ಮಕ್ಕಳ ಸಾವಿನ ಪ್ರಮಾಣ ತಡೆಗೆ ಲಸಿಕಾ ಅಭಿಯಾನ

ಚಿತ್ರದುರ್ಗ

    ಮಕ್ಕಳ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿ, ದೇಶದ ಮಾನವ ಸಂಪನ್ಮೂಲವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಲಸಿಕೆ ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಿಇಓ ಸತ್ಯಭಾಮ ಮಕ್ಕಳಿಗೆ ತಿಳಿಸಿದರು.

    ನಗರದ ಬಾಲಕೀಯರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2019-20 ನೇ ಸಾಲಿನ ಶಾಲಾ ಲಸಿಕಾ ಆಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ದೇಶವನ್ನು ಪೆÇಲಿಯೋ ಮುಕ್ತ ವಾಗಿಮಾಡಿದ್ದೆವೆ. ಈ ನಿಟ್ಟಿನಲ್ಲಿ ಶಾಲಾ ಲಸಿಕಾ ಅಭಿಯಾನವನ್ನು ಸರ್ಕಾರ ಹಮ್ಮಿಕೊಂಡಿದ್ದು, ಶೇ.100 % ಯಶಸ್ಸು ಕಂಡು ರಾಜ್ಯದಲ್ಲೇ ಮೊದಲ ಸ್ಥಾನಗಳಿಸಬೇಕು ಈ ನಿಟ್ಟಿನಲ್ಲಿ ಎಲ್ಲರೂ ಕರ್ಯೊನ್ಮಖರಾಗಬೇಕು ಎಂದು ಕರೆ ನೀಡಿದರು.

    5 ರಿಂದ 6 ವರ್ಷದ ಮಕ್ಕಳಿಗೆ ಡಿಪಿಟಿ ಲಸಿಕೆ ಹಾಗೂ 7 ರಿಂದ 16 ವರ್ಷದ ಮಕ್ಕಳಿಗೆ ಟಿಡಿ ಲಸಿಕೆಯನ್ನು ಹಾಕಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ವಿನೊತ್ ಪ್ರಿಯಾ ಮಾತನಾಡಿ, 11ರಿಂದ 30 ರವರೆಗೆ ಲಸಿಕಾ ಕಾರ್ಯಕ್ರಮ 5 ರಿಂದ 16 ವಯ್ಯಸ್ಸಿನ ವರೆಗೆ ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುವುದು. ಅಭಿಯಾನವನ್ನು ಶೇಕಡ 100% ಯಶ್ಸಸ್ಸು ಕಾಣುವ ಉದ್ದೇಶದಿಂದ ಅಂಗನವಾಡಿಯಲ್ಲಿ ಲಸಿಕಾ ಕಾರ್ಯಕ್ರಮ ಹಾಕಲಾಗುತ್ತಿದೆ ಎಂದರು.

     ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಲಸಿಕೆ ಹಾಕಿಸಲು ಮನವಿರಂಜನೆ ರೂಪದಲ್ಲಿ ಹಾಡನ್ನು ಮಾಡಿಸಿ ಅರಿವು ಮೂಡಿಸಲಾಗುತ್ತಿದೆ ಎಂದರು.ಜಿ.ಪಂ.ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಯಾವುದೇ ಕಾರಣಕ್ಕೂ ಅಸಡ್ಡೆ ತೋರದೆ ಲಸಿಕೆ ಹಾಕಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.

     ಕಾರ್ಯಕ್ರಮದಲ್ಲಿ ಜಿ.ಪಂ.ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅನಂತ್ ಮಾತನಾಡಿ, ಸದೃಡ ಹಾಗೂ ಬಲಿಷ್ಟ ರಾಷ್ಟ್ರ ಕಟ್ಟುವ ನಿಟ್ಟಿನಲ್ಲಿ ನಾವುಗಳು ಆರೋಗ್ಯವಾಗಿರಬೇಕು. ಇದಕ್ಕಾಗಿ ಮಕ್ಕಳು ಲಸಿಕೆ ಹಾಕಿಸಿಕೊಳ್ಲಬೇಕು ಎಂದರು.ಮುಖ್ಯವಾಗಿ ಶಾಲೆ ಬಿಟ್ಟ ಮಕ್ಕಳಿಗೂ ಲಸಿಕೆ ಹಾಕುವ ಮೂಲಕ ಪುನಃ ಶಾಲೆಗೆ ಕರೆತರಬೇಕು ಎಂದರು.ತಾ.ಪಂ.ಅಧ್ಯಕ್ಷ ಲಿಂಗರಾಜು, ಖಾಸಗಿಯಾಗಿ ಹಾಕಿಸಿಕೊಳ್ಳಲು 200 ರೂ ಖರ್ಚು ಆಗುತ್ತದೆ. ಸರ್ಕಾರ ಆರೋಗ್ಯ ಕಾಪಾಡಲು ಉಚಿತವಾಗಿ ಲಸಿಕೆ ಹಾಕಲಾಗುತ್ತಿದೆ ಇದನ್ನು ಬಳಸಿಕೊಂಡು ಆರೋಗ್ಯ ಕಾಪಡಿಕೊಳ್ಳಬೇಕು ಎಂದರು.

    ಡಿಹೆಚ್.ಓ ಪಾಲಾಕ್ಷಪ್ಪ ಮಾತನಾಡಿ, ಜಿಲ್ಲೆಯಲ್ಲಿ 5 ರಿಂದ 6 ವರ್ಷದ ಮಕ್ಕಳಿಗೆ 38675 ಮಕ್ಕಳಿಗೆ ಡಿಪಿಟಿ ಬೂಸ್ಟರ್ ಲಸಿಕೆಯನ್ನು ಹಾಗೂ 7 ರಿಂದ 16 ವರ್ಷದ 229204 ಮಕ್ಕಳಿಗೆ ಟಿಡಿ ಲಸಿಕೆಯನ್ನು ಹಾಕುವ ಗುರಿಯನ್ನು ನಾವುಗಳು ಹೊಂದಲಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap