ಸುರತ್ಕಲ್:
ದೇಶದ ಕರಾವಳಿ ಮೇಲೆ ಹದ್ದಿನ ಕಣ್ಣಿಡಲು ಮತ್ತು ಗಸ್ತನ್ನು ಬಲಪಡಿಸುವುದಕ್ಕಾಗಿ ಅತ್ಯಾಧುನಿಕ ಸೌಲಭ್ಯವುಳ್ಳ ‘ ವರಾಹ’ ಹಡಗು ಕೋಸ್ಟ್ ಗಾರ್ಡ್ ಗೆ ಸೇರ್ಪಡೆಯಾಗಿದೆ.ಸಮುದ್ರ ಮಾರ್ಗದಲ್ಲಿ ಕಳ್ಳಸಾಗಾಣಿಕೆ, ತೈಲ ಸೋರಿಕೆ, ತಪಾಸಣೆ, ಭದ್ರತೆಯ ಕಣ್ಗಾವಲಿಗೆ ಈ ವರಾಹ ಹಡಗನ್ನು ಉಪಯೋಗಿಸಲಾಗುತ್ತದೆ. ಎಲ್ ಆಂಡ್ ಟಿ ಕಂಪೆನಿಯು ಈ ನೂತನ ಹಡಗನ್ನು ನಿರ್ಮಿಸಿದೆ.
ಈ ಹಡಗು104 ಮಂದಿಯನ್ನು ಹೊತ್ತೊಯುವ ಸಾಮರ್ಥ್ಯ ಹೊಂದಿದ್ದು ಈ ಹಡಗು ಪಶ್ಚಿಮ ಕೋಸ್ಟ್ ಗಾರ್ಡ್ ನ ಕಮಾಂಡಿಂಗ್ ಕೇಂದ್ರದಡಿ ಕಾರ್ಯ ನಿರ್ವಹಿಸಲಿದೆ. ತುರ್ತು ಸಂದರ್ಭಗಳಲ್ಲಿ 2 ಎಂಜಿನ್ ಗಳ ಹೆಲಿಕಾಪ್ಟರ್ ಹೊತ್ತೊಯ್ಯಬಲ್ಲ ಸಾಮರ್ಥ್ಯವುಳ್ಳ ‘ವರಾಹ’ 30 ಎಂ.ಎಂ ಗನ್, 12.7 ಎಂ.ಎಂ ಗನ್, ರಾಡಾರ್, ಸೆನ್ಸರ್, ಹೈಸ್ಪೀಡ್ ಬೋಟ್ ಗಳನ್ನು ಇದು ಹೊಂದಿದೆ.ಅತ್ಯಾಧುನಿಕ ವರಾಹ ಹಡಗಿನ ಆಗಮನದಿಂದ ಕರಾವಳಿ ರಕ್ಷಣೆಗೆ ಹೊಸ ಶಕ್ತಿ ತುಂಬಲಿದೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ