ವೈಟ್ ಟಾಪಿಂಗ್ : ವಾಹನ ಸವಾರರಿಗೆ ತೀವ್ರ ತೊಂದರೆ ..!!

ಬೆಂಗಳೂರು

     ನಗರದ ಆಡುಗೋಡಿ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ವಾಹನ ಸವಾರರು ಹೈರಾಣಾಗಿದ್ದು ಸಂಚಾರ ದಟ್ಟಣೆ ನಿವಾರಿಸಲು ಸಂಚಾರ ಪೊಲೀಸರು ಹರಸಾಹಸ ಪಡುವಂತಾಗಿದೆ ಆಡುಗೋಡಿ ಮುಖ್ಯರಸ್ತೆಯ ಒಂದು ಬದಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಆರಂಭಿಸಿರುವುದರಿಂದ ವಾಹನ ಸಂಚಾರ ಆಮೆ ವೇಗದಲ್ಲಿ ಸಾಗುತ್ತಿದೆ. ವೈಟ್ ಟಾಪಿಂಗ್ ಕಾಮಗಾರಿ ಇನ್ನೂ 2 ತಿಂಗಳವರೆಗೆ ನಡೆಯಲಿದ್ದು, ಅಲ್ಲಿಯವರೆಗೂ ಈ ಭಾಗದ ಜನರು ಸಂಚಾರದಟ್ಟಣೆಯ ಬಿಸಿ ಅನುಭವಿಸಬೇಕಾಗಿದೆ.
ಕೋರಮಂಗಲ, ಬೆಂಗಳೂರು ಡೈರಿ ರಸ್ತೆ, ಸೆಂಟ್ ಜಾನ್ ರಸ್ತೆ, ಲಕ್ಕಸಂದ್ರ, ಸೇರಿದಂತೆ ಹಲವು ರಸ್ತೆಗಳು ಈ ಭಾಗದಲ್ಲಿ ಸಂಚಾರದಟ್ಟಣೆಗೆ ಸಿಲುಕಿವೆ.

        ಬಿಬಿಎಂಪಿ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ವಾಹನ ಸಂಚಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ದಿನ ಬೆಳಿಗ್ಗೆ ಈ ಭಾಗದಲ್ಲಿ ಏನಿಲ್ಲವೆಂದರೂ 30 ರಿಂದ 40 ಸಾವಿರ ವಾಹನಗಳು ಸಂಚರಿಸುತ್ತಿವೆ. ಇದೇ ವೇಳೆ ವೈಟ್ ಟಾಪಿಂಗ್ ಕಾಮಗಾರಿ ಆಡುಗೋಡಿಯಿಂದ ಮಡಿವಾಳ ಚೆಕ್ ಪೋಸ್ಟ್ ವರೆಗೆ ಕೈಗೆತ್ತಿಕೊಂಡಿರುವುದರಿಂದ ಈ ಭಾಗದಲ್ಲಿ ಸಹಜವಾಗಿಯೇ ಇನ್ನಷ್ಟು ದಟ್ಟಣೆ ಉಂಟಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link