಬೇಕಾದರೆ ಕಾಲೇಜಿನ ಎನ್.ಎಸ್.ಎಸ್., ಕ್ರೀಡೆ ಹಾಗೂ ಚಟುವಟಿಕೆಗಳಲ್ಲಿ ಸದಾ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಎಲ್ಲಾವಿದ್ಯಾರ್ಥಿನಿಯರು ತಮ್ಮ ಪ್ರತಿಭೆಯನ್ನು ತೊರ್ಪಡಿಸಬೇಕೆಂದು ತಿಳಿಸಿದರು.

      ಕ್ರಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ಪ್ರೊ.ಸಿ. ಬಸವರಾಜಪ್ಪಇವರು ಶ್ರೀಮಠಕ್ಕೆ ನಾವು ಅಭಾರಿಯಾಗಿದ್ದು ಮಹಿಳಾ ಕಾಲೇಜುಎಲ್ಲಾ ಮೂಲ ಸೌಕರ್ಯಗಳನ್ನು ಹೊಂದಿದ್ದು, ನ್ಯಾಕ್‍ನಲ್ಲಿ ‘ಬಿ’ಗ್ರೇಡ್ ಹೊಂದಿದ್ದು ಮುಂದೆ ‘ಎ’ಗ್ರೇಡ್ ಪಡೆಯಲುಎಲ್ಲಾ ಬೋಧಕ ವರ್ಗ& ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿನಿಯರು ಶ್ರಮಿಸಬೇಕಾಗಿದೆ. 

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link