ಪ್ರಸ್ತುತ ಮಾನವೀಯ ಮೌಲ್ಯ ಕಣ್ಮರೆ: ಡಾ.ಕುರ್ಕಿ

ದಾವಣಗೆರೆ:

    ಭಾರತ ಅನನ್ಯ ಸಂಸ್ಕøತಿ, ಪರಂಪರೆ ಹೊಂದಿದೆ. ಜಾಗತೀಕರಣದ ಅರ್ಥ ವ್ಯವಸ್ಥೆಯಲ್ಲಿ ಮಾರುಕಟ್ಟೆಯ ಸಂಸ್ಕøತಿ ಮಾರುಹೋಗಿದ್ದೇವೆ. ವಿಜ್ಞಾನ-ತಂತ್ರಜ್ಞಾನದ ಕೌಶಲ್ಯ ಇರುವವರು ಮಾರುಕಟ್ಟೆಯ ವಸ್ತುವಾಗಿ ಬದಲಾಗುತ್ತಿದ್ದಾರೆ. ಇದರಿಂದ ಮೌನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಎಚ್.ಎಸ್. ಮಂಜುನಾಥ್‍ಕುರ್ಕಿ ಬೇಸರ ವ್ಯಕ್ತಪಡಿಸಿದರು.

     ನಗರದ ಎಂಎಸ್‍ಬಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2018-19ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳ ಸಮಾರೋಪ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಅರ್ಥವಿಲ್ಲದ ಯಾತ್ರಿಕ ಬದುಕು ಸಾಗಿಸುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

    ಮನಸ್ಸು ದುರ್ಬಲವಾದರೆ ಸಮಸ್ಯೆಗಳು ಹಾಗೆಯೇ ಉಳಿಯುತ್ತವೆ. ಸಮತೋಲವಾಗಿದ್ದರೆ ಸವಾಲಾಗಿ ಕೈಗೊಳ್ಳಬಹುದು, ಬಲಿಷ್ಠವಾಗಿದ್ದರೆ ಸಮಸ್ಯೆಗಳನ್ನು ಸುಲಭವಾಗಿ ಎದುರಿಸಬಹುದು. ಹಾಗಾಗಿ ಇಂದಿನ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಸಕರಾತ್ಮಕ ಚಿಂತನೆಗಳನ್ನು ರೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

     ಇಂದು ವೇಗದ ತಾಂತ್ರಿಕ ಬದುಕಿನಲ್ಲಿ ಕೃತಕ ಬದುಕು ಸಾಗಿಸುವುದು ಹೆಚ್ಚಾಗಿದೆ. ಕೃತಕ ಸಂವಹನ ವಸ್ತುಗಳಾದ ಕಂಪ್ಯೂಟರ್, ಮೊಬೈಲ್ ಮುಂತಾದವುಗಳ ಬಳಕೆ ಅಗತ್ಯಕ್ಕಿಂತ ಅನಗತ್ಯಕ್ಕೆ ಹೆಚ್ಚು ಬಳಸುತ್ತಿರುವುದು ಯುವಸಮೂಹದಲ್ಲಿ ಹೆಚ್ಚು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ದೇಶವನ್ನು ಸಮೃದ್ಧವಾಗಿ ಕಟ್ಟಬೇಕಾದ ಯುವಜನತೆ ಜೀವನದಲ್ಲಿ ಯೋಗ್ಯ ನಿರ್ಧಾರ ಕೈಗೊಳ್ಳಿ. ಆಗ ಬದುಕು ಉಜ್ವಲವಾಗುತ್ತದೆ ಎಂದರು.

   ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಕೆ. ಹನುಮಂತಪ್ಪ ಮಾತನಾಡಿದರು.ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಮಾಗನೂರು ಸಂಗಮೇಶಗೌಡ್ರು, ಇಂದೂಧರ್ ನಿಶಾನಿಮಠ್, ಇ.ಬಸವರಾಜ್, ಪ್ರೊ.ಜೆ.ತಾರಾರಾಣಿ ಇತರರು ಉಪಸ್ಥಿತರಿದ್ದರು. ಟಿ. ಆರ್.ರಂಗಸ್ವಾಮಿ ಸ್ವಾಗತಿಸಿದರು. ವಿರೂಪಾಕ್ಷಪ್ಪ ನಿರೂಪಿಸಿದರು. ಸಂಪಿಗೆನಾರಾಯಣರಾವ್ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link