ವಾಸವಿ ಸಂಸ್ಥೆಯಲ್ಲಿ ವಾಲ್ಮೀಕಿ ಜಯಂತಿ

ಚಿತ್ರದುರ್ಗ;

        ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ಬುಧವಾರದಂದು ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸಜ್ಜನರ ಸಹವಾಸದಿಂದ ದುಷ್ಟನಾಗಿದ್ದ ಒಬ್ಬ ವ್ಯಕ್ತಿಯು ಮಹಾನ್ ವ್ಯಕ್ತಿಯಾಗಿ ಪರಿವರ್ತಿತನಾದ ಮಹರ್ಷಿ ವಾಲ್ಮೀಕಿಯ ವ್ಯಕ್ತಿತ್ವವನ್ನು ತಮ್ಮ ಭಾಷಣದ ಮೂಲಕ ಕನ್ನಡ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಕೆ.ಆರ್. ರಾಧಮಣಿಯವರು ತಿಳಿಸಿಕೊಟ್ಟರು

        ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಎಲ್.ಸುರೇಶ್ ರಾಜು ಮಾತನಾಡಿ, ಇಂದಿನ ಮಕ್ಕಳಲ್ಲಿ ವಾಲ್ಮೀಕಿಯಂತಹ ಮೇರು ವ್ಯಕ್ತಿತ್ವದ ಮಹಾಪುರುಷರ ಜೀವನ ಚರಿತ್ರೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು
ಮಹರ್ಷಿ ವಾಲ್ಮೀಕಿಯ ಜೀವನದಲ್ಲಿ ನಡೆದ ಮಹತ್ವದ ತಿರುವು ಪಡೆದ ಘಟನೆಗಳನ್ನು ತಿಳಿಸಿರುವುದರ ಮೂಲಕ ಸತತ ಪರಿಶ್ರಮದಿಂದ ಭಗವಂತನ ಕರುಣೆ ಪಡೆದು ಶ್ರೀ ರಾಮಾಯಣ ಮಹಾಕಾವ್ಯವನ್ನು ರಚಿಸಿ ಭಾರತೀಯರ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ತಿಳಿಸಿದರು .

       ಕಾರ್ಯಕಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಮಲಿಂಗ ಶ್ರೇಷ್ಠಿಯವರು ಹಾಗೂ ಶ್ರೀ ವಾಸವಿ ಸಮೂಹ ಶಾಲೆಗಳ ಮುಖ್ಯೋಪಾಧ್ಯಾಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

       ಈ ಶುಭ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿಯವರ ಚಿತ್ರಕ್ಕೆ ಗಣ್ಯರೆಲ್ಲರು ಪುಷ್ಪ ನಮನಗಳನ್ನು ಸಲ್ಲಿಸಿದರು. ಈ ಕಾರ್ಯಕ್ರಮವು ಸರ್ವರಲ್ಲಿ ಮಹರ್ಷಿ ವಾಲ್ಮೀಕಿಯವರ ವ್ಯಕ್ತಿತ್ವದ ಬಗ್ಗೆ ಅರಿವು ಮೂಡಿಸಿತು.

       ಈ ಕಾರ್ಯಕ್ರಮದಲ್ಲಿ ನೆರೆದ ಸಮಸ್ತರಿಗೂ ಆಂಗ್ಲ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿಯಾದ ಎಮ್.ಎಸ್. ಶಶಿಕಲಾರವರು ವಂದಿಸಿದರು .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap