ಹರಿಹರ
ಫೆ.8 ಮತ್ತು 9ರಂದು ಒಂದು ಸಮುದಾಯಕ್ಕೆ ಸೀಮಿತವಾಗದೆ ಜಾತ್ಯಾತೀತಯಿಂದ ಎಲ್ಲಾ ಸಮುದಾಯದ ಮಠಾಧೀಶರು,ಹಾಗೂ ಎಲ್ಲಾ ವರ್ಗದ ಜನರು ಸಮಂಖದಲ್ಲಿ ವಾಲ್ಮೀಕಿ ಜಾತ್ರೆ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹರ್ಷಿ ವಾಲ್ಮೀಕಿ ಜಾತ್ರಾ ಸಮಿತಿಯ ಅಧ್ಯಕ್ಷ ಹಾಗೂ ಅರಣ್ಯ ಸಚಿವ ಸತೀಶ್ ಜಾರಕಿಹೋಳಿ ಹೇಳಿದರು.
ತಾಲ್ಲೂಕಿನ ರಾಜನಹಳ್ಳಿ ಗುರುಪೀಠದಲ್ಲಿ ನಡೆಯುತ್ತಿರುವ ಜಾತ್ರೆಯ ಪೂರ್ವ ಸಿದ್ದತೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಜಾತ್ರಾ ಮಹೋತ್ಸವವು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಜಾತ್ಯಾತೀತ ಕಾರ್ಯಕ್ರಮದಲ್ಲಿ ಎಲ್ಲಾ ವರ್ಗದ ಜನರು, ಎಲ್ಲಾ ವರ್ಗದ ಮಠಾಧೀಶರು ಸೇರಬೇಕೆಂಬ ಸದುದ್ದೇಶದಿಂದ ಶ್ರೀ ಪ್ರಸನ್ನನಾಂದ ಪುರಿ ಶ್ರೀಗಳು ರಾಜ್ಯಾಧ್ಯಂತ ಸಂಚರಿಸಿ ಸಮಾಜದ ಸಂಘಟನೆ ಹಾಗೂ ಜಾಗೃತಿಗಾಗಿ ಹಲವರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ ಎಂದರು.
ಹಲವಾರು ಸಮಾಜದ ಮಠಗಳಾದ ಮುರುಘಾ ಮಠ ಹಾಗೂ ತರಳಬಾಳು ಮಠದ ಶ್ರೀಗಳು ತಮ್ಮ ಸಮಾಜದ ಒಳತಿಗೆ, ಸಮುದಾಯದ ಸಂಘಟನೆಯ ಜೊತೆಗೆ ವಿವಿಧ ವಿಚಾರ ಗೊಷ್ಠಿಗಳನ್ನು ನಡೆಸುತ್ತಾ ಸಮಾಜಕ್ಕೆ ತಮ್ಮದೆಯಾದ ಕೊಡುಗೆ ನೀಡುತ್ತಿದೆ. ಅದೇ ರೀತಿ ವಾಲ್ಮೀಕಿ ಮಠವು ಕೂಡ ವಾಲ್ಮೀಕಿ ಜಾತ್ರೆಯಲ್ಲಿ ಮೊದಲ ದಿನವಾದ ಫೆ.8ರಂದು ಧಾರ್ಮಿಕ, ವೈಚಾರಿಕ, ಸಂಸ್ಕøತಿಕ, ಸಮಾಜಿಕ, ಶೈಕ್ಷಣಿಕ, ಕೌಟುಂಬಿಕ, ಆಧ್ಯತ್ಮಿಕ ವಿಚಾರ ಗೊಷ್ಠಿಗಳ ಜೊತೆಗೆ ನೂರಾರು ಸಾದಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.
ಎರಡನೇ ದಿನ ಫೆ.9ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ, ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರಾದ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜ್ಯದ ಆನೇಕ ಮಠಾಧೀಶರು ವಿವಿಧ ಪಕ್ಷದ ಸಚಿವರು, ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಪ್ರಸನ್ನಾನಂದ ಪುರಿ ಶ್ರೀ ಮಾತನಾಡಿ, ವಾಲ್ಮೀಕಿ ಗುರುಪೀಠವು ಫೆ.2. 1998ರಲ್ಲಿ ಸ್ಥಾಪನೆಯಾಯಿತು, ಅಂದಿನ ಲಿಂಗೈಕ ಶ್ರೀಗಳಾದ ಪುಣ್ಯನಂದ ಪುರಿ ಶ್ರೀಗಳು, ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಸಮಾಜವನ್ನು ಸಂಘಟಿಸಿ ಒಂದು ಧಾರ್ಮಿಕ ಕ್ಷೇತ್ರವನ್ನಾಗಿ ಈ ಮಠವನ್ನು ಕಟ್ಟಿ ಬೆಳೆಸುವ ಸಂದರ್ಭದಲ್ಲಿ ಆಕಸ್ಮಿಕ ರೈಲು ಅಪಘಾತದಲ್ಲಿ ಮರಣ ಹೊಂದಿದ ಶ್ರೀಗಳು ತದನಂತರ ಸಮಾಜ ಬಂಧುಗಳು ನಮ್ಮನ್ನು 2008 ಆಗಸ್ಟ್ 14 ರಂದು ನೂತನ ಪೀಠಾಧ್ಯಕ್ಷರಾಗಿ ಆಯ್ಕೆ ಮಾಡಿದರು. ಆಯ್ಕೆಯಾದ ನಂತರ ಸಮಾಜದ ಸಂಘಟನೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ ಎಂದರು.
ಈ ಜಾತ್ರೆಗೆ ರಾಜ್ಯದ ವಿವಿಧ ಸಮುದಯದ ಹಲವಾರು ಮಠಾಧೀಶರು ಪಾಲ್ಗೋಳ್ಳುವರು, ಇದೊಂದು ಪಕ್ಷಾತಿಕ, ಜಾತ್ಯಾತೀತ, ಕಾರ್ಯಕ್ರಮವಾಗಿದ್ದು ಎಲ್ಲಾ ಪಕ್ಷದ ಜನಪ್ರತಿನಿಧಿಗಳು, ಮುಖಂಡರನ್ನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಈ ಒಂದು ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ, ಈಗಾಗಲೇ ಮಠದ ಆವರಣದಲ್ಲಿ ಪೂರ್ವ ಸಿದ್ದತೆ ನಡೆಸಲಾಗುತ್ತಿದೆ ಎಂದರು.
ಶಾಸಕ ಬಿ. ಶ್ರೀರಾಮುಲು ಮಾತನಾಡಿ, ಸಮುದಾಯದ ಗುರುಗಳಾದ ಪ್ರಸನ್ನಾನಂದ ಶ್ರಿಗಳು ಬೆಳಗಾಂನಲ್ಲಿ ಸಭೆ ನಡೆಸಿ ಸಮುದಾಯದ ಸಂಘಟನೆಗಾಗಿ ಎಲ್ಲಾರೂ ಸೇರಿ ವಾಲ್ಮೀಕಿ ಜಾತ್ರೆ ಹಮ್ಮಿಕೊಳ್ಳಲು ಚಿಂತನೆ ನಡೆಸಿದಾಗ ಇದಕ್ಕೆ ಎಲ್ಲಾರೂ ಒಪ್ಪಿಗೆ ಸೂಚಿಸಿದಂತೆ ಈ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀಗಳ ಆಶಯದಂತೆ ಈ ಕಾರ್ಯಕ್ರಮವು ಕೇವಲ ಒಂದು ಸಮುದಾಯದ ಕಾರ್ಯಕ್ರಮವಾಗಬಾರದು ಇಲ್ಲಿ ಎಲ್ಲಾ ಸಮುದಾಯದ ಜನರು, ಜನಪ್ರತಿನಿಧಿಗಳು, ಮಠಾಧೀಶರು ಪಾಲ್ಗೋಳ್ಳುವಂತಹ ಕಾರ್ಯಕ್ರಮವಾಗಬೇಕೆಂಬ ಚಿಂತನೆ ಸಕಾರಗೊಳ್ಳುತ್ತಿದೆ. ಈ ಕಾರ್ಯಕ್ರಮದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಎಲ್ಲಾರೂ ಪಾಲ್ಗೋಂಡು ಯಶಸ್ವಿಗೊಳಿಸಬೇಕೆಂದು ಕೊರಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ತುಕರಾಂ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಹಾಗೂ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಸಂಯೋಜಕ ಟಿ.ಈಶ್ವರ್, ಮಠದ ಧರ್ಮದರ್ಶಿ ಓಬಳಪ್ಪ, ಕಾರ್ಯದರ್ಶಿ ಕೆ.ಬಿ. ಮಂಜುನಾಥ್, ಮಕ್ರಿ ಪಾಲಾಕ್ಷಪ್ಪ, ಹೆಚ್.ಹೆಚ್. ಬಸವರಾಜ್, ಕೆ.ಪಿ.ಪಾಲಯ್ಯ, ಜಿಗಳಿ ಆನಂದಪ್ಪ, ಸಣ್ಣ ತಮ್ಮಪ್ಪ ಬಾರ್ಕಿ, ಜಿಗಳಿ ರಂಗಪ್ಪ, ಡಿ.ಮಂಜುನಾಥ್, ರಾಜನಹಳ್ಳಿ ಭೀಮಣ್ಣ, ಆನಂದಪ್ಪ, ಡಿವೈಎಸ್‍ಪಿ ಮಂಜುನಾಥ್ ಗಂಗಲ್, ಸಿಪಿಐ ಗುರುನಾಥ್, ಪಿಎಸ್‍ಐ ರವಿಕುಮಾರ್, ಹಾಗೂ ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








