ಹೊಸದುರ್ಗ:
ಪಟ್ಟಣದ ಮಧ್ಯ ಭಾಗದಲ್ಲಿರುವ, ಅಶೋಕ ರಂಗ ಮಂದಿರಕ್ಕೆ ಅಂಟಿಕೊಂಡಿರುವ ಸಾರ್ವಜನಿಕ ಶೌಚಾಲಯ ಗಬ್ಬು ನಾರುವ ಸ್ಥಿತಿಗೆ ಪರಿಣಾಮಿಸಿದ್ದು ಈ ಶೌಚಾಲಯ ಈ ವರ್ಷವಾದರೂ ಸ್ವಚ್ಚವಾಗುವುದೇ ಎಂದು ಅನುಮಾನವಾಗಿದೆ.ನಮ್ಮ ತಾಲ್ಲೂಕು ರಾಜ್ಯಕ್ಕೆ ಸ್ಚಚ್ಚ ತಾಲ್ಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, ಆದರೆ ಅಶೋಕ ಮಂದಿರ ಶೌಚಾಲಯ ವರ್ಷಾನುಗಟ್ಟೆಲೆ ಸ್ವಚ್ಚತೆ ಭಾಗ್ಯ ಕಾಣದೇ ಗಬ್ಬು ನಾರುತ್ತಿರುವುದನ್ನು ಕಂಡರೆ ತಾಲ್ಲೂಕು ಪುರಸಭೆ ಆಡಳಿತ ನಿರ್ಲಕ್ಷತನ ಎದ್ದು ಕಾಣುತ್ತಿದೆ ಎಂಬುದು ಸಾರ್ವಜನಿಕರ ದೂರು.
ಶೌಚಾಲಯ ಅಕ್ಕ-ಪಕ್ಕ ಶಾಲೆ ಇದೆ, ತಿಂಗಳಿಗೆ ನೂರಾರು ಕಾರ್ಯಕ್ರಮಗಳು ನಡೆಯುವ ರಂಗ ಮಂದಿರವಿದೆ.
ಶಾಲೆಗೆ ಹೊಂದಿಕೊಂಡಂತೆ ಅಡುಗೆ ಕೋಣೆಯಲ್ಲಿ ಮಕ್ಕಳು ಪ್ರತಿನಿತ್ಯ ಮಕ್ಕಳು ಊಟೋಪಾಚಾರವನ್ನು ಮಾಡುತ್ತಿರುತ್ತಾರೆ. ಗಬ್ಬು ನಾರುವ ಶೌಚಾಲಯದ ಮಧ್ಯೆ ದುರ್ವಾಸನೆ ಬೀರಿ ಮಕ್ಕಳಿಗೆ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳು ತಗುಲಿ ಆಸ್ಪತ್ರೆ ಸೇರುವುದು ಹೆಚ್ಚಾಗಿದೆ.
ಸ್ವಚ್ಚ ಭಾರತದ ಬಗ್ಗೆ ದಿನನಿತ್ಯ ಪ್ರಚಾರಾಂದೋಲನ ನಡೆಸುವ ಪುರಸಭೆ, ಗಬ್ಬು ನಾರುತ್ತಿರುವ ಈ ಶೌಚಾಲಯದ ಬಗ್ಗೆ ಏಕೆ ತಲೆಕೆಡಿಸಿಕೊಂಡಿಲ್ಲ ಎಂಬುದೇ ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ಬಗ್ಗೆ ನಿರ್ಲಕ್ಷ್ಯ ತೋರುವ ಪುರಸಭೆ ಆಡಳಿತಕ್ಕೆ ಸಾಕಷ್ಟು ಬಾರಿ ಧ್ವನಿ ಎತ್ತಿದರೆ ಯಾರೂ ಕೂಡ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಹೇಳುತ್ತಾರೆ ರೈತ ಮುಖಂಡ ಕರಿಸಿದ್ದಯ್ಯ.
ಇಲ್ಲಿ ಮೂತ್ರಿಸಲು ಯೋಗ್ಯವಲ್ಲದಂತಾಗಿರುವ ಶೌಚಾಲಯ ದುಸ್ಥಿತಿ ಕಂಡು ದುರ್ವಾಸನೆ ಬೀರುವ ವಾಸನೆಯಲ್ಲಿ ಅಕ್ಕ-ಪಕ್ಕದ ಅಂಗಡಿ ಮಾಲೀಕರು ರೋಸಿ ಹೋಗಿದ್ದಾರೆ. ಮೂತ್ರ ಮಾಡಲು ಬರುವವರು ಅಸಹ್ಯ ಪಟ್ಟುಕೊಂಡು ಇಲ್ಲಿ ವಿಸರ್ಜನೆ ಮಾಡದೇ ಹಿಂತಿರುಗುವ ಸ್ಥಿತಿ ಕಾಣಬಹುದು. ಈ ವರದಿ ನೋಡಿ ಬಳಿಕ ಇನ್ನಾದರೂ ಎಚ್ಚೆತ್ತುಕೊಂಡು ಪುರಸಭೆ ಆಡಳಿತ ಸ್ವಚ್ಚತೆ ಮಾಡಿಸುವುದೇ ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
