ಚಳ್ಳಕೆರೆ
ಮಹರ್ಷಿ ಶ್ರೀವಾಲ್ಮೀಕಿಯವರ ನಾಮ ಬಲವೇ ಎಲ್ಲಾ ಸಮುದಾಯಗಳಿಗೂ ಹೊಸ ಶಕ್ತಿ ಹಾಗೂ ಚೈತನ್ಯವನ್ನು ನೀಡುತ್ತದೆ. ಇಂತಹ ಮಹಾನ್ ಪುರುಷನೊಬ್ಬ ಈ ನಾಡಿನಲ್ಲಿ ಜನಿಸಿದ್ದೇ ನಮ್ಮೆಲ್ಲರ ಪುಣ್ಯ. ಅವರ ಜಯಂತಿ ಉತ್ಸವ ಆಚರಣೆಗೆ ಗ್ರಾಮದ ಎಲ್ಲರೂ ಸಹ ಸಹಕಾರ ನೀಡಿರುವುದು ಸಂತಸ ವಿಷಯವೆಂದು ತಾಲ್ಲೂಕು ಪಂಚಾಯಿತಿ ಸದಸ್ಯೆ ಕುಮಾರಿ ಎನ್.ರಂಜಿತ ತಿಳಿಸಿದರು.
ಅವರು, ತಾಲ್ಲೂಕಿನ ದೇವರಮರಿಕುಂಟೆ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ವಡೇರಹಳ್ಳಿ ಗ್ರಾಮದಲ್ಲಿ ಅಲ್ಲಿನ ವಾಲ್ಮೀಕಿ ಸಮುದಾಯದ ಮುಖಂಡರು ವಾಲ್ಮೀಕಿ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ವಾಲ್ಮೀಕಿ ಭಾವಚಿತ್ರವನ್ನು ಅಲ್ಲಿನ ವೇದಾವತಿ ನದಿ ದಂಡದಲ್ಲಿ ಗಂಗಾ ಪೂಜೆಯೊಂದಿಗೆ ಪೂಜಿಸಿ ನಂತರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಾಲ್ಮೀಕಿ ಭಾವಚಿತ್ರದ ಮೆರವಣಿಯನ್ನು ಸಹ ನಡೆಸಿದರು.
ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದ ಎನ್.ರಂಜಿತ, ವಾಲ್ಮೀಕಿಯವರ ಆದರ್ಶಗಳು ಎಲ್ಲರ ಬದುಕಿಗೂ ಪ್ರೇರಣಾ ಶಕ್ತಿಯಾಗಿವೆ ಎಂದರು. ಮೆರವಣಿಗೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಗಿರಿಜಮ್ಮ ಹನುಮಂತಪ್ಪ, ಬಸವರಾಜು, ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಮಹಂತೇಶ್, ವೀರಣ್ಣ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.