ಬೊಮ್ಮನಹಳ್ಳಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಉದ್ಘಾಟನೆ

ಬೆಂಗಳೂರು

       ಮನಸ್ಸಿದ್ದರೆ ಕಸವನ್ನು ರಸವನ್ನಾಗಿಸಬಹುದು ಎಂಬುದಕ್ಕೆ ತಾಜಾ ಉದಾಹರಣೆ ಬೊಮ್ಮನಹಳ್ಳಿಯಲ್ಲಿಂದು ಉದ್ಘಾಟನೆಯಾದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ. ಕಸದ ಕ್ವಾರಿಯಾಗಿದ್ದ ಈ ಪ್ರದೇಶವನ್ನು ಅತ್ಯುತ್ತಮ ಕಲಾವಿದನಂತೆ ಕಲ್ಲಿನ ಪಾರ್ಕ್ ಹಾಗೂ ಅಂತರಾಷ್ಟ್ರೀಯ ಗುಣಮಟ್ಟದ ಬಾಸ್ಕೆಟ್ ಬಾಲ್ ಮತ್ತು ಸ್ಕೇಟಿಂಗ್ ಟ್ರ್ಯಾಕ್ ಹೊಂದಿರುವ ಕ್ರೀಡಾಂಗಣವಾಗಿ ಪರಿವರ್ತಿಸುವಲ್ಲಿ ಬೊಮ್ಮನಹಳ್ಳಿ ಬಿಬಿಎಂಪಿ ಸದಸ್ಯ ರಾಮ್ ಮೊಹನ ರಾಜು ಯಶಸ್ವಿಯಾಗಿದೆ.

        ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಕ್ರೀಡಾಂಗಣ ಉದ್ಘಾಟಿಸಿ ಮಾತನಾಡಿ, ಗಾಂಧಿ ಜಯಂತಿಯ ಸ್ವಚ್ಚತಾ ಹೀ ಅಭಿಯಾನದ ಅಂಗವಾಗಿ ಕಳೆದ ವರ್ಷ ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ರಾಮ್ ಮೋಹನ ರಾಜು, ಈ ಪ್ರದೇಶದಲ್ಲಿ ಈಗಾಗಲೇ ಅತ್ಯುತ್ತಮ ಸ್ಟೋನ್ ಪಾರ್ಕ್ ನಿರ್ಮಿಸಿದ್ದಾರೆ. ಇದೊಂದು ಸ್ತ್ಯುತ್ಯಾರ್ಹವಾದ ಕಾರ್ಯ ಎಂದರು.

       ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ ಬೊಮ್ಮನಹಳ್ಳಿ ವಾಡ್ರ್ನ್ ಕಾರ್ಪೋರೇಟರ್ ಮೋಹನ್ ರೆಡ್ಡಿ ಅವರ ಕನಸಿನ ಕೂಸು ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ. ಇದು ಇದುವರೆಗೆ ಕಸ ಸುರಿಯುವ ಸ್ಥಳವಾಗಿತ್ತು. ಸುತ್ತಮುತ್ತಲಿನ ಪ್ರದೇಶದ ಕಸವೆಲ್ಲಾ ಇಲ್ಲಿ ರಾಶಿ ಬೀಳುತ್ತಿತ್ತು. ಇದರಿಂದ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದನ್ನು ಗಮನಿಸಿ ಸಾರ್ವಜನಿಕರ ಅನುಕೂಲಕ್ಕೆ ಬಳಸುವಂತೆ ಮಾಡಿದ್ದಾರೆ ಎಂದರು.

       ಮೋಹನ್‍ರಾಜು ಮಾತನಾಡಿ, ಹಗಲು ರಾತ್ರಿ ಇಲ್ಲಿ ಬಾಸ್ಕೆಟ್ ಬಾಲ್ ಆಡಲು ಮತ್ತು ಸ್ಕೇಟಿಂಗ್ ಅಭ್ಯಾಸ ಮಾಡಲು ನಮ್ಮ ಕ್ಷೇತ್ರದ ಉತ್ಸಾಹಿ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದರ ಸದ್ಬಳಕೆ ಮಾಡಿಕೊಂಡು ನಮ್ಮ ಕ್ರೀಡಾಪಟುಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗುವಂತಾಗಬೇಕೆಂದು ಹಾರೈಸಿದರು.

      ಈ ಕ್ರೀಡಾಂಗಣ ನಿರ್ಮಾಣಕ್ಕೆ ಕೇಂದ್ರ ಸಚಿವರಾದ ಅನಂತಕುಮಾರ್, ಆರ್.ಅಶೋಕ ಮತ್ತು ಬೊಮ್ಮನಹಳ್ಳಿ ಶಾಸಕರಾದ ಎಂ.ಸತೀಶ್ ರೆಡ್ಡಿ ಅವರು ಧನಸಹಾಯ ಮಾಡಿದ್ದಾರೆಂದೂ ಅವರು ತಿಳಿಸಿದರು.

      ಕೇಂದ್ರ ಸಚಿವ ಅನಂತಕುಮಾರ್ ಅವರ ಸಹಾಯವನ್ನು ಇಲ್ಲಿ ವಿಶೇಷವಾಗಿ ಸ್ಮರಿಸಲೇಬೇಕು. ಏಕೆಂದರೆ ಈ ಯೋಜನೆ ಮನಸ್ಸಿನಲ್ಲಿ ಮೂಡಿದಾಗಿಂದಲೂ ಕೂಡಾ ಕೈ ಹಿಡಿದು ದಾರಿ ತೋರಿಸಿದ್ದಾರೆ. ಅಲ್ಲದೆ, ಕೇಂದ್ರ ಸರಕಾರದಿಂದ ಅಗತ್ಯ ಅನುದಾನವನ್ನೂ ಒದಗಿಸಿಕೊಟ್ಟಿದ್ದಾರ ಎಂದರು.

       ಬೊಮ್ಮನಹಳ್ಳಿ ವಾರ್ಡಿನ ದೇವರಚಿಕ್ಕನಹಳ್ಳಿಯಲ್ಲಿ ಬಾಸ್ಕೆಟ್ಬಾಲ್ ಕೋರ್ಟ್ ಮತ್ತು ಸ್ಕೇಟಿಂಗ್ ಟ್ರ್ಯಾಕ್ ಅನ್ನು ಒಳಗೊಂಡ ಸುಸಜ್ಜಿತವಾದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap