ವರುಣನ ಆರ್ಭಟಕ್ಕೆ ತತ್ತರಿಸಿದ ತಾಲ್ಲೂಕಿನ ಗ್ರಾಮಗಳು …!!!

ಗುಬ್ಬಿ

      ಕಳೆದ ರಾತ್ರಿ ತಾಲ್ಲೂಕಿನ ಸಿ.ಎಸ್.ಪುರ, ಕಡಬ, ಕಲ್ಲೂರು ಭಾಗದಲ್ಲಿ ಬೀಸಿದ ಬಿರುಗಾಳಿ ಮಳೆಗೆ ಅಡಿಕೆ, ಬಾಳೆ ಗಿಡಗಳು ಸೇರಿದಂತೆ ರೈತರ ತೋಟದ ಮನೆಗಳ ಮೇಲ್ಚಾವಣಿ ಉರುಳಿ ಬಿದ್ದಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಹಲವು ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದೆ ಅಂತರ್ಜಲ ಕುಸಿತಗೊಂಡಿದ್ದು ಕೊಳವೆ ಬಾವಿಗಳಲ್ಲಿ ಬರುವ ಅಷ್ಟಿಷ್ಟು ನೀರನ್ನು ಬಳಸಿಕೊಂಡು ರೈತರ ಜೀವನಾಧಾರವಾಗಿದ್ದ ಅಡಿಕೆ, ತೆಂಗು, ಬಾಳೆ ಬೆಳೆಗಳನ್ನು ಬೆಳೆದಿದ್ದರು ಆದರೆ ಕಳೆದ ರಾತ್ರಿ ಬೀಸಿದ ಬಿರುಗಾಳಿ ಸಹಿತ ಮಳೆಗೆ ಬಹುತೇಕ ರೈತರ ತೋಟಗಳು ಹಾಳಾಗಿವೆ.

       ತಾಲ್ಲೂಕಿನ ಎಸ್.ಕೊಡಗೀಹಳ್ಳಿ, ಸಿ.ಎಸ್.ಪುರ, ಕಲ್ಲೂರು, ಕೆ.ಕಲ್ಲಹಳ್ಳಿ ಕಲ್ಲೂರು ಕ್ರಾಸ್ ಸೇರಿದಂತೆ ಕಡಬ ಸುತ್ತ ಮುತ್ತಲ ಪ್ರದೇಶದಲ್ಲಿ ಬಿರುಗಾಳಿ ಮಳೆಯಾಗಿದ್ದು ಎತ್ರರಕ್ಕೆ ಬೆಳೆದಿದ್ದ ಅಡಿಕೆ ಮರಗಳು, ಗೊನೆ ಭರಿತ ಬಳೆ ಗಿಡಗಳು ಉರುಳಿ ಬಿದ್ದಿವೆ. ಕಸಬ ಹೋಬಳಿ ವ್ಯಾಪ್ತಿಯ ಹೊಸಪಾಳ್ಯ ಗ್ರಾಮದ ರೈತ ರುದ್ರಯ್ಯ ಅವರು ನಿರ್ಮಿಸಿದ್ದ ಶೀಟಿನ ಮನೆಯ ಶೀಟುಗಳು ಬಿರುಗಾಳಿಗೆ ಹಾರಿಹೋಗಿವೆ. ಈಭಾಗದಲ್ಲಿ ಸಾಕಷ್ಟು ಅಡಿಕೆ, ತೆಂಗು ಮತ್ತು ಬಾಳೆ ಗಿಡಗಳು ಧರೆಗುರುಳಿವೆ. ಇತ್ತೀಚಗೆ ಅಳವಢಿಸಿದ್ದ ವಿದ್ಯುತ್ ಪರಿವರ್ತಕವೂ ಸಹ ನೆಲಕ್ಕುರುಳಿದ್ದು ಇಡಿ ರಾತ್ರಿ ಕತ್ತಲೆಯ ಕೂಪದಲ್ಲಿ ಕಲಹರಣ ಮಾಡುವಂತಾಗಿದೆ.

      ಬಿರುಗಾಳಿಯ ರಭಸಕ್ಕೆ ಮಾವಿನ ತೋಟಗಳಲ್ಲಿ ಮಾವಿನ ಕಾಯಿಗಳು ಉದುರಿ ಬಿದ್ದಿದ್ದು ಕೆಲ ತೆಂಗಿನ ತೋಟಗಳಲ್ಲಿ ತೆಂಗಿನ ಕಾಯಿ ಗೊನೆಗಳು ಉರುಳಿ ಬಿದ್ದಿವೆ. ಉತ್ತಮವಾಗಿ ಫಸಲು ಬಿಡುತ್ತಿದ್ದ ತೆಂಗು, ಅಡಿಕೆ, ಬಾಳೆ ಸೇರಿದಂತೆ ಇತರೆ ಬೆಳೆಗಳು ಬಿರುಗಾಳಿ ಮಳೆಯಿಂದ ನೆಲ್ಲಕ್ಕುರುಳಿದ್ದು ರೈತರು ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ.

      ಕಳೆದ ರಾತ್ರಿ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು ನೀರಿಲ್ಲದೆ ಒಣಗುತ್ತಿದ್ದ ಬೆಳೆಗಳಿಗೆ ಅನುಕೂಲವಾಗಿದೆ. ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ದೊರೆಯದಿರುವುದು ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರು ಬಾರದಿರುವುದು ಬರುವ ಅಷ್ಟಿಷ್ಟು ನೀರನ್ನು ಮೇಲೆತ್ತಲು ಸಮರ್ಪಕವಾಗಿ ವಿದ್ಯುತ್ ನೀಡದಿರುವುದು ಇದೀಗ ಬಿರುಗಾಳಿಗೆ ತೋಟಗಳು ನೆಲಕಚ್ಚಿರುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಗಳು ರೈತರ ಸಮಸ್ಯೆಗೆ ಸ್ಪಮಧಿಸಬೇಕೆಂದು ರೈತರು ಮನವಿ ಮಾಡಿಕೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link