ಚಿತ್ರದುರ್ಗ:
ಬಂಜಾರ ಸಮುದಾಯದ ಧರ್ಮಗುರು ಶ್ರೀ ಸಂತ ಸೇವಾಲಾಲ್ರ 280ನೇ ಜಯಂತೋತ್ಸವ ಹಾಗೂ ಜಿಲ್ಲಾ ಮಟ್ಟದ ಬಂಜಾರ ಸಾಂಸ್ಕತಿಕ ಉತ್ಸವವನ್ನು ಫೆಬ್ರವರಿ 26 ರಂದು ಹೊಳಲ್ಕೆರೆಯಲ್ಲಿ ಅತ್ಯಂತ ವ್ಯಭವವಾಗಿ ಆಚರಿಸಲಾಗುವುದು ಎಂದು ಬಂಜಾರ ಸಮಾಜದ ಮುಖಂಡ ಹಾಗೂ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜಯಸಿಂಹ ಖಾಟ್ರೊತ್ ತಿಳಿಸಿದರು
ಶನಿವಾರ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಜಾರ ಸಮುದಾಯದ ಆಚಾರ ವಿಚಾರ ವೈಶಿಷ್ಟಯತೆಯಿಂದ ಕೂಡಿದೆ. ಈ ಸಮಾಜದ ಸಂಸ್ಕøತಿ ಶ್ರೀಮಂತವಾದುದು. ಇದನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಮತ್ತು ಇಂದಿನ ಯುವ ಸಮೂಹಕ್ಕೆ ಅದರ ಮಹತ್ವ ತಿಳಿಸುವ ಉದ್ದೇಶದಿಂದ ಹೊಳ್ಕೆರೆಯಲ್ಲಿ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದರು
ಜಯಂತೋತ್ಸವದ ಅಂಗವಾಗಿ ಹೊಳಲ್ಕೆರೆ ತಾಲ್ಲೂಕಿನ 34 ಗ್ರಾಮಗಳಲ್ಲೂ ಸೇವಾಲಾಲ್ಜಯಂತಿಯ ಸಂಭ್ರಮವನ್ನು
ಪ್ರತಿಯೊಬ್ಬರು ಆಚರಿಸುವಂತೆ ಮಾಡುವುದು ಮತ್ತು ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡುವಉದ್ದೇಶದಿಂದತೀಜ್ (ಗೋಧಿ ಹಬ್ಬ) ಹಬ್ಬದ ವಿಜೃಂಭಣೆಗಾಗಿ ಸಿದ್ಧತೆ ನಡೆಸುವ ಮತ್ತು 26 ರಂದು ನಡೆಯಿರುವಜಯಂತೋತ್ಸವದಲ್ಲಿ ಹಬ್ಬಆಚರಣೆಗೆ ಅನುವು ಮಾಡಿಕೊಡುವಉದ್ದೇಶದಿಂದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ 13 ರಂದು ಹೊಳಲ್ಕೆರೆ ಪಟ್ಟಣದಲ್ಲಿ ಸಂತ ಸೇವಾಲಾಲ್ರಜಯಂತೋತ್ಸವದ ಅಂಗವಾಗಿ ಜನಜಾಗೃತಿಗಾಗಿ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದ್ದು, ಫೆಬ್ರವರಿ 17 ರಂದು ಹೊಳಲ್ಕೆರೆ ತಾಲ್ಲೂಕಿನತೀಜ್ (ಗೋಧಿ) ಬಿತ್ತನೆಯನ್ನು ಆರಂಭಿಸಲಾಗುತ್ತದೆ .
ಬಿತ್ತನೆ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಯುವತಿಯರು ಗೋಧಿ ಹಬ್ಬದ ಅಂಗವಾಗಿ ಪೂಜೆ, ಪುನಸ್ಕಾರ, ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸುವ ಮೂಲಕ ಜಯಂತೋತ್ಸವಕ್ಕೆ ವಿಶೇಷ ಮೆರಗು ತಂದು ಕೊಡಲಿದ್ದಾರೆ.
ಜಯಂತೋತ್ಸವ ಯಶಸ್ವಿಗಾಗಿ ಈಗಾಗಲೇ ಹಲವಾರು ತಂಡಗಳನ್ನು ರಚಿಸಲಾಗಿದ್ದು, ಆಯಾಯ ತಂಡಗಳು ಅವರಿಗೆ ನೀಡಲಾಗಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಹೊಳಲ್ಕೆರೆಯಲ್ಲಿ ನಡೆಸಲು ಉದ್ದೇಶಿಸಲಾಗಿರುವ ಕಾರ್ಯಕ್ರಮವು ವಿಶೇಷ ಮನ್ನಣೆ ಪಡೆದುಕೊಳ್ಳಲಿದೆ ಎಂದರು.
ಜಿಲ್ಲಾಮಟ್ಟದ ಸಮಾವೇಶ: ಸಂತ ಸೇವಾಲಾಲ್ರಜಯಂತೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ತೀಜ್, ಜಾನಪದ ಕಲಾ ಮೇಳ, ಬಂಜಾರ ಸಂಸ್ಕತಿಯಅನಾವರಣ ಮತ್ತು ಕಲೆ ಸಾಹಿತ್ಯವನ್ನು ಬಿಂಬಿಸುವ ಮೂಲಕ ಜಿಲ್ಲಾಮಟ್ಟದ ಸಮಾವೇಶವನ್ನು ಸಹ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಮೂಲಕಾರಣಚಿತ್ರದುರ್ಗಜಿಲ್ಲಾದ್ಯಂತ ಸುಮಾರುಒಂದು ಲಕ್ಷಎಂಭತ್ತು ಸಾವಿರಕ್ಕೂ ಹೆಚ್ಚು ಜನ ಲಂಬಾಣಿ ಸಮುದಾಯದವರು ವಾಸವಾಗಿದ್ದು, ಹೊಳಲ್ಕೆರೆ ತಾಲ್ಲೂಕುಒಂದರಲ್ಲಿಯೇ ಭರಮಸಾಗರ ಸೇರಿ, ನಲವತ್ತು ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಆದ್ದರಿಂದ ಹೊಳಲ್ಕೆರೆಯನ್ನು ಕೇಂದ್ರವನ್ನಾಗಿರಿಸಿಕೊಂಡು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೀ ಸಂತ ಸೇವಾಲಾಲ್ ಜಯಂತೋತ್ಸವ ಮತ್ತು ಬಂಜಾರ ಸಮಾವೇಶಕ್ಕೆ ಸಮುದಾಯದ ಸಚಿವರು, ಶಾಸಕರು, ಮಾಜಿ ಶಾಸಕರು, ಮಂತ್ರಿಗಳನ್ನು ಆಹ್ವಾನಿಸಲು ನಿರ್ಧರಿಸಲಾಗಿದ್ದು, ಅದರೊಂದಿಗೆ ನಮ್ಮಜಿಲ್ಲೆಯ ಶಾಸಕರು, ಸಚಿವರು ಮತ್ತು ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತದೆಎಂದರು.ಈ ಒಂದು ಸಮಾವೇಶಕ್ಕೆ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಜನಪರ ಹೋರಾಟಗಾರ ನರೇನಹಳ್ಳಿ ಅರುಣ್ಕುಮಾರ್, ಹೊಳಲ್ಕೆರೆ ತಾಲ್ಲೂಕು, ಬಂಜಾರ ಸಂಘದ ಯೋಗಮೂರ್ತಿ ನಾಯ್ಕ್, ಮಹೇಶ್ ನಾಯ್ಕ, ಸುರೇಶ್ ನಾಯ್ಕ್, ಗಣೇಶ್ನಾಯ್ಕ್, ಕರ್ನಾಟಕ ಬಂಜಾರಜನ ಜಾಗೃತಿಯ ಅಭಿಯಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ನಿಂಗನಾಯ್ಕ್, ಉಪಸ್ಥಿತರಿದ್ದರು.