ವಾಲ್ಮೀ ಕಿ ಮ್ಯೂಸಿಯಂ ಶ್ರೀಘ್ರದಲ್ಲಿ ಕಾರ್ಯಾರಂಭ : ಪ್ರಿಯಾಂಕ್ ಖರ್ಗೆ

ಬೆಂಗಳೂರು;

      ವಾಲ್ಮೀಕಿ ಅಭಿವೃದ್ದಿ ನಿಗಮದ‌ ಅಡಿಯಲ್ಲಿ ಬರುವ ಯೋಜನೆಗಳನ್ನು ಸಮರ್ಥವಾಗಿ ಜಾರಿಗೆ ತರುವ ಮೂಲಕ ಬುದ್ದ ಬಸವ ಹಾಗೂ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪಾಲಿಸಬೇಕು. ಈ ಜವಾಬ್ದಾರಿಯನ್ನು ನೂತನ‌ ಅಧ್ಯಕ್ಷ ಬಸನಗೌಡ ದದ್ದಲ್ ಸಮರ್ಥವಾಗಿ‌ ನಿಭಾಯಿಸುತ್ತಾರೆ ಎನ್ನವ ವಿಶ್ವಾಸವಿದೆ‌ ಎಂದು ಸಮಾಜಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು ,  ಬಸನಗೌಡ ದದ್ದಲ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

     ಸಮಾಜಕಲ್ಯಾಣ ಸಚಿವರಾಗಿ ತಾವು ನೂತನ‌ ಅಧ್ಯಕ್ಷರಿಗೆ ಸಂಪೂರ್ಣ ಸಹಕಾರ ನೀಡಿ ಸಮುದಾಯದ ಸಮಗ್ರ ಅಭ್ಯುದಯಕ್ಕೆ‌ ಸತತ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಮಹರ್ಷಿ ವಾಲ್ಮೀಕಿ ಅವರ ಜೀವನದ ಸಮಗ್ರ ಮಾಹಿತಿ ಒದಗಿಸಲು ಬೆಂಗಳೂರಿನಲ್ಲಿ ವಾಲ್ಮೀಕಿ ಮ್ಯೂಸಿಯಂ ಸ್ಥಾಪನೆಗೆ ಬೇಕಾಗುವ ಅಗತ್ಯ‌ ನಿವೇಶನ ಈಗಾಗಲೇ ಗುರುತಿಸಲಾಗಿದ್ದು ಮುಂಬರುವ ದಿನಗಳಲ್ಲಿ ಮ್ಯೂಸಿಯಂ ಕಾರ್ಯಾರಂಭ ಮಾಡಲಿದೆ ಎಂದರು.

      ಪದಗ್ರಹಣ ಮಾಡಿ ಮಾತನಾಡಿದ ದದ್ದಲ್, ತಮಗೆ ಪಕ್ಷ ಹಾಗೂ ಸರಕಾರ ಕೊಟ್ಟ ಜವಾಬ್ದಾರಿಯನ್ನು ನಿಭಾಯಿತ್ತೇನೆ ಎಂದು ಹೇಳಿದರು.ಸಮಾರಂಭದಲ್ಲಿ ಪಶುಸಂಗೋಪನೆ ಸಚಿವರಾದ ವೆಂಕಟರಾವ್ ನಾಡಗೌಡ,ಸಂಸದೀಯ ಕಾರ್ಯದರ್ಶಿ ಡಿ. ಎಸ್. ಹುಲಗೇರಿ, ಶಾಸಕರಾದ ಭೋಸ್ ರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link