ವಾಹನಕ್ಕೆ ಸಿಕ್ಕಿ ಹೆಬ್ಬಾವು ಸಾವು

ತಿಪಟೂರು :

    ನಗರ ಸಮೀಪದ ಹುಲ್ಲುಕಟ್ಟೆ ಗೇಟ್ ಬಳಿ ಶನಿವಾರ ತೋಟಗಾರಿಕೆ ಇಲಾಖೆ ಫಾರಂ ಒಳಗಿಂದ ತುರುವೇಕೆರೆ ರಸ್ತೆ ದಾಟುತ್ತಿದ್ದ ಹೆಬ್ಬಾವು ವಾಹನವೊಂದಕ್ಕೆ ಸಿಕ್ಕಿ ಮೃತಪಟ್ಟಿದೆ.

    ಸುಮಾರು ಎರಡು ಮೀಟರ್ ಉದ್ದದ ಹೆಬ್ಬಾವು ಫಾರಂನ ಒಂದು ಭಾಗದಿಂದ ಇನ್ನೊಂದರ ಕಡೆಗೆ ಸಾಗುತ್ತಿದ್ದಾಗ ಅದರ ಮೇಲೆ ವಾಹನ ಹರಿದು ಹೋಗಿತ್ತು. ಇದನ್ನು ನೋಡಲು ಜನ ಜಂಗುಳಿ ನೆರೆದಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಸತ್ತ ಹೆಬ್ಬಾವನ್ನು ಕೊಂಡೊಯ್ದು ನಂತರ ಸುಟ್ಟು ಹಾಕಿದರು. ಎಸಿಎಫ್ ಸತ್ಯನಾರಾಯಣ, ಆರ್‍ಎಫ್‍ಒ ರಾಕೇಶ್ ಮತ್ತಿತರರ ಸಿಬ್ಬಂದಿ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap